ಪೊಲೀಸರ ವಿರುದ್ಧ ಸಾಲು ಸಾಲು ಆರೋಪ: ತಮ್ಮ ಸಿಬ್ಬಂದಿಗೆ ಕೆಲ ಕಿವಿ ಮಾತು ಹೇಳಿದ ಪೊಲೀಸ್ ಆಯುಕ್ತ ದಯಾನಂದ್
ಬೆಂಗಳೂರು ನಗರದಲ್ಲಿ ರಾಬರಿ ಹಾಗೂ ಮನೆಕಳ್ಳತನ ಪ್ರಕರಣಗಳು ಕಂಟ್ರೂಲ್ಗೆ ಬಂದಿದ್ದು, ಅಂಕಿ ಅಂಶಗಳನ್ನ ನೋಡಿದಾಗ ಕ್ರೈಂ ರೇಟ್ ಕಡಿಮೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಹೇಳಿದರು.
ಬೆಂಗಳೂರು, ಜು.28: ನಗರದಲ್ಲಿ ರಾಬರಿ ಹಾಗೂ ಮನೆಕಳ್ಳತನ ಪ್ರಕರಣಗಳು ಕಂಟ್ರೂಲ್ಗೆ ಬಂದಿದ್ದು, ಅಂಕಿ ಅಂಶಗಳನ್ನ ನೋಡಿದಾಗ ಕ್ರೈಂ ರೇಟ್ ಕಡಿಮೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ(Bangalore City Police Commissioner) ದಯಾನಂದ್(Dayanand) ಅವರು ಹೇಳಿದರು. ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ನಗರ ಸಶಸ್ತ್ರ ಮೀಸಲು ಪಡೆಯಿಂದ ಸೇವಾ ಕವಾಯತು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ‘ ಪೊಲೀಸರು ಉತ್ತಮ ರೀತಿಯಲ್ಲಿ ಕೆಲಸ ಮಾಡುತಿದ್ದಾರೆ. ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದಾಗಿ ಕೆಲಸ ಮಾಡುತಿದ್ದೀರಿ. ಜೊತೆಗೆ ಹೊಸದಾಗಿ ಜಾರಿಗೆ ತಂದ ನಿಯಮಗಳ ಪಾಲನೆ ಸಹ ಉತ್ತಮವಾಗಿ ನಡೆಯುತ್ತಿದೆ ಎಂದರು.
ಲೋಕಸ್ಪಂದನದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಪ್ರತಿಕ್ರಿಯೆ
ಲೋಕ ಸ್ಪಂದನೆಗೆ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದ್ದು, ಸಿಬ್ಬಂದಿಗಳ ಕೆಲಸದ ಬಗ್ಗೆ ಲೋಕಸ್ಪದನ ಮೂಲಕ ಅಭಿಪ್ರಾಯ ಪಡೆಯಲಾಗುತ್ತಿದೆ. ಡಿಸಿಪಿ, ಎಸಿಪಿಗಳು ಖುದ್ದಾಗಿ ಜನರ ಸಮಸ್ಯೆ ಆಲಿಸುತ್ತಿದ್ದು, ಉತ್ತಮ ರೀತಿ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ಕೂಡ ಬಂದಿದೆ. ಇನ್ನು ಕರ್ತವ್ಯದ ಬಗ್ಗೆ ಬಂದ ಆರೋಪಗಳ ಸಂಬಂಧ ಕೂಡ ಕೌನ್ಸಿಲಿಂಗ್ ಸಹ ನಡೆಸಲಾಗುತ್ತಿದೆ. ಪಾಸ್ಪೊರ್ಟ್ ವಿಚಾರದಲ್ಲಿ 500ರೂ ಲಂಚ ಪಡೆದಿದ್ದ ಪೊಲೀಸ್ ಸಿಬ್ಬಂದಿ ಬಗ್ಗೆ ಲೋಕ ಸ್ಪಂದನೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ಈ ಹಿನ್ನಲೆ ಸಿಬ್ಬಂದಿಯನ್ನ ಡಿಸಿಪಿ ಆದೇಶದಂತೆ ಅಮಾನತ್ತು ಮಾಡಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಂಧನ
ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದ ಆಯ್ತುಕ ದಯಾನಂದ್
ಪೊಲೀಸರ ವಿರುದ್ಧ ಕೇಳಿ ಬರುತ್ತಿರುವ ಸಾಲು ಸಾಲು ಆರೋಪಗಳ ಹಿನ್ನಲೆ ಸಿಬ್ಬಂದಿಗಳಿಗೆ ಆಯ್ತುಕ ದಯಾನಂದ್ ಅವರು ಕಿವಿ ಮಾತು ಹೇಳಿದ್ದಾರೆ. ‘ಸಾರ್ವಜನಿಕರ ಜೊತೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ಪೊಲೀಸರು ಸಮಾಜದ ರಕ್ಷಕರು, ನೊಂದವರ ಕಣ್ಣೀರು ಒರೆಸುವ ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು. ನೊಂದವರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಕ್ರಿಟಿಸಿಜಂ ಬಗ್ಗೆ ಕಿವಿ ಕೊಡಬೇಡಿ. ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡೊಣ. ಕಾನೂನು ಗೌರವಿಸುವವರಿಗೆ ಸೌಜನ್ಯರಾಗಿ ಹಾಗೂ ಸಮಾಜಘಾತುಕರಿಗೆ ಪ್ರಳಾಯಾಂತಕರಾಗಿ ಕೆಲಸ ಮಾಡಬೇಕು. ಅದು ನಮ್ಮ ಕರ್ತವ್ಯ ಅದನ್ನು ಮುಂದುವರೆಸಿಕೊಂಡು ಹೋಗೊಣ ಎಂದು ತಿಳಿ ಹೇಳಿದರು.
ಇನ್ನು ಕಾಲೇಜು ಆವರಣದೊಳಗಿನ ಡ್ರಗ್ಸ್ ಪೆಡ್ಲಿಂಗ್ ವಿಚಾರ ‘ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದ್ದು, ಕಾಲೇಜು ಬಳಿ ಪೊಲೀಸರಿಂದ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿರುವವರ ವಿರುದ್ದ ಕ್ರಮವಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 am, Fri, 28 July 23