ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್: ಟಾಟಾ ಕಂಪನಿಯಿಂದ 921 ವಿದ್ಯುತ್ ಚಾಲಿತ ಬಸ್ ಖರೀದಿ
ಬಿಎಂಟಿಸಿ ಮೊದಲ ಬಾರಿಗೆ ಟಾಟಾ ಕಂಪನಿಯಿಂದ 921 ಇವಿ ಬಸ್ಗಳನ್ನು ಖರೀದಿಸಿದ್ದು, ಇನ್ನು ಮೂರು ತಿಂಗಳಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಈ ಬಸ್ಗಳ ವಿಶೇಷತೆ ಇಲ್ಲಿದೆ.
ಬೆಂಗಳೂರು: ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಿಎಂಟಿಸಿ (BMTC) ವಿದ್ಯುತ್ ಚಾಲಿತ ಬಸ್ (Electric Bus) ಗಳತ್ತ ಮುಖ ಮಾಡಿದೆ. ಸಂಸ್ಥೆ JBM ಹಾಗೂ ಅಶೋಕ್ ಲೇ ಲ್ಯಾಂಡ್ ಕಂಪನಿಯಿಂದ ಈಗಾಗಲೆ 390 ಬಸ್ಗಳನ್ನು ಖರೀದಿಸಿದೆ. ಇದೀಗ ಬಿಎಂಟಿಸಿ ಮೊದಲ ಬಾರಿಗೆ ಟಾಟಾ ಕಂಪನಿಯಿಂದ (TATA Company) 921 ಇವಿ ಬಸ್ಗಳನ್ನು ಖರೀದಿಸಿ ರಸ್ತೆಗೆ ಇಳಿಸುತ್ತಿದೆ. ಇಂದು (ಜು.28) ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಈ ಬಸ್ಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಸಿರು ನಿಶಾನೆ ತೋರಿಸಲಿದ್ದಾರೆ. ಫೇಮ್ 2 ಯೋಜನೆಯಡಿ 921 ಬಸ್ಗಳನ್ನು ಖರೀದಿಸಲಾಗಿದ್ದು, ಮುಂದಿನ ಮೂರು ತಿಂಗಳಿನಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಈ ಮೂಲಕ ಸಂಸ್ಥೆ ಒಟ್ಟು 1,311 ಎಲೆಕ್ಟ್ರಿಕ್ ಬಸ್ಗಳನ್ನು ಹೊಂದಿದಂತಾಗುತ್ತದೆ.
ಬಿಎಂಟಿಸಿ ಟಾಟಾ ಇವಿ ಬಸ್ ವಿಶೇಷತೆಯೇನು?
ಪರಿಸರ ಸ್ನೇಹಿ, ಮಾಲಿನ್ಯರಹಿತ ಬಸ್ಗಳಾಗಿವೆ. ಅತಿ ಕಡಿಮೆ ಎತ್ತರದ ಬಸ್ (ಲೋ ಪ್ಲೋರ್ ಬಸ್) ಬಸ್ಗಳಾಗಿದ್ದು ಅಂಗವಿಕಲರು, ಹಿರಿಯ ನಾಗರಿಕರು ಸುಲಭವಾಗಿ ಬಸ್ ಹತ್ತಬಹುದಾಗಿದೆ. 12 ಅಡಿ ಉದ್ದದ ಬಸ್ನಲ್ಲಿ 35 ಜನರಿಗೆ ಮಾತ್ರ ಆಸನದ ವ್ಯವಸ್ಥೆ ಇದೆ. ನಾಲ್ಕು ಕಡೆ ಸಿಸಿಟಿವಿ ಅಳವಡಿಸಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೇ 200 ಕಿ.ಮೀ. ಚಲಿಸಬಲ್ಲದು. ಡ್ರೈವರ್ ಎಕ್ಸ್ ಲೇಟರ್ ಒತ್ತದಿದ್ದರೇ ಆಟೋಮೆಟಿಕ್ ಚಾರ್ಜಿಂಗ್ ಆಗುತ್ತದೆ. ಖಾಸಗಿ ಚಾಲಕರು, ನಿರ್ವಾಹಕರು ಮಾತ್ರ ಬಿಎಂಟಿಸಿ ಸಿಬ್ಬಂದಿಗಳಿರುತ್ತಾರೆ.
ಇದನ್ನೂ ಓದಿ: ಇನ್ಮುಂದೆ ಈ ಎರಡು ಹೊಸ ಮಾರ್ಗಗಳಲ್ಲೂ ಸಂಚರಿಸಲಿವೆ BMTC ಬಸ್: ಇಲ್ಲಿದೆ ಮಾಹಿತಿ
ಟಾಟಾ ಕಂಪನಿಯಿಂದಲೇ ನಿರ್ವಹಣೆ
ಇನ್ನು ಈ ಬಸ್ಗಳ ನಿರ್ವಹಣೆಯನ್ನ ಟಾಟಾ ಕಂಪನಿಯೇ ಮಾಡುತ್ತದೆ. ಬಸ್ ಕಂಪನಿಯೆ ಚಾಲಕರನ್ನ ನೇಮಿಸಿರುತ್ತದೆ. ಕಂಡಕ್ಟರ್ ಬಿಎಂಟಿಸಿ ಕಡೆಯಿಂದ ಇರುತ್ತಾರೆ. ಇನ್ನು ಈ ಬಸ್ಗಳಿಗೆ ಶಾಂತಿ ನಗರ ಹಾಗೂ ಯಶವಂತಪುರ ಡಿಪೋಗಳಲ್ಲಿ ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆ ಮಾಡಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ