ಕಾಂಗ್ರೆಸ್ ಬುಡಕ್ಕೆ ಬೆಂಕಿ ಇಡುವುದು ಸಿದ್ದರಾಮಯ್ಯನವರೇ! ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ
ಅಹಿಂದ ಹೆಸರಿನಲ್ಲಿ ಜೆಡಿಎಸ್ ಮುಗಿಸಲು ಹೊರಟಿದ್ದರು. ದೇವೇಗೌಡರು ಹೇಳಿದರೂ ಸಿದ್ದರಾಮಯ್ಯನವರು ಕೇಳಿಲ್ಲ. ಹೀಗಾಗಿ ಸಿದ್ದರಾಮಯ್ಯರನ್ನು ಜೆಡಿಎಸ್ನಿಂದ ಹೊರಗೆ ಹಾಕಿದ್ರು ಅಂತ ಕುಮಾರಸ್ವಾಮಿ ಹೇಳಿದರು.
ರಾಮನಗರ: ನಾನು ನಿನ್ನೆ ಹೇಳಿದ್ದರ ಬಗ್ಗೆ ಸಿದ್ದರಾಮಯ್ಯ (Siddaramaiah) ಮಾಧ್ಯಮದ ಮುಂದೆ ಹಲವಾರು ವಿಚಾರ ಪ್ರಸ್ತಾಪಿಸಿದ್ದಾರೆ. ನಾನು ತುಂಬಾ ಜನರನ್ನ ನೋಡಿದ್ದೇನೆ. ಹೆದರಲ್ಲ ಎಂದಿದ್ದಾರೆ. ಹೆದರಲಿ ಅಂತಾ ನಾನು ಏನಾದ್ರು ಹೇಳಿದ್ನಾ? ನಾನು ರಾಜಕಾರಣಕ್ಕೆ ಸಿದ್ದರಾಮಯ್ಯ ನೆರಳಲ್ಲಿ, ಹಂಗಿನಲ್ಲಿ ಬಂದಿಲ್ಲ. 1985ರಲ್ಲಿ ಸಾತನೂರಲ್ಲಿ ದೇವೇಗೌಡ ನಿಂತಾಗ ಚುನಾವಣೆಗಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ 2 ಕಡೆ ಸೋತಿದ್ದರು. ರಾಜಕಾರಣ ಬೇಡ ಕರಿಕೋಟು ಹಾಕಿಕೊಂಡು ಹೋಗ್ತೇನೆ ಅಂದ್ರು. ಆಗ ದೇವೇಗೌಡರು ಧೈರ್ಯ ತುಂಬಿದ್ರು. ಜನ ಸೇರಿಸುವವರು ನಾವು. ದುಡ್ಡು ನಾವು ಖರ್ಚು ಮಾಡ್ತುದ್ವಿ. ಕಾಲು ಅಲ್ಲಾಡಿಸಿಕೊಂಡು ಬಂದು ಮಾತಾಡಿ ಹೋಗುತ್ತಿದ್ದರು ಅಂತ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆ ನೀಡಿದ್ದಾರೆ.
ನಾನು 1996ರಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ. ಆದರೆ ಸಿದ್ದರಾಮಯ್ಯ ಹಂಗಿನಲ್ಲಿ ರಾಜಕಾರಣಕ್ಕೆ ಬಂದಿಲ್ಲ ಅಂತ ರಾಮನಗರ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಮಾತನಾಡಿದ ಹೆಚ್ಡಿಕೆ, ಅಬಕಾರಿ ಇಲಾಖೆ ಕೊಟ್ಟಿಲ್ಲವೆಂದು ಸಿದ್ದರಾಮಯ್ಯ ಮುನಿಸಿಕೊಂಡು ಮನೆಯಲ್ಲಿ ಮಲಗಿದ್ದರು. ಧರಂಸಿಂಗ್ ಕಾಲದಲ್ಲೇ ಜೆಡಿಎಸ್ ಮುಗಿಸಲು ಹೊರಟಿದ್ರು. ಡಿಸಿಎಂ ಆಗಿದ್ದ ಕಾಲದಿಂದಲೂ ಮುಗಿಸಲು ಹೊರಟಿದ್ದರು. ಆದರೆ ನಾನು ಜೆಡಿಎಸ್ ಉಳಿಸುವ ಕೆಲಸ ಮಾಡಿದ್ದೇನೆ. ಅಹಿಂದ ಹೆಸರಿನಲ್ಲಿ ಜೆಡಿಎಸ್ ಮುಗಿಸಲು ಹೊರಟಿದ್ದರು ಅಂತ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಹಿಂದ ಹೆಸರಿನಲ್ಲಿ ಜೆಡಿಎಸ್ ಮುಗಿಸಲು ಹೊರಟಿದ್ದರು. ದೇವೇಗೌಡರು ಹೇಳಿದರೂ ಸಿದ್ದರಾಮಯ್ಯನವರು ಕೇಳಿಲ್ಲ. ಹೀಗಾಗಿ ಸಿದ್ದರಾಮಯ್ಯರನ್ನು ಜೆಡಿಎಸ್ನಿಂದ ಹೊರಗೆ ಹಾಕಿದ್ರು ಅಂತ ಕುಮಾರಸ್ವಾಮಿ ಹೇಳಿದರು. ಆಗ ಜೆಡಿಎಸ್ನ 58 ಶಾಸಕರು ನಮ್ಮ ಜೊತೆಯಲ್ಲಿದ್ದರು. ಸಿದ್ದರಾಮಯ್ಯನವರದ್ದು ಡಬಲ್ ಸ್ಟ್ಯಾಂಡ್ ನಡೆ ಸಿದ್ದರಾಮಯ್ಯರ 50 ವರ್ಷದ ರಾಜಕಾರಣ ನನಗೆ ಗೊತ್ತಿದೆ. ಕಾಂಗ್ರೆಸ್ ಬುಡಕ್ಕೆ ಬೆಂಕಿ ಇಡುವುದು ಸಿದ್ದರಾಮಯ್ಯನವರೇ. ತಾವು ಬೆಳೆದ ಮನೆಗೆ ಬೆಂಕಿ ಇಡುವ ಕೆಲಸ ಮಾಡುತ್ತಾರೆ. ಮುಂದೊಂದು ದಿನ ಇದರ ಬಗ್ಗೆ ಇತಿಹಾಸದಲ್ಲಿ ಬರೀತಾರೆ ಅಂತ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗರಂ ಆಗಿದ್ದಾರೆ.
ನಾನು ತಾಜ್ವೆಸ್ಟೆಂಡ್ನಲ್ಲಿ ಮಜಾ ಮಾಡಲು ಇರಲಿಲ್ಲ. ರೈತರ ಸಾಲಮನ್ನಾಕ್ಕಾಗಿ ಕೆಲಸ ಮಾಡುತ್ತಿದ್ದೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದೆ. ನಿಮ್ಮಿಂದಾಗಿ ನಾನು ರೈತರ ಸಾಲ ಮನ್ನಾ ಮಾಡಿಲ್ಲ. ನಿಮ್ಮ ಶಾಸಕರು ಕೆಲಸಕ್ಕಾಗಿ ಅರ್ಜಿಯನ್ನ ಎಸೆಯುತಿದ್ದರು. ಇಸ್ಪೀಟ್ ಎಲೆ ಎಸೆದಂತೆ ನನ್ನ ಮುಂದೆ ಎಸೆಯುತ್ತಿದ್ದರು. ಮೈತ್ರಿ ಸರ್ಕಾರ ಪತನದ ವೇಳೆ ನಾನು ಅಮೆರಿಕಗೆ ಹೋಗಿದ್ದೆ. ಆಗ ನನಗೆ ಕರೆ ಮಾಡಿದ್ದಾಗಿ ನೀವು ಹೇಳಿದ್ದೀರಿ. ಯಾವ ಸಂಖ್ಯೆಗೆ ಕರೆ ಮಾಡಿದ್ದೀರಿ ಎಂಬುದು ತೋರಿಸಿ ಅಂತ ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗೆ ಕುಮಾರಸ್ವಾಮಿ ಎಚ್ಚರಿಕೆ ಯಾರೋ ಕಟ್ಟಿರುವ ಹುತ್ತದಲ್ಲಿ ನೀವು ಸೇರಿಕೊಳ್ಳುತ್ತೀರಿ. ನೀವು ನನ್ನ ಬಗ್ಗೆ ಲಘುವಾಗಿ ಮಾತನಾಡಬೇಡಿ. ನೀವು ನನ್ನ ಬಗ್ಗೆ ಮಾತನಾಡುವುದನ್ನು ಬಿಡದಿದ್ದರೆ. ನಾನು ನಿಮ್ಮ ಬಗ್ಗೆ ಮಾತನಾಡುವುದನ್ನು ಬಿಡುವುದಿಲ್ಲ ಅಂತ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಜಾತಿಗಣತಿ ವರದಿ ಬಗ್ಗೆ ಎಲ್ಲಿ ಹೋದ್ರೂ ಚರ್ಚೆ ಮಾಡುತ್ತೀರಿ. ನೀವು 170 ಕೋಟಿ ಕೊಟ್ಟು ಜಾತಿಗಣತಿ ಮಾಡಿಸಿದ್ದೀರಿ. ನಿಮ್ಮ ಅವಧಿಯಲ್ಲಿ ಏಕೆ ವರದಿಯನ್ನು ಸ್ವೀಕಾರ ಮಾಡಲಿಲ್ಲ. ಜಾತಿಗಣತಿ ಮಾಡಲು 170 ಕೋಟಿ ಕೊಡುವ ಬದಲು, ಬಡವರಿಗೆ ಆ ಹಣ ಕೊಟ್ಟಿದ್ದರೆ ನಿಮ್ಮನ್ನು ನೆನಪಿಸಿಕೊಳ್ತಿದ್ದರು. ನಿಮ್ಮ ರಾಜಕೀಯ ನಾಟಕಕ್ಕೆ ಜಾತಿಗಣತಿ ಮಾಡಿಸಿದ್ದೀರಿ ಎಂದು ಕುಮಾರಸ್ವಾಮಿ ಹೇಳಿದರು.
ವಿಪಕ್ಷ ನಾಯಕ ಸ್ಥಾನಕ್ಕೆ ಅವಮಾನ ವಿರೋಧ ಪಕ್ಷ ಸ್ಥಾನಕ್ಕೆ ನಾನು ಅವಮಾನ ಮಾಡುತ್ತಿಲ್ಲ. ಇಂಥ ವ್ಯಕ್ತಿಯಿಂದ ವಿಪಕ್ಷ ನಾಯಕ ಸ್ಥಾನಕ್ಕೆ ಅವಮಾನ. ದೇವೇಗೌಡರು ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅವರಂತೆ ಕೆಲಸ ಮಾಡಲು ಸಿದ್ದರಾಮಯ್ಯಗೆ ಆಗುತ್ತಾ? ಅಂತ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ
ಭಾರತದ ಲಸಿಕೆ ಹಾಕುವ ದರವು ಆರ್ಥಿಕತೆಗೆ ಸಹಾಯಕ ಎಂದ ಐಎಂಎಫ್ನ ಗೀತಾ ಗೋಪಿನಾಥ್
ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಲೀಂ ಮಾತು: ವಿ.ಎಸ್. ಉಗ್ರಪ್ಪಗೆ ನೋಟಿಸ್ ಜಾರಿ!
Published On - 2:29 pm, Wed, 13 October 21