ಬೆಂಗಳೂರಿನಲ್ಲಿ ಕಾಂಪೌಂಡ್ ಹಾರಿ ಎಸ್ಕೇಪ್ ಆದ 5 ವಿದೇಶಿ ಮಹಿಳೆಯರು! ಪೊಲೀಸರಿಂದ ತೀವ್ರ ಹುಡುಕಾಟ
ಮಧ್ಯರಾತ್ರಿ ಎರಡೂವರೆಯಲ್ಲಿ ಕುಡಿಯಲು ನೀರು ಕೇಳಿದ್ದ ವಿದೇಶಿ ಮಹಿಳೆಯರು ಭದ್ರತಾ ಸಿಬ್ಬಂದಿಯ ಅಟೆಂಶನ್ ಡೈವರ್ಟ್ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಬಾಗಿಲು ತೆಗೆದು ಕುಡಿಯಲು ನೀರು ಕೊಟ್ಟಿದ್ದರು. ಇದೇ ಸಮಯ ಉಪಯೋಗಿಸಿಕೊಂಡು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ.
ಬೆಂಗಳೂರು: ಕಾಂಪೌಂಡ್ ಹಾರಿ ಎಸ್ಕೇಪ್ ಆದ ಐವರು ವಿದೇಶಿ ಮಹಿಳೆಯರು. ಇದೇನು ಅಫ್ಘಾನಿಸ್ತಾನದಲ್ಲಿ ನಡೆದಿರುವ ಘಟನೆ ಅಲ್ಲ! ಇಲ್ಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಪೊಲೀಸರು ಕಾನೂನುಬಾಹಿರವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕೆಲ ವಿದೇಶಿ ಮಹಿಳೆಯರನ್ನು ಮಹಿಳಾ ಸ್ಟೇಟ್ ಹೋಂ ನಲ್ಲಿ ಇರಿಸಿದ್ದರು. ಆದರೆ ಐವರು ವಿದೇಶಿ ಮಹಿಳೆಯರು ಇದೀಗ ಮಹಿಳಾ ಸ್ಟೇಟ್ ಹೋಮ್ ನಿಂದ ಎಸ್ಕೇಪ್ ಆಗಿದ್ದಾರೆ.
ಎಸ್ಕೇಪ್ ಆಗಿರುವ ವಿದೇಶಿ ಮಹಿಳೆಯರಿಗಾಗಿ ಪೊಲೀಸರ ತೀವ್ರ ಹುಡುಕಾಟ ವೀಸಾ – ಪಾಸ್ ಪೋರ್ಟ್ ಮುಗಿದಿದ್ದ ಕಾರಣ ಮೂವರು ಕಾಂಗೋ ಮತ್ತು ಇಬ್ಬರು ನೈಜಿರೀಯನ್ ಮಹಿಳೆಯರನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ನಿನ್ನೆ ತಡರಾತ್ರಿ ಪೊಲೀಸರ ಕಣ್ತಪ್ಪಿಸಿ ಐವರು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಈ ಘಟನೆ ನಡೆದಿದೆ.
ಆದರೆ ಕಾಂಪೌಂಡ್ ಹಾರುವ ವೇಳೆ ಓರ್ವ ಮಹಿಳೆಗೆ ಕಾಲು ಮುರಿದಿದೆ. ಆ ಮಹಿಳೆಯನ್ನು ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಎಸ್ಕೇಪ್ ಆಗಿರುವ ಉಳಿದ ವಿದೇಶಿ ಮಹಿಳೆಯರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಪೂರ್ವ ವಿಭಾಗದ ಪೊಲೀಸರು ಒಟ್ಟು 13 ಜನ ವಿದೇಶಿಯರನ್ನ ವಶಕ್ಕೆ ಪಡೆದಿದ್ದರು. ಮೂರು ಪಾಳಿಯಲ್ಲಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಭದ್ರತೆಯ ನಡುವೆಯೂ ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮಧ್ಯರಾತ್ರಿ ಎರಡೂವರೆಯಲ್ಲಿ ಕುಡಿಯಲು ನೀರು ಕೇಳಿದ್ದ ವಿದೇಶಿ ಮಹಿಳೆಯರು ಭದ್ರತಾ ಸಿಬ್ಬಂದಿಯ ಅಟೆಂಶನ್ ಡೈವರ್ಟ್ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಬಾಗಿಲು ತೆಗೆದು ಕುಡಿಯಲು ನೀರು ಕೊಟ್ಟಿದ್ದರು. ಇದೇ ಸಮಯ ಉಪಯೋಗಿಸಿಕೊಂಡು ವಿದೇಶಿ ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಸದ್ಯ ವಿದೇಶಿ ಮಹಿಳೆಯರಿಗಾಗಿ ತಲಾಶ್ ನಡೆದಿದೆ.
ಮಹಿಳಾ ಸ್ಟೇಟ್ ಹೋಮ್ ನಲ್ಲಿ ದುಷ್ಚಟಗಳ ವಿದೇಶಿ ಮಹಿಳೆಯರ ರಂಪಾಟ: ಮಹಿಳಾ ಸ್ಟೇಟ್ ಹೋಮ್ ನಲ್ಲಿ ರಾತ್ರಿಯೆಲ್ಲಾ ವಿದೇಶಿ ಮಹಿಳೆಯರ ರಂಪಾಟ ಮಿತಿಮೀರಿದೆ. ಒಂದೇ ವಾರದಲ್ಲಿ ಮೂರು ಬಾರೀ ಗಲಾಟೆ ಮಾಡಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ವಿದೇಶಿ ಪ್ರಜೆಗಳ ಮೊಂಡಾಟಕ್ಕೆ ಬೇಸತ್ತಿದ್ದಾರೆ. ವಿದೇಶಿ ಪ್ರಜೆಗಳು ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದರು. ಪೊಲೀಸರ ವಶಕ್ಕೆ ಬರುತ್ತಿದ್ದಂತೆ ಕಳ್ಳಾಟ ಶುರು ಮಾಡುತ್ತಾರೆ.
ತಮ್ಮ ಹವ್ಯಾಸಗಳನ್ನು ಬಿಟ್ಟು ಇರಲಾಗದೇ ಕಳ್ಳಾಟ ಆಡುತ್ತಾರೆ. ದುಷ್ಚಟಗಳ ಅಡಿಕ್ಷನ್ ಹಿನ್ನೆಲೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಗಲಾಟೆ ಮಾಡುತ್ತಾರೆ. ಈ ಹಿನ್ನೆಲೆ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಯ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿದೆ.
(Five foreign women escape from women center in siddapur police station limits bangalore)
Published On - 10:26 am, Tue, 17 August 21