ಬೆಂಗಳೂರು: ನಾಳೆ (ಆಗಸ್ಟ್ 18, ಬುಧವಾರ) ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2019-20ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಬಸವಲಿಂಗ ಪಟ್ಟದೇವರು, ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ 15 ಗಣ್ಯರಿಗೆ ಕನ್ನಡ, ಸಂಸ್ಕೃತಿ ಇಲಾಖೆಯಿಂದ ಪ್ರಶಸ್ತಿ ನೀಡಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 2019-20ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ ಆಯ್ಕೆಯಾದ ಗಣ್ಯರಿಗೆ ನಾಳೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ 15 ಗಣ್ಯರಿಗೆ ಪ್ರಶಸ್ತಿ ಪ್ರದಾನ
1. ಬಸವ ರಾಷ್ಟ್ರೀಯ ಪ್ರಶಸ್ತಿ- ಬಸವಲಿಂಗ ಪಟ್ಟದೇವರು
2. ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ – ಡಾ. ಪಂ. ನರಸಿಂಹಲು ವಡವಾಟಿ
3. ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ – ಡಾ. ವೀರೇಂದ್ರ ಹೆಗ್ಗಡೆ
4. ನಾಟ್ಯರಾಣಿ ಶಾಂತಲಾ ಪ್ರಶಸ್ತಿ – ಶ್ರೀಮತಿ ಬಿ.ಕೆ. ವಸಂತಲಕ್ಷ್ಮಿ
5. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ – ಶ್ರೀ ಚಿ.ಸು. ಕೃಷ್ಣ ಶೆಟ್ಟಿ
6. ಜಕಣಾಚಾರಿ ಪ್ರಶಸ್ತಿ – ಶ್ರೀ ಬಿ.ಎಸ್. ಯೋಗಿರಾಜ
7. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ – ಶ್ರೀ ಮದಿರ ಮರಿಸ್ವಾಮಿ
8. ಜಾನಪದಶ್ರೀ ಪ್ರಶಸ್ತಿ – ಶ್ರೀ ಬಿ, ಟಾಕಪ್ಪ ಕಣ್ಣೂರು
9. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ – ಶ್ರೀ ರಾ.ನಂ. ಚಂದ್ರಶೇಖರ
10. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – ಡಾ| ಚೂಡಾಮಣಿ ನಂದಗೋಪಾಲ್
11, ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ – ಪ್ರೊ. ಸಿದ್ದಣ್ಣ ಉಪ್ಪಾಳ
12. ಅಕ್ಕಮಹಾದೇವಿ ಪ್ರಶಸ್ತಿ – ಡಾ. ಜಯಶ್ರೀ ದಂಡೆ
13. ನಿಜಗುಣ ಪುರಂದರ ಪ್ರಶಸ್ತಿ – ಶ್ರೀಮತಿ ಗೌರಿ ಕುಪ್ಪುಸ್ವಾಮಿ
14, ನಂತಶಿಶುನಾಳ ಶರೀಫ ಪ್ರಶಸ್ತಿ – ಪಂ. ವಾದಿರಾಜ ನಿಂಬರಗಿ
15. ಕುಮಾರವ್ಯಾನ ಪ್ರಶಸ್ತಿ – ಶ್ರೀಮತಿ ಗಂಗಮ್ಮ ಕೇಶವಮೂರ್ತಿ
ಇದನ್ನೂ ಓದಿ:
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ: ಧಾರವಾಡದಲ್ಲಿ 29 ಮಕ್ಕಳಿಗೆ ಬಾಲ ಗೌರವ ಪ್ರಶಸ್ತಿ ಪ್ರದಾನ
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ವಿಳಂಬ; ಕ್ರೀಡಾ ಸಚಿವಾಲಯದ ಈ ನಿರ್ಧಾರಕ್ಕೆ ಕಾರಣವೇನು?
Published On - 12:57 pm, Tue, 17 August 21