AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಂಗೇರಿ ಮಾರ್ಗದ ಮೆಟ್ರೋಗೆ ಸಿಕ್ಕಿತು ಸೇಫ್ಟಿ ಸರ್ಟಿಫಿಕೇಟ್: ಮುಂದಿನ ವಾರವೇ ಉದ್ಘಾಟನಾ ದಿನ ನಿಗದಿ ಸಾಧ್ಯತೆ

ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೆ ನಿರ್ಮಾಣವಾಗಿರುವ ಈ ಮಾರ್ಗದಲ್ಲಿ ಕಳೆದ ಮೂರು ತಿಂಗಳಿನಿಂದ ಬಿಎಂಆರ್​ಸಿಎಲ್​ ಟ್ರಯಲ್ ರನ್ ನಡೆಸುತಿತ್ತು. ಸದ್ಯ ಸುರಕ್ಷತಾ ಪ್ರಮಾಣ ಪತ್ರ ದೊರೆತಿದೆ.

ಕೆಂಗೇರಿ ಮಾರ್ಗದ ಮೆಟ್ರೋಗೆ ಸಿಕ್ಕಿತು ಸೇಫ್ಟಿ ಸರ್ಟಿಫಿಕೇಟ್: ಮುಂದಿನ ವಾರವೇ ಉದ್ಘಾಟನಾ ದಿನ ನಿಗದಿ ಸಾಧ್ಯತೆ
ಬೆಂಗಳೂರು ಮೆಟ್ರೋ (ಸಂಗ್ರಹ ಚಿತ್ರ)
TV9 Web
| Updated By: preethi shettigar|

Updated on:Aug 17, 2021 | 10:37 AM

Share

ಬೆಂಗಳೂರು: ಕೆಂಗೇರಿ ಮಾರ್ಗದ ಮೆಟ್ರೋಗೆ ಸುರಕ್ಷತಾ ಪ್ರಮಾಣಪತ್ರ ಸಿಕ್ಕಿದೆ. ಆಗಸ್ಟ್ ತಿಂಗಳ 11 ಹಾಗೂ 12 ರಂದು ಸುರಕ್ಷತಾ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೆಂಗೇರಿ ಮಾರ್ಗದ ಮೆಟ್ರೋ ಯಶಸ್ವಿಯಾಗಿದ್ದು, ರೈಲ್ವೆ ಸುರಕ್ಷತಾ ಆಯುಕ್ತ ಅಭಯ್ ಕುಮಾರ್ ರೈ ಸುರಕ್ಷತಾ ಪ್ರಮಾಣಪತ್ರ ನೀಡಿದ್ದಾರೆ.

ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೆ ನಿರ್ಮಾಣವಾಗಿರುವ ಈ ಮಾರ್ಗದಲ್ಲಿ ಕಳೆದ ಮೂರು ತಿಂಗಳಿನಿಂದ ಬಿಎಂಆರ್​ಸಿಎಲ್​ ಟ್ರಯಲ್ ರನ್ ನಡೆಸುತಿತ್ತು. ಸದ್ಯ ಸುರಕ್ಷತಾ ಪ್ರಮಾಣ ಪತ್ರ ದೊರೆತಿದೆ. ಒಟ್ಟು 7.53 ಕೀಮಿ ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮಾರ್ಗ ಇದಾಗಿದ್ದು, 1560 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಸದ್ಯ ವಾಣಿಜ್ಯ ಸಂಚಾರದ ಅಂತಿಮ ಸಿದ್ಧತೆ ಆರಂಭಿಸಿದ ಬಿಎಂಆರ್​ಸಿಎಲ್​ ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು ಈ ಮಾರ್ಗದ ಲೋಕಾರ್ಪಣೆ ದಿನ ನಿಗದಿ ಮಾಡಲಿದೆ. ಮುಂದಿನ ವಾರವೇ ಉದ್ಘಾಟನಾ ದಿನ ನಿಗದಿ ಮಾಡುವ  ಸಾಧ್ಯತೆ ಇದೆ.

ಮೈಸೂರು ನಗರದಲ್ಲಿ ಬಹುಮಹಡಿ ವಸತಿ ಸಂಕೀರ್ಣಗಳ ನಿರ್ಮಾಣ ಸಾಂಸ್ಕೃತಿಕ ನಗರಿ ಮೈಸೂರು ಮತ್ತಷ್ಟು ವಿಸ್ತರಣೆಯಾಗಲು ಸಜ್ಜಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು -ಮುಡಾ ಮಹಾರಾಷ್ಟ್ರದ ನಾಸಿಕ್ ಮಾದರಿಯಲ್ಲಿ ನೂತನ ಮೆಟ್ರೋ ನಗರ ನಿರ್ಮಾಣ ಮಾಡಲು ನಿರ್ಧರಿಸಿದೆ.

ಮೈಸೂರು ನಗರದಲ್ಲಿ ನಿಯೋ ಮೆಟ್ರೋ ನಿರ್ಮಾಣದ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಮೆಟ್ರೋ ನಗರ ನಿರ್ಮಾಣ ಸೇರಿ ಕೆಲ ಯೋಜನೆಗಳಿಗೆ ಮುಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮುಡಾ ಅಧ್ಯಕ್ಷ ರಾಜೀವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಗರದ 3 ಭಾಗಗಳಲ್ಲಿ ಗುಂಪು ಮನೆ ನಿರ್ಮಾಣ ಯೋಜನೆ (Group Housing Scheme) ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗಿದೆ. 478 ಕೋಟಿ ರೂಪಾಯಿ ವೆಚ್ಚದ ಬಹು ಮಹಡಿ ಗುಂಪುಮನೆ ಯೋಜನೆ (Multi Floor Housing Complex) ಇದಾಗಿದೆ. ವಿಜಯನಗರ-2, 3ನೇ ಹಂತ, ದಟ್ಟಗಳ್ಳಿಯಲ್ಲಿ ನಿಯೋ ಮೆಟ್ರೋ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ಇದನ್ನೂ ಓದಿ: ಕೇಂದ್ರದ ರೈಲ್ವೆ ಸಚಿವರನ್ನು ಭೇಟಿಯಾದ ಎ.ನಾರಾಯಣಸ್ವಾಮಿ; ರೈಲ್ವೆ ಮಾರ್ಗದ ಬಗ್ಗೆ ಚರ್ಚೆ

Mysuru Neo Metro: ಮೈಸೂರು ನಗರದಲ್ಲಿ ಬಹುಮಹಡಿ ವಸತಿ ಸಂಕೀರ್ಣಗಳ ನಿರ್ಮಾಣ; ಸಾಂಸ್ಕೃತಿಕ ನಗರಿಯಲ್ಲಿ ತಲೆಯೆತ್ತಲಿದೆ ನಿಯೋ ಮೆಟ್ರೋ

Published On - 9:58 am, Tue, 17 August 21