My India My Life Goals; ಎಸಿ ಬಳಕೆ ಬಿಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬಹುದು: ಅಶೋಕ ಮಸ್ತಿ, ಖ್ಯಾತ ಹಿನ್ನೆಲೆ ಗಾಯಕ

My India My Life Goals; ಎಸಿ ಬಳಕೆ ಬಿಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬಹುದು: ಅಶೋಕ ಮಸ್ತಿ, ಖ್ಯಾತ ಹಿನ್ನೆಲೆ ಗಾಯಕ

ಅರುಣ್​ ಕುಮಾರ್​ ಬೆಳ್ಳಿ
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 24, 2023 | 11:18 AM

ಮುಂದಿನ ಪೀಳಿಗೆ ಆರೋಗ್ಯಕರ ಜೀವನ ನಡೆಸಬೇಕಾದರೆ, ಪರಿಸರ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ ಎಂದು ಅಶೋಕ ಮಸ್ತಿ ಹೇಳುತ್ತಾರೆ.  

ಬೆಂಗಳೂರು: ಸ್ವಚ್ಛ ಮತ್ತು ಮಾಲಿನ್ಯರಹಿತ ಪರಿಸರಕ್ಕಾಗಿ ಕೆಲ ಸೆಲಿಬ್ರಿಟಿಗಳು ತಮ್ಮ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ಪಂಜಾಬಿನ ಖ್ಯಾತ ಹಿನ್ನೆಲೆ ಗಾಯಕ ಅಶೋಕ್ ಮಸ್ತಿ (Ashok Masti) ನಮ್ಮೆಲ್ಲರಿಗೆ ಗೊತ್ತು. ಈ ಶಾರ್ಟ್ ಮೂಲಕ ಅವರೊಂದು ಸಂದೇಶ ನೀಡುತ್ತಿದ್ದಾರೆ. ಪವನ ಗುರು ಪಾನಿ ಪಿತಾಮಹ ಧರಹಾ ಮಹಾ ಅಂತ ಗುರು ನಾನಕ್ (Guru Nanak) ಅವರು ಹೇಳಿದ ಉಕ್ತಿಯನ್ನು ಅವರು ಇಲ್ಲಿ ಹೇಳುತ್ತಿದ್ದಾರೆ. ಅದರರ್ಥ, ಗಾಳಿಯೇ (ವಾಯು) ಗುರು, ಜಲಜೀವವೇ ತಂದೆ ಮತ್ತು ಭೂಮಿ ಮಾಹಾತಾಯಿ. ಹಾಗಾಗಿ, ಈ ಮೂರನ್ನು ಅಂದರೆ ನಮ್ಮ ಪರಿಸರವನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಅಶೋಕ ಹೇಳುತ್ತಾರೆ. ಹೇಗೆ ಕಾಪಾಡಿಕೊಳ್ಳಬೇಕು ಅನ್ನೋದಿಕ್ಕೆ ಅವರು ಮನೆಗಳಲ್ಲಿ ಎಸಿ ಬಳಸದಿರುವ ಒಂದು ಸರಳ ಉಪಾಯ ನೀಡುತ್ತಾರೆ. ಅದಿಲ್ಲದೆ ನಿದ್ರಿಸಲಾಗದು ಎಂಬ ಮನಸ್ಥಿತಿಯಿಂದ ಹೊರಬರಬೇಕು ಎಂದು ಅವರು ಹೇಳುತ್ತಾರೆ. ಮುಂದಿನ ಪೀಳಿಗೆ ಆರೋಗ್ಯಕರ ಜೀವನ ನಡೆಸಬೇಕಾದರೆ, ಪರಿಸರ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ ಎಂದು ಅಶೋಕ ಮಸ್ತಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Jul 17, 2023 06:10 PM