AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದರೂ ದೇವಸ್ಥಾನಕ್ಕೆ ಪ್ರವೇಶ ಕಷ್ಟ; ಎ.ನಾರಾಯಣಸ್ವಾಮಿ ಬಗ್ಗೆ ಊರವರ ಅಭಿಪ್ರಾಯವೇನು?

ಈ ಬಗ್ಗೆ ನಾರಾಯಣಸ್ವಾಮಿ ಅವರನ್ನೇ ಕೇಳಿದಾಗ, ಊರ ಕೆಲವರು ನನ್ನನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎನ್ನುವುದಕ್ಕೆ ನನಗೇನು ಕೋಪವಿಲ್ಲ. ಆದರೆ, ಈ ಮೌಢ್ಯವನ್ನು ನಿಧಾನಕ್ಕೆ ತೆಗೆಯಬೇಕಿದೆ. ದಲಿತರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟುವತ್ತಲೂ ಗಮನ ಹರಿಸಬೇಕಿದೆ ಎನ್ನುತ್ತಾರೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದರೂ ದೇವಸ್ಥಾನಕ್ಕೆ ಪ್ರವೇಶ ಕಷ್ಟ; ಎ.ನಾರಾಯಣಸ್ವಾಮಿ ಬಗ್ಗೆ ಊರವರ ಅಭಿಪ್ರಾಯವೇನು?
ಎ.ನಾರಾಯಣಸ್ವಾಮಿ
TV9 Web
| Edited By: |

Updated on: Jul 09, 2021 | 11:14 AM

Share

ಚಿತ್ರದುರ್ಗ: ಕೇಂದ್ರ ಸಚಿವ ಸಂಪುಟ ಪುನಾರಚನೆ ಹೊತ್ತಲ್ಲಿ ಕರ್ನಾಟಕದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದ ಎ.ನಾರಾಯಣಸ್ವಾಮಿ ಸಚಿವ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 2019ರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ದಿಸಿ ಮೊದಲ ಸಲ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಉಸ್ತುವಾರಿ ನೀಡಲಾಗಿದೆ. ಇಂದು ಕೇಂದ್ರ ಸಚಿವರಾಗಿ ಗೌರವಯುತ ಸ್ಥಾನ ಗಳಿಸಿರುವ ನಾರಾಯಣಸ್ವಾಮಿ ಇಡೀ ರಾಜ್ಯವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿರುವರಾದರೂ ಇದೇ ವ್ಯಕ್ತಿ ತಮ್ಮ ಜಾತಿಯ ಕಾರಣಕ್ಕಾಗಿ ಈ ಹಿಂದೆ ಸ್ವಂತ ನೆಲದಲ್ಲೇ ಅವಮಾನ ಅನುಭವಿಸಿದ್ದರು ಹಾಗೂ ಈ ಕ್ಷಣಕ್ಕೂ ಅನೇಕರು ಜಾತಿಯ ಕಾರಣಕ್ಕಾಗಿ ಒಪ್ಪಿಕೊಳ್ಳುತ್ತಿಲ್ಲ ಎನ್ನುವುದು ಕಟುಸತ್ಯ.

ಮಾದಿಗ ಸಮುದಾಯದ ನಾರಾಯಣಸ್ವಾಮಿ ಪಕ್ಷ ನಿಷ್ಠರು, ಹಿಂದುತ್ವ ಪ್ರತಿಪಾದಕರು ಎನ್ನುವುದನ್ನು ಅವರ ಪರಿಚಯಕ್ಕೆ ಪೀಠಿಕೆಯಂತೆ ನೀಡಬಹುದಾದರೂ ಅದರ ಬೆನ್ನಹಿಂದೆಯೇ ಅವರು ದಲಿತ ಎನ್ನುವ ಕಾರಣಕ್ಕೆ ದೇವಸ್ಥಾನವೊಂದಕ್ಕೆ ಪ್ರವೇಶ ನೀಡದ ವಿಷಯವನ್ನೂ ಗಮನಿಸಬೇಕಾಗುತ್ತದೆ. 2019ರಲ್ಲಿ ಈ ವಿಷಯ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು ಕೂಡಾ. ವಿಪರ್ಯಾಸವೆಂದರೆ ಇಂದು ಅದೇ ವ್ಯಕ್ತಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಚಿವರಾಗಿ ಆಯ್ಕೆಯಾಗಿದ್ದಾರೆ.

ತುಮಕೂರು ಜಿಲ್ಲೆ, ಪಾವಗಡ ಸಮೀಪದ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಎಂಬ ಹಳ್ಳಿಯ ಜನರು 2019ರಲ್ಲಿ ಸಂಸದ ನಾರಾಯಣಸ್ವಾಮಿ ಅವರಿಗೆ ಪ್ರವೇಶ ನಿರಾಕರಿಸಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರುವ ಈ ಹಳ್ಳಿಯ ಜನರು ಜಾತಿಯ ಕಾರಣಕ್ಕಾಗಿ ಎ.ನಾರಾಯಣಸ್ವಾಮಿ ಅವರನ್ನು ಊರ ದೇಗುಲದ ಸಮೀಪಕ್ಕೆ ಬಿಟ್ಟುಕೊಳ್ಳುವುದಕ್ಕೂ ನಿರಾಕರಿಸಿದ್ದರು. ಇದೀಗ ಅಂದು ಅವಮಾನಿತರಾಗಿದ್ದ ಎ.ನಾರಾಯಣಸ್ವಾಮಿ ಅವರೇನೋ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವರಾಗಿದ್ದಾರೆ. ಆದರೆ, ಅವರಿಗೆ ಅವಮಾನ ಮಾಡಿದ್ದ ಜನರ ಮನಸ್ಥಿತಿ ಬದಲಾಗಿದೆಯಾ ಎಂದು ಯೋಚಿಸಿದರೆ ಖೇದವಾಗುತ್ತದೆ.

ಏಕೆಂದರೆ, ಎ.ನಾರಾಯಣಸ್ವಾಮಿ ಸಚಿವ ಸಂಪುಟಕ್ಕೆ ಸೇರುತ್ತಿದ್ದಂತೆಯೇ ಅಲ್ಲಿನ ಜನರನ್ನು ಮಾತನಾಡಿಸಲು ಮುಂದಾದ ಮಾಧ್ಯಮದವರಿಗೆ ಊರಿನವರಿಂದ ಅನಿರೀಕ್ಷಿತ ಉತ್ತರ ಎದುರಾಗಿದೆ. ನಾರಾಯಣಸ್ವಾಮಿ ಕೇಂದ್ರ ಸಚಿವರಾಗಿರುವ ಹೊತ್ತಿನಲ್ಲಿ ಈ ಹಿಂದಿನ ಘಟನೆಯ ಬಗ್ಗೆ ನಿಮಗೆ ಏನೆನ್ನಿಸುತ್ತದೆ? ಅಂದು ಯಾವ ವ್ಯಕ್ತಿಗೆ ಪ್ರವೇಶ ನಿರಾಕರಿಸಲಾಗಿತ್ತೋ ಇಂದು ಅವರನ್ನು ಸ್ವತಃ ಪ್ರಧಾನ ಮಂತ್ರಿಯೇ ತಮ್ಮ ಸಂಪುಟಕ್ಕೆ ಬರಮಾಡಿಕೊಂಡಿದ್ದಾರೆ. ಇದರ ಬಗ್ಗೆ ನಿಮ್ಮ ನಿಲುವೇನು ಎಂದು ಕೇಳಿದಾಗ ಪ್ರತ್ಯುತ್ತರ ನೀಡಿರುವ ಅಲ್ಲಿನ ಜನ, ಅದೇನೇ ಆದರೂ ಅವರನ್ನು ಊರ ದೇವಸ್ಥಾನದ ಹತ್ತಿರ ಬಿಟ್ಟುಕೊಳ್ಳುವುದು ಹೇಗೆ ಸಾಧ್ಯ? ಅವರಿಗೆ ಸನ್ಮಾನ ಮಾಡುವುದಿದ್ದರೂ ನಮ್ಮ ಊರ ಹತ್ತಿರದಲ್ಲೇ ಎಲ್ಲಾದರೂ ಮಾಡಲಿ. ಆದರೆ, ಊರ ದೇವಸ್ಥಾನದ ಬಳಿ ಮಾತ್ರ ಅವಕಾಶ ನೀಡುವುದಿಲ್ಲ ಎಂದು ಹೇಳುವ ಮೂಲಕ ತಾವು ಅವರನ್ನು ಒಪ್ಪಿಕೊಳ್ಳುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಊರ ಹೊರಗೆ ಕಾರ್ಯಕ್ರಮ ಮಾಡುವುದಕ್ಕೆ ಒಂದೋ, ಎರಡೋ ಲಕ್ಷ ಖರ್ಚಾಗುವುದಾದರೂ ಸರಿಯೇ, ಆದರೆ ಊರೊಳಗೆ ಮಾತ್ರ ಮಾಡಲಾಗದು ಎನ್ನುವ ಮೂಲಕ ಜಾತಿಯ ಕುರಿತಾದ ಮೇಲು, ಕೀಳು ಭಾವನೆ ಅವರಲ್ಲಿ ಎಷ್ಟು ಆಳವಾಗಿ ಬೇರೂರಿದೆ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನಾರಾಯಣಸ್ವಾಮಿ ಊರೊಳಗೆ ಬಂದರೆ ಅವರ ಜತೆ ಸಾವಿರಾರು ಬೆಂಬಲಿಗರೂ ಬರುತ್ತಾರೆ. ನಮಗೆ ಅದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬರ್ಥದಲ್ಲಿ ಹೇಳಿಕೆ ನೀಡುವ ಮೂಲಕ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೇ ಈ ವಿಚಾರದ ಬಗ್ಗೆ ಅಲ್ಲಿನ ಹಿರಿಯ ಮಹಿಳೆಯೊಬ್ಬರನ್ನು ಕೇಳಿದರೆ, ಅದರಲ್ಲಿ ವಿಶೇಷವೇನಿದೆ? ಇಲ್ಲಿ 2 ಬಾರಿ ಶಾಸಕರಾದ ತಿಮ್ಮರಾಯಪ್ಪ ಕೂಡಾ ಊರೊಳಗೆ ಬರದೇ ದೂರದಲ್ಲೇ ನಿಂತು ಮಾತನಾಡುತ್ತಿದ್ದರು. ಹಿರಿಯರು ಮಾಡಿಟ್ಟ ಸಂಪ್ರದಾಯವನ್ನು ಮುರಿಯುವುದಿಲ್ಲ ಎಂದೂ ಹೇಳಿದ್ದರು. ನಾವು ಅವರನ್ನು (ದಲಿತರನ್ನು) ಹಿಂದಿನಿಂದಲೂ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಈಗಲೂ ಅದನ್ನು ಪಾಲಿಸುತ್ತಿದ್ದೇವೆಯಷ್ಟೇ ಎನ್ನುತ್ತಾರೆ. ಇದೇ ವಿಚಾರವವನ್ನು ಮಧ್ಯವಯಸ್ಕ ಮಹಿಳೆಯೊಬ್ಬರಿಗೆ ಕೇಳಿದಾಗ ನಾರಾಯಣಸ್ವಾಮಿ NARAYANAಚಿವರಾದ ವಿಷಯ ಗೊತ್ತಾಗಿಲ್ಲ. ಅದೇನೇ ಇದ್ದರೂ ಜಾತಿಗೆ ಸಂಬಂಧಿಸಿದ ಸಂಪ್ರದಾಯ, ಆಚರಣೆಗಳನ್ನು ಮುರಿಯುವುದು ಕಷ್ಟ ಎಂದಿದ್ದಾರೆ.

ಕೆಲ ಯುವಕರು ದಲಿತ ಸಮುದಾಯದವರೂ ಕೂಡಾ ನಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರೆ ಇನ್ನು ಕೆಲವರು ಮಾತ್ರ ಬದಲಾವಣೆ ತರುವ ಅವಶ್ಯಕತೆ ಇದೆ ಎಂಬ ಮಾತುಗಳನ್ನಾಡುತ್ತಿದ್ದಾರೆ. ಜಾತಿ ವಿಚಾರಗಳು ಸೂಕ್ಷ್ಮವಾಗಿರುವ ಕಾರಣ ಅಷ್ಟು ಸುಲಭಕ್ಕೆ ಮುರಿಯಲಾಗುವುದಿಲ್ಲ. ಆದರೆ, ನಿಧಾನಕ್ಕೆ ಬದಲಾವಣೆ ತರಬೇಕಿದೆ ಎಂದು ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ನಾರಾಯಣಸ್ವಾಮಿ ಅವರನ್ನೇ ಕೇಳಿದಾಗ, ಊರ ಕೆಲವರು ನನ್ನನ್ನು ಒಳಗೆ ಬಿಟ್ಟುಕೊಳ್ಳುತ್ತಿಲ್ಲ ಎನ್ನುವುದಕ್ಕೆ ನನಗೇನು ಕೋಪವಿಲ್ಲ. ಆದರೆ, ಈ ಮೌಢ್ಯವನ್ನು ನಿಧಾನಕ್ಕೆ ತೆಗೆಯಬೇಕಿದೆ. ದಲಿತರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟುವತ್ತಲೂ ಗಮನ ಹರಿಸಬೇಕಿದೆ. ಜತೆಗೆ, ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುವ ಮೂಲಕ ಎಲ್ಲರನ್ನೂ ಒಳಗೊಂಡು ಸಾಗಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: A Narayanaswamy Profile: ದಲಿತ ನಾಯಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ, ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲ ಸಂಪುಟ ಗೌರವ

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ