Bengaluru: ಬೆಂಗಳೂರು ಏರ್ಪೋರ್ಟ್ನಲ್ಲಿ ಕಾಂಗ್ರೆಸ್ ಶಾಸಕರ ಸಂಬಂಧಿ ಬ್ಯಾಗ್ನಲ್ಲಿ 2 ಜೀವಂತ ಬುಲೆಟ್ ಪತ್ತೆ
Bangalore International Airport: ಎನ್.ಎ ಹ್ಯಾರಿಸ್ ಅವರ ಅಂಕಲ್ ಆಗಿರುವ ಉಮರ್ ಫರೂಕ್ ಹ್ಯಾರಿಸ್ ನಲಪಾಡ್ ಅವರ ಬ್ಯಾಗ್ನಲ್ಲಿ ಎರಡು ಜೀವಂತ ಬುಲೆಟ್ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಅವರ ಸಂಬಂಧಿಯನ್ನು ಏರ್ಪೋರ್ಟ್ ಅಧಿಕಾರಿಗಳು ತಡೆಹಿಡಿದಿದ್ದಾರೆ. ಎನ್.ಎ ಹ್ಯಾರಿಸ್ ಅವರ ಅಂಕಲ್ ಆಗಿರುವ ಉಮರ್ ಫರೂಕ್ ಹ್ಯಾರಿಸ್ ನಲಪಾಡ್ ಅವರ ಬ್ಯಾಗ್ನಲ್ಲಿ ಎರಡು ಜೀವಂತ ಬುಲೆಟ್ಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್ಎ ಹ್ಯಾರಿಸ್ ಅವರ ಅಂಕಲ್ ಫರೂಕ್ ನಲಪಾಡ್ ಬೆಂಗಳೂರಿನಿಂದ ದುಬೈ ವಿಮಾನವನ್ನು ಹತ್ತಲು ಇಂದು ಬೆಳಗ್ಗೆ 9.30ರ ವೇಳೆಗೆ ಬೆಂಗಳೂರಿನ ವಿಮಾನ ನಿಲ್ದಾಣದೊಳಗೆ ಹೋದಾಗ ಅವರ ಕ್ಯಾಬಿನ್ ಬ್ಯಾಗ್ನಲ್ಲಿ ಎರಡು ಜೀವಂತ ಗುಂಡುಗಳು ಪತ್ತೆಯಾಗಿವೆ. ಅವರು ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್ನಲ್ಲಿ ಬುಲೆಟ್ಗಳು ಪತ್ತೆಯಾಗುತ್ತಿದ್ದಂತೆ ತಕ್ಷಣ ಭದ್ರತಾ ಪಡೆಗೆ ಹಾಗೂ ಸಿಐಎಸ್ಎಫ್ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು.
ಬಳಿಕ ಫರೂಕ್ ಹ್ಯಾರಿಸ್ ನಲಪಾಡ್ ತಮ್ಮ ಬಳಿ ಇದ್ದ ಗನ್ನ ಲೈಸೆನ್ಸ್ ಅನ್ನು ಪೊಲೀಸರಿಗೆ ತೋರಿಸಿದರು. ತಾವು ಅದೇ ಬ್ಯಾಗ್ನಲ್ಲಿ ಬುಲೆಟ್ ಹಾಗೂ ಗನ್ ಅನ್ನು ಇಟ್ಟಿದ್ದಾಗಿಯೂ, ಅವಸರದಲ್ಲಿ ಅದನ್ನು ಮನೆಯಲ್ಲಿ ತೆಗೆದಿಡಲು ಮರೆತಿದ್ದಾಗಿಯೂ ಅವರು ಪೊಲೀಸರಿಗೆ ತಿಳಿಸಿದರು. ಬೆಳಗ್ಗೆ ಬೇಗ ಗಡಿಬಿಡಿಯಿಂದ ಮನೆಯಿಂದ ಹೊರಟಿದ್ದರಿಂದ ಆ ಬುಲೆಟ್ಗಳು ಬ್ಯಾಗ್ನಲ್ಲಿಯೇ ಉಳಿದಿವೆ ಎಂದು ಅವರು ಸಮಜಾಯಿಷಿ ನೀಡಿದರು.
ಅವರು ನೀಡಿದ ಲೈಸೆನ್ಸ್ ಅನ್ನು ಪರಿಶೀಲಿಸಿದ ವಿಮಾನದ ಪೊಲೀಸ್ ಸಿಬ್ಬಂದಿ ಅದು ಅಸಲಿ ಎಂದು ಖಚಿತವಾದ ಬಳಿಕ ಅವರಿಗೆ ವಿಮಾನ ಏರಲು ಅವಕಾಶ ನೀಡಿದರು. ಅವರ ಬಳಿಯಿದ್ದ ಎರಡು ಬುಲೆಟ್ಗಳನ್ನು ಸೀಜ್ ಮಾಡಲಾಗಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಜಯನಗರ, ವೈಟ್ಫೀಲ್ಡ್, ರಾಜಾಜಿನಗರ ಸೇರಿ ಈ ಏರಿಯಾಗಳಲ್ಲಿ ಇಂದು ಪವರ್ ಕಟ್
Karnataka Weather Today: ಬೆಂಗಳೂರಿನಲ್ಲಿ ಅ. 17ರವರೆಗೆ ವಿಪರೀತ ಮಳೆ; ಕರಾವಳಿಯಲ್ಲೂ ನಿಲ್ಲದ ವರುಣನ ಆರ್ಭಟ
Published On - 1:54 pm, Wed, 13 October 21