AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಡಿ: ಬಿಬಿಎಂಪಿಗೆ ಶಾಲಾ ಶಿಕ್ಷಣ ಇಲಾಖೆ ಆಗ್ರಹ

ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಇತರ ಕೆಲಸಗಳಿಗೆ ತಮ್ಮ ಶಿಕ್ಷಕರನ್ನು ನಿಯೋಜಿಸದಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು: ಶಿಕ್ಷಕರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಬೇಡಿ: ಬಿಬಿಎಂಪಿಗೆ ಶಾಲಾ ಶಿಕ್ಷಣ ಇಲಾಖೆ ಆಗ್ರಹ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Jul 28, 2023 | 9:57 AM

Share

ಬೆಂಗಳೂರು ಜು.28: ಚುನಾವಣಾ (Election) ಕಾರ್ಯಗಳಿಗಾಗಿ ಶಾಲೆಯ ಶಿಕ್ಷಕರನ್ನು (School Teachers) ನಿಯೋಜನೆ ಮಾಡಲಾಗುತ್ತದೆ. ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಬಿಬಿಎಂಪಿಗೆ (BBMP) ಪತ್ರ ಬರೆದಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಇತರ ಕೆಲಸಗಳಿಗೆ ತಮ್ಮ ಶಿಕ್ಷಕರನ್ನು ನಿಯೋಜಿಸದಂತೆ ಒತ್ತಾಯಿಸಿದ್ದಾರೆ. ಆಯುಕ್ತರು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಉಲ್ಲೇಖಿಸಿ ಶಿಕ್ಷಕರ ನಿಯೋಜನೆಯನ್ನು ಅಂತಹ ಕೆಲಸಕ್ಕೆ ನಿರ್ಬಂಧಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

“ಸಾರ್ವಜನಿಕ ರಜಾದಿನಗಳು, ದಸರಾ ಮತ್ತು ಬೇಸಿಗೆ ರಜೆಯನ್ನು ಪರಿಗಣಿಸಿ ನಾವು 244 ಕೆಲಸದ ದಿನಗಳನ್ನು ನಿಗದಿಪಡಿಸಿದ್ದೇವೆ. ಪಠ್ಯೇತರ ಚಟುವಟಿಕೆಗಳು, ಪರೀಕ್ಷೆಗಳು ಮತ್ತು ಮೌಲ್ಯಮಾಪನ ಕಾರ್ಯಗಳನ್ನು ನಡೆಸಲು 64 ದಿನಗಳನ್ನು ಮೀಸಲಿಡಲಾಗಿದೆ. ಆದರೆ ಅವರನ್ನು ಚುನಾವಣಾ ಸಂಬಂಧಿತ ಕೆಲಸಕ್ಕೆ ನಿಯೋಜಿಸುವುದರಿಂದ ವೇಳಾಪಟ್ಟಿಗೆ ತೊಂದರೆ ಮತ್ತು ಪರಿಣಾಮ ಬೀರುತ್ತದೆ. ಬೋಧನೆಯ ಗುಣಮಟ್ಟವೂ ಕಡಿಮೆಯಾಗುತ್ತದೆ. ಆದ್ದರಿಂದ, ಶಿಕ್ಷಕರನ್ನು ಅಂತಹ ಕೆಲಸಗಳಿಗೆ ನಿಯೋಜಿಸಬೇಡಿ ಎಂದು ನಾವು ವಿನಂತಿಸುತ್ತೇವೆ” ಎಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!