ಕೇಂದ್ರದ ರೈಲ್ವೆ ಸಚಿವರನ್ನು ಭೇಟಿಯಾದ ಎ.ನಾರಾಯಣಸ್ವಾಮಿ; ರೈಲ್ವೆ ಮಾರ್ಗದ ಬಗ್ಗೆ ಚರ್ಚೆ
ಭೇಟಿ ಮಾಡಿ ಟ್ವೀಟ್ ಮಾಡಿದ ಎ.ನಾರಾಯಣಸ್ವಾಮಿ, ಕರ್ನಾಟಕದ ಎಲ್ಲಾ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ದೆಹಲಿ: ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಕೇಂದ್ರದ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ಆನೇಕಲ್ ನಾರಾಯಣಸ್ವಾಮಿ ಭೇಟಿ ಮಾಡಿದ್ದಾರೆ. ಭೇಟಿ ಮಾಡಿ ಟ್ವೀಟ್ ಮಾಡಿದ ಎ.ನಾರಾಯಣಸ್ವಾಮಿ, ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು-ರಾಯದುರ್ಗ, ಚಿಕ್ಕಂದವಾಡಿ ಹತ್ತಿರದ ಕೆಳಸೇತುವೆ, ಚಳ್ಳಕೆರೆ, ಚಿತ್ರದುರ್ಗ, ಬಳ್ಳಾರಿ-ಚಿಕ್ಕಜಾಜೂರು, ಹೊಳಲ್ಕೆರೆ ತಾಲೂಕಿನ ರಾಮಗಿರಿ ಹಾಗೂ ಕರ್ನಾಟಕದ ಎಲ್ಲಾ ರೈಲ್ವೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
ಪ್ರಯಾಣಿಕಳಿಗೆ ರೈಲ್ವೆ ಇಲಾಖೆಯಿಂದ 17.5 ಲಕ್ಷ ರೂ. ಪರಿಹಾರ
ಹೈದರಾಬಾದ್ನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ತಮ್ಮ ಚಿನ್ನದ ಸರಗಳು, ಹಣವನ್ನು ಕಳೆದುಕೊಂಡಿದ್ದರು. ಹೀಗಾಗಿ, ಆ ನಷ್ಟಕ್ಕೆ ಪರಿಹಾರವಾಗಿ ಪ್ರಯಾಣಿಕಳಿಗೆ 17.5 ಲಕ್ಷ ರೂ. ಹಣ ನೀಡಬೇಕೆಂದು ಭಾರತೀಯ ರೈಲ್ವೆಗೆ ಹೈದರಾಬಾದ್ನ ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.
2017ರಲ್ಲಿ ಹೈದರಾಬಾದ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಶೀತಲ್ ಕುಲಕರ್ಣಿ ಎಂಬ ಮಹಿಳೆಯ ಚಿನ್ನ ಮತ್ತು ಹಣವನ್ನು ಕಳುವು ಮಾಡಲಾಗಿತ್ತು. ಹೈದರಾಬಾದ್ನಲ್ಲಿ ವಾಸವಾಗಿರುವ ಆಕೆ ಈ ಬಗ್ಗೆ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ನಾನು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ರೂ. ಹಣವನ್ನು ಬೆಂಗಳೂರಿಗೆ ರೈಲಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ. ನಮ್ಮ ಊರಿನಲ್ಲಿ ಎಂಗೇಜ್ಮೆಂಟ್ ಇದ್ದುದರಿಂದ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಶೀತಲ್ ಹೇಳಿದ್ದಾರೆ.
ಇದನ್ನೂ ಓದಿ
ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
(A Narayanaswamy meets Railway Minister Ashwini Vaishnav and discusses railway line)
Published On - 12:56 pm, Tue, 10 August 21