ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ನರ್ತನ; 30 ದಿನಗಳಲ್ಲಿ ದಾಖಲೆ ಮಟ್ಟದ ಪ್ರಕರಣ ಪತ್ತೆ

| Updated By: ಆಯೇಷಾ ಬಾನು

Updated on: Dec 10, 2023 | 7:55 AM

ಸಿಲಿಕಾನ್ ಸಿಟಿಯಲ್ಲಿ ಕಳೆದೊಂದು ತಿಂಗಳಿನಿಂದ ಡೆಂಗ್ಯೂ ಆರ್ಭಟ ಹೆಚ್ಚಾಗಿದೆ. ಸಿಟಿಯಲ್ಲಿನ ವಾತಾವರಣ ಬದಲಾವಣೆ ಕೂಡಾ ಡೆಂಗ್ಯೂ ಜ್ವರ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಮೈ ಕೈ ನೋವು, ಜ್ವರ ಹೆಚ್ಚಾಗಿದೆ. ಸಿಕ್ಕಾಪಟ್ಟೆ ಕೆಮ್ಮು, ಜ್ವರ, ಮೈಕೈನೋವು ಅಂತ ಜನ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಜಸ್ಟ್ 30 ದಿನಗಳ ಅಂತರದಲ್ಲಿ ದಾಖಲೆಯ ಡೆಂಗ್ಯೂ ಕೇಸ್ ಪತ್ತೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ನರ್ತನ; 30 ದಿನಗಳಲ್ಲಿ ದಾಖಲೆ ಮಟ್ಟದ ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಡಿ.10: ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳು (Bengaluru Government Hospital) ಸದ್ಯ ಸಖತ್ ರಶ್ ಆಗಿವೆ. ಎಲ್ಲ ವಯಸ್ಸಿನವರಲ್ಲಿಯೂ ಡೆಂಗ್ಯೂ (Dengue) ಜ್ವರ ಕಾಡುತ್ತಿದೆ. ಮಕ್ಕಳನ್ನು ಹೊತ್ತು ಪೋಷಕರು ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಿಂದ ನಗರದಲ್ಲಿ ವೈರಲ್ ಫೀವರ್ ಹೆಚ್ಚಾಗಿದೆ. ಜ್ವರ, ಶೀತ, ಟೈಫಡ್ ಪ್ರಕರಣಗಳ ಜೊತೆ ಡೆಂಗ್ಯೂ ಪ್ರಕರಣಗಳು ಡಬ್ಬಲ್ ಆಗಿವೆ. ಹಿಂದಿನ ವರ್ಷಕ್ಕೆ ಕಂಪೇರ್ ಮಾಡಿದ್ರೆ ಈ ವರ್ಷ ಡೆಂಗ್ಯೂ ಲಕ್ಷಣಗಳು ಚೇಂಜ್ ಆಗಿವೆ. ಜ್ವರ ಬಿಟ್ಟು ಮತ್ತೆ 3 ದಿನಕ್ಕೆ ಜ್ವರ ಕಾಣಿಸಿಕೊಳ್ತಿದೆ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸಿರುವ ವೈದ್ಯರು, ಜ್ವರ ಎಂದು ಬರುವ ಮಕ್ಕಳಿಗೆ ಡೆಂಗ್ಯೂ ಪರೀಕ್ಷೆ ಮಾಡುತ್ತಿದ್ದಾರೆ.

ಬೆಂಗಳೂರಿಗೆ ಡೆಡ್ಲಿ ಡೆಂಗ್ಯೂ ಭೀತಿ ಜೋರಾಗಿದೆ. ರಾಜಧಾನಿಯಲ್ಲಿ ತಗ್ಗದ ಡೆಂಗ್ಯೂ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ಕಳೆದೊಂದು ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲೆಯ ಕೇಸ್ ಪತ್ತೆಯಾಗಿವೆ. ಕಳೆದ 30 ದಿನಗಳಲ್ಲಿ ರಾಜಧಾನಿಯಲ್ಲಿ ಬರೊಬ್ಬರಿ 2970 ಹೊಸ ಡೆಂಗ್ಯೂ ಕೇಸ್ ಪತ್ತೆಯಾಗಿದೆ. ಕಳೆದ ತಿಂಗಳು ಕೊಂಚ ಇಳಿಕೆಯತ್ತ ಸಾಗಿದ್ದ ಹೆಮ್ಮಾರಿ ಡೆಂಗ್ಯೂ ಈಗ ಮತ್ತೆ ಸೈಲೆಂಟ್ ಆಗಿ ಏರಿಕೆಯತ್ತ ಸಾಗಿದೆ. ರಾಜಧಾನಿಯಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ದಾಖಲೆಯ 7673 ಹೊಸ ಡೆಂಗ್ಯೂ ಕೇಸ್ ಕಾಣಿಸಿಕೊಂಡಿದ್ರೆ ಕಳೆದೊಂದೇ ತಿಂಗಳಲ್ಲಿ 2970 ಕೇಸ್ ಪತ್ತೆಯಾಗಿದೆ. ಇದು ಆರೋಗ್ಯ ಇಲಾಖೆಯ ತಲೆಬಿಸಿಗೆ ಕಾರಣವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನವರಿಯಿಂದ ಇಲ್ಲಿಯವರೆಗೆ 7228 ಕೇಸ್ ದಾಖಲಾಗಿದ್ರೆ ಕೇವಲ ಬೆಂಗಳೂರಿನಲ್ಲಿ 7673 ಡೆಂಗ್ಯೂ ಕೇಸ್ ಪತ್ತೆಯಾಗಿವೆ. ರಾಜಧಾನಿಯಲ್ಲಿ ನಿಲ್ಲದ ಡೆಂಗ್ಯೂ ಜ್ವರದ ಹಾವಳಿಯಿಂದ ಜನರು ಫುಲ್ ಸುಸ್ತಾಗಿದ್ದು ವೈದ್ಯರು ನಿರ್ಲಕ್ಷ್ಯವಹಿಸದಂತೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Pregnant Women: ಡೆಂಘಿ ಜ್ವರ ಗರ್ಭಿಣಿ ಹಾಗೂ ಭ್ರೂಣದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಕಳೆದ ಒಂದು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಗರಿಷ್ಠ ಡೆಂಗ್ಯೂ ದಾಖಲಾಗಿದೆ. ಕಳೆದ ಮೂರು ವರ್ಷಗಳಲ್ಲಿಯೇ ಇದು ದಾಖಲೆ ಪ್ರಮಾಣದಲ್ಲಿ ಡೆಂಗ್ಯೂ ಕೇಸ್ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಜನವರಿಯಿಂದ ನಿನ್ನೆಯವರೆಗೆ 15000 ಸಾವಿರ ಗಡಿ ದಾಟಿರುವ ಡೆಂಗ್ಯೂ ಪಾಸಿಟಿವ್ ಕೇಸ್ ಸಾಕಷ್ಟು ಆತಂಕ ಹೆಚ್ಚಿಸಿದೆ. ಹೀಗಾಗಿ ವೈದ್ಯರು ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ ಎಂದಿದ್ದಾರೆ.

ಒಟ್ನಲ್ಲಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ರಾಜಧಾನಿಯ ಹವಾಮಾನ ವೈರಲ್ ಫಿವರ್, ಡೆಂಗ್ಯೂ ಜ್ವರ ಹೆಚ್ಚಾಗಲು ಕಾರಣವಾಗ್ತೀದೆ. ಹೀಗಾಗಿ ಜನರು ಮನೆ ಸುತ್ತ ಸ್ವಚ್ಛತೆ ಕಾಪಾಡುವುದು ಈ ಹೊತ್ತಿನಲ್ಲಿ ಅಗತ್ಯ. ಮಳೆ ನೀರು ನಿಲ್ಲದಂತೆ ಜಾಗೃತೆ ವಹಿಸಬೇಕು. ಆದಷ್ಟು ಮನೆಯಲ್ಲಿ ಮಲಗುವ ಹೊತ್ತಿನಲ್ಲಿ ಸೊಳ್ಳೆ ಪರದೆ ಹಾಕುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಅಗತ್ಯ ಎಂಬ ಸಲಹೆಯನ್ನು ವೈದ್ಯರು ನೀಡಿದ್ದಾರೆ. ಜ್ವರ ಬಂದು ಮೂರನೇ ದಿನಕ್ಕೆ ಬಿಟ್ಟು ಮತ್ತೆ ಜ್ವರ ಮರುಕಳಿಸಿದರೆ, ಇದರ ಜೊತೆ ವಾಂತಿ ಇದ್ದರೆ ಡೆಂಗ್ಯೂ ಟೆಸ್ಟ್ ಮಾಡಿಸುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ