ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆ ಸಾಕಷ್ಟು ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳ ಮಾಲೀಕರು ಇದನ್ನೆ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ. ಖಾಸಗಿ ಬಸ್ಗಳ ಮಾಲೀಕರು ಜನರಿಂದ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಾರಿಗೆ ಇಲಾಖೆ, ಖಾಸಗಿ ಬಸ್ಗಳ ಮೇಲೆ ನಿಗಾವಹಿಸಿದೆ. ಪ್ರತಿ ಖಾಸಗಿ ಬಸ್ಗಳ ನಿಲ್ದಾಣದಲ್ಲೂ ಸಾರಿಗೆ ಇಲಾಖೆಯಿಂದ ಸ್ಕ್ವಾಡ್ಗಳನ್ನು ನೇಮಕ ಮಾಡಲಾಗಿದೆ.
ನಗರದ ಪ್ರಮುಖ ಖಾಸಗಿ ಬಸ್ ನಿಲ್ದಾಣಗಳಲ್ಲಿ 10 ಜನ ಸ್ಕ್ವಾಡ್ಗಳನ್ನ ನೇಮಕ ಮಾಡಲಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಕಲಾಸಿಪಾಳ್ಯ, ದೇವನಹಳ್ಳಿ, ಸಿಲ್ಕ್ ಬೋರ್ಡ್, ಹೊಸೂರ್ ರೋಡ್, ಹೊಸಕೋಟೆ, ಗೊರಗುಂಟೆ ಪಾಳ್ಯ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಹಬ್ಬಕ್ಕೆಂದು ಜನರು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಆದರೆ ಖಾಸಗಿ ಬಸ್ಗಳ ಮಾಲೀಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಇದರಿಂದ ಸಾರಿಗೆ ಇಲಾಖೆ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸ್ವ್ಕಾಡ್ಗಳನ್ನ ನೇಮಿಸಿದ್ದಾರೆ. ಬಸ್ನಲ್ಲಿರುವ ಸೀಟ್ ಲಿಮಿಟ್ನಷ್ಟೇ ಪ್ರಯಾಣಿಕರು ಸಂಚರಿಸಬೇಕು. ಲೇಗೆಜ್ ಸ್ಟಾಂಡ್ಗಳಲ್ಲಿ ಜನರನ್ನ ಕೂರಿಸಿದರೆ ಸಾರಿಗೆ ಅಧಿಕಾರಿಗಳು ದಂಡ ವಿಧಿಸುತ್ತಿದ್ದಾರೆ.
ಇದನ್ನೂ ಓದಿ
ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂಗೆ ಗೇಟ್ ಪಾಸ್: ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಔಟ್
ಮೈಸೂರು: ಅರಮನೆ ಅಂಗಳದಲ್ಲಿ ಅಂತಿಮ ಹಂತದ ರಿಹರ್ಸಲ್; ಜಂಬೂಸವಾರಿಯ ತಾಲೀಮಿನ ಸುಂದರ ದೃಶ್ಯಗಳನ್ನು ನೋಡಿ