A Narayanaswamy Profile: ದಲಿತ ನಾಯಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ, ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲ ಸಂಪುಟ ಗೌರವ

ಎ ನಾರಾಯಣಸ್ವಾಮಿ 2019ರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ದಿಸಿ ಮೊದಲ ಸಲ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಮಾದಿಗ ಸಮುದಾಯದ ನಾರಾಯಣಸ್ವಾಮಿ ಪಕ್ಷ ನಿಷ್ಠರು ಹಾಗೂ ಹಿಂದುತ್ವ ಪ್ರತಿಪಾದಕರೂ ಆಗಿದ್ದಾರೆ. ಸಂಘ ಪರಿವಾರದ ಜತೆ, ಸಂತೋಷ್ ಜಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

A Narayanaswamy Profile: ದಲಿತ ನಾಯಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ, ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲ ಸಂಪುಟ ಗೌರವ
ಎ ನಾರಾಯಣಸ್ವಾಮಿ
Follow us
TV9 Web
| Updated By: ganapathi bhat

Updated on: Jul 07, 2021 | 6:53 PM

ಬೆಂಗಳೂರು: ಜಿಲ್ಲೆಯ ಆನೇಕಲ್ ಮೂಲದ ಎ. ನಾರಾಯಣಸ್ವಾಮಿ ಮೇ 16, 1957ರಂದು ಅಬ್ಬಯ್ಯ, ತಿಮ್ಮಕ್ಕ ದಂಪತಿಯ ಪುತ್ರನಾಗಿ ಜನಿಸಿದರು. ಸದ್ಯ 64 ವರ್ಷದವರಾಗಿರುವ ನಾರಾಯಣಸ್ವಾಮಿ, ವಿಜಯಲಕ್ಷ್ಮೀ ಎಂಬವರನ್ನು ವರಿಸಿದ್ದಾರೆ. ದಂಪತಿಗೆ ಶೀತಲ್, ಕೌಶಲ್ಯ, ಸಿರಿಷಾ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಬಿಎ ಪದವೀಧರರಾಗಿರುವ ಇವರು ಕೃಷಿ, ವ್ಯಾಪಾರ, ಸಮಾಜ ಸೇವೆ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಎ. ನಾರಾಯಣಸ್ವಾಮಿ 1996 ರಲ್ಲಿ ಆನೇಕಲ್ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. 1997ರಲ್ಲಿ ಆನೇಕಲ್ ವಿಧಾನಸಭೆ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆ ಆಗಿದ್ದರು. 1999, 2004 ಮತ್ತು 2008 ರಲ್ಲಿ ಸತತ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಆಯ್ಕೆ ಆಗಿದ್ದರು. 2010ರಲ್ಲಿ ಸಮಾಜ ಕಲ್ಯಾಣ ಹಾಗೂ ಬಂಧೀಖಾನೆ ಸಚಿವರಾಗಿ ಕಾರ್ಯ‌ ನಿರ್ವಹಿಸಿದ್ದರು. ಬಳಿಕ 2013, 2018ರಲ್ಲಿ ನಡೆದ ಚುನಾವಣೆಗಳಲ್ಲಿ ಸೋಲು ಕಂಡಿದ್ದ ನಾರಾಯಣಸ್ವಾಮಿ ಬಳಿಕ 2019ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆ ಆಗಿದ್ದರು. ಬಿಜೆಪಿ ರಾಷ್ಟ್ರೀಯ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅದ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ನಾರಾಯಣಸ್ವಾಮಿಗೆ ಇದೆ.

2019ರಲ್ಲಿ ಚಿತ್ರದುರ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ದಿಸಿ ಮೊದಲ ಸಲ ಬಿಜೆಪಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಮಾದಿಗ ಸಮುದಾಯದ ನಾರಾಯಣಸ್ವಾಮಿ ಪಕ್ಷ ನಿಷ್ಠರು ಹಾಗೂ ಹಿಂದುತ್ವ ಪ್ರತಿಪಾದಕರೂ ಆಗಿದ್ದಾರೆ. ಸಂಘ ಪರಿವಾರದ ಜತೆ, ಸಂತೋಷ್ ಜಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಂತೆಯೇ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜತೆಗೂ ಉತ್ತಮ ಒಡನಾಟ ಹೊಂದಿದ್ದಾರೆ.

ಚಿತ್ರದುರ್ಗದ ಸಂಸದರಾದ ಬಳಿಕ ಚಿತ್ರದುರ್ಗ-ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚಿತ್ರದುರ್ಗ ಸಂಸದರಾಗಿ ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ಯೋಜನೆ ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಮುತುವರ್ಜಿವಹಿಸಿ ಕೆಲಸ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ.

ಉತ್ತಮ ಜನಪರ ಕಾರ್ಯ ಕೈಗೊಂಡಿದ್ದು ದಲಿತ ಸಮುದಾಯದ ಮೇಲೂ ಬಿಗಿ ಹಿಡಿತ ಸಾಧಿಸಿದ್ದಾರೆ. ಎ. ನಾರಾಯಣಸ್ವಾಮಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡುವ ಮೂಲಕ ರಾಜ್ಯದಲ್ಲಿ ದಲಿತ-ಲಿಂಗಾಯತ ಕಾಂಬಿನೇಷನ್ ರಚಿಸಲು ಬಿಜೆಪಿ ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. ದಲಿತ ಎಡಗೈ ಸಮುದಾಯವನ್ನು ಬಿಜೆಪಿ ಹಿಡಿದಿಟ್ಟುಕೊಳ್ಳುವ ಮೂಲಕ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಲು ತಂತ್ರ ರಚಿಸಲಾಗಿದೆ ಎನ್ನಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಸಂಸದರಿಗೆ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಮಂತ್ರಿ ಭಾಗ್ಯ ಸಿಕ್ಕಿದೆ.

ಇದನ್ನೂ ಓದಿ: Modi Cabinet Reshuffle Live: ಆರೋಗ್ಯ ಖಾತೆಯ ಇಬ್ಬರೂ ಸಚಿವರ ತಲೆದಂಡ!

Union Cabinet Expansion ಸಚಿವ ಸಂಪುಟ ಪುನಾರಚನೆಯಲ್ಲಿಯೂ ‘ಸಬ್ ಕಾ ವಿಕಾಸ್’, ಯಾವ ರಾಜ್ಯ, ಲಿಂಗ ಮತ್ತು ಜಾತಿಗೆ ಎಷ್ಟು ಪ್ರಾತಿನಿಧ್ಯ?