Covid 19 Karnataka Update: ಕರ್ನಾಟಕದ 1074 ಜನರಲ್ಲಿ ಕೊರೊನಾ ಸೋಂಕು ಪತ್ತೆ, 1136 ಮಂದಿ ಗುಣಮುಖ
ಬೆಂಗಳೂರು ನಗರದಲ್ಲಿ ಇಂದು ಒಟ್ಟು 343 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 251 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಗುರುವಾರ ಒಟ್ಟು 1074 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. 1136 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 0.63 ಇದ್ದರೆ, ಸಾವಿನ ಸರಾಸರಿ ಪ್ರಮಾಣ ಶೇ 0.37 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,59,164 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,04,683 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 37,462 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ ಇಂದು ಒಟ್ಟು 343 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 251 ಮಂದಿ ಚೇತರಿಸಿಕೊಂಡಿದ್ದಾರೆ. ಮೂವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಈವರೆಗೆ 12,40,653 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,17,401 ಮಂದಿ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಪ್ರಸ್ತುತ 7,208 ಸಕ್ರಿಯ ಪ್ರಕರಣಗಳಿವೆ. ಈವರೆಗೆ 16,043 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಬೆಂಗಳೂರು ನಗರ 343, ದಕ್ಷಿಣ ಕನ್ನಡ 176, ಉಡುಪಿ 126, ಹಾಸನ 81, ಚಿಕ್ಕಮಗಳೂರು 68, ಕೊಡಗು 59, ಮೈಸೂರು 48, ಶಿವಮೊಗ್ಗ 39, ಉತ್ತರ ಕನ್ನಡ 25, ತುಮಕೂರು 22, ಮಂಡ್ಯ 15, ಕೋಲಾರ 12, ಬೆಳಗಾವಿ, ಚಿತ್ರದುರ್ಗ 8, ಧಾರವಾಡ, ಕಲಬುರಗಿ 7, ರಾಯಚೂರು 6, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ 5, ದಾವಣಗೆರೆ 3, ಚಾಮರಾಜನಗರ, ರಾಮನಗರ 2, ವಿಜಯಪುರ, ಯಾದಗಿರಿ 1.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? ಬೆಂಗಳೂರು ನಗರ 3, ಹಾಸನ 1.
ಇಂದಿನ 09/09/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/rdUuOz3Xra @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/2iVZXd7fW9
— K’taka Health Dept (@DHFWKA) September 9, 2021
(Karnataka covid numbers 1074 people infected 1136 discharged on september 9)
ಇದನ್ನೂ ಓದಿ: ಕೊವಿಡ್ ಸಾವು ನಿಯಂತ್ರಿಸುವಲ್ಲಿ ಲಸಿಕೆಯ ಮೊದಲ ಡೋಸ್ ಶೇ 96.6 ಮತ್ತು 2ನೇ ಡೋಸ್ ಶೇ 97.5 ಪರಿಣಾಮಕಾರಿ: ಕೇಂದ್ರ
ಇದನ್ನೂ ಓದಿ: Coronavirus cases in India ಭಾರತದಲ್ಲಿ 43,263 ಹೊಸ ಕೊವಿಡ್ ಪ್ರಕರಣ ಪತ್ತೆ, 338 ಮಂದಿ ಸಾವು