ಗುಂಡಿ ಬಿದ್ದ ರಸ್ತೆಗೆ ಸ್ವತಃ ತಾವೇ ಸಿಮೆಂಟ್, ಜೆಲ್ಲಿ ಮಿಕ್ಸ್ ಮಾಡಿ ಕಾಂಕ್ರಿಟ್ ಹಾಕಿದ ಟ್ರಾಫಿಕ್​​ ಪೊಲೀಸ್​​

ಗುಂಡಿ ಬಿದ್ದ ರಸ್ತೆಗೆ ಸ್ವತಃ ತಾವೇ ಸಿಮೆಂಟ್, ಜೆಲ್ಲಿ ಮಿಕ್ಸ್ ಮಾಡಿ ಕಾಂಕ್ರಿಟ್ ಹಾಕಿದ ಟ್ರಾಫಿಕ್​​ ಪೊಲೀಸ್​​

Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2023 | 8:14 PM

ಕಬ್ಬನ್​ಪಾರ್ಕ್ ಸಮೀಪದ ಪ್ರೆಸ್​ಕ್ಲಬ್ ಸರ್ಕಲ್ ಬಳಿ ಸುಮಾರು 6 ಮೀಟರ್​​ನಷ್ಟು ಉದ್ದ ಗುಂಡಿ‌ಬಿದ್ದು ರಸ್ತೆ ಕಿತ್ತು ಹೋಗಿತ್ತು. ಇದರಿಂದ ವಾಹನಗಳ ‌ಸಂಚಾರಕ್ಕೆ ತೊಂದರೆಯಾಗುತಿತ್ತು. ಹಾಗಾಗಿ ಗುಂಡಿ ಬಿದ್ದ ರಸ್ತೆಗೆ ಟ್ರಾಫಿಕ್ ಪೋಲಿಸರು ಕಾಂಕ್ರಿಟ್ ಹಾಕಿದ್ದಾರೆ.

ಬೆಂಗಳೂರು, ಜುಲೈ 17: ಗುಂಡಿ (potholes) ಬಿದ್ದ ರಸ್ತೆಗೆ ಟ್ರಾಫಿಕ್ ಪೋಲಿಸರು ಕಾಂಕ್ರಿಟ್ ಹಾಕಿದ್ದಾರೆ. ಕಬ್ಬನ್​ಪಾರ್ಕ್ ಸಮೀಪದ ಪ್ರೆಸ್​ಕ್ಲಬ್ ಸರ್ಕಲ್ ಬಳಿ ಸುಮಾರು 6 ಮೀಟರ್​​ನಷ್ಟು ಉದ್ದ ಗುಂಡಿ‌ಬಿದ್ದು ರಸ್ತೆ ಕಿತ್ತು ಹೋಗಿತ್ತು. ಇದರಿಂದ ವಾಹನಗಳ ‌ಸಂಚಾರಕ್ಕೆ ತೊಂದರೆಯಾಗುತಿತ್ತು. ಹಾಗಾಗಿ ಟ್ರಾಫಿಕ್ ‌ಪೊಲೀಸರು ಸ್ವತಃ ತಾವೇ ಸಿಮೆಂಟ್, ಜೆಲ್ಲಿ ಮಿಕ್ಸ್ ಮಾಡಿ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದಾರೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.