ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಲೀಂ ಮಾತು: ವಿ.ಎಸ್. ಉಗ್ರಪ್ಪಗೆ ನೋಟಿಸ್ ಜಾರಿ!

DK Shivakumar: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಭ್ರಷ್ಟಾಚಾರದಲ್ಲಿ ಭಾಗಿಯಾಗಿದಾರೆ ಎಂದು ಕಾಂಗ್ರೆಸ್​ ಮುಖಂಡರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ನಡುವಣ ಸ್ಫೋಟಕ ಮಾತುಗಳು ಬಹಿರಂಗವಾಗುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡಿದ ಉಗ್ರಪ್ಪಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್​ರಿಂದ ನೋಟಿಸ್ ನೀಡಲಾಗಿದೆ.

ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಲೀಂ ಮಾತು: ವಿ.ಎಸ್. ಉಗ್ರಪ್ಪಗೆ ನೋಟಿಸ್ ಜಾರಿ!
ಡಿ.ಕೆ.ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಲೀಂ ಮಾತು: ಉಗ್ರಪ್ಪಗೆ ಜಾರಿಯಾಯ್ತು ನೋಟಿಸ್!


ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಭ್ರಷ್ಟಾಚಾರದಲ್ಲಿ ಭಾಗಿಯಾಗಿದಾರೆ ಎಂದು ಕಾಂಗ್ರೆಸ್​ ಮುಖಂಡರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ನಡುವಣ ಸ್ಫೋಟಕ ಮಾತುಗಳು ಬಹಿರಂಗವಾಗುತ್ತಿದ್ದಂತೆ ಈಗಾಗಲೇ ಸಲೀಂಗೆ ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಗೇಟ್​ ಪಾಸ್ ನೀಡಲಾಗಿದೆ. ಇನ್ನು ಸಂಭಾಷಣೆ ವೇಳೆ ಮೌನವಾಗಿ ಮಾತುಗಳನ್ನು ಆಲಿಸಿದ ಉಗ್ರಪ್ಪಗೆ ಇದೀಗ ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯಿಂದ ನೋಟಿಸ್ ಜಾರಿಯಾಗಿದೆ. ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡಿದ ಉಗ್ರಪ್ಪಗೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ ರೆಹಮಾನ್ ಖಾನ್​ರಿಂದ ನೋಟಿಸ್ ನೀಡಲಾಗಿದೆ.

ಕುತೂಹಲದ ಸಂಗತಿಯೆಂದರೆ ಅತ್ತ ಉಗ್ರಪ್ಪಸುದ್ದಿಗೋಷ್ಟಿ ನಡೆಸುತ್ತಿದ್ದು, ಅವರು ಹೊರ ಬರುವುದನ್ನೇ ಪಕ್ಷದ ಸಿಬ್ಬಂದಿ ಕಾಯುತ್ತಿದ್ದಾರೆ. ಉಗ್ರಪ್ಪ ಹೊರಬರುತ್ತಿದ್ದಂತೆ ಅವರಿಗೆ ಕೆಪಿಸಿಸಿ ವತಿಯಿಂದ ನೋಟಿಸ್​ ಸರ್ವ್ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಅಶಿಸ್ತಿನ ನಡವಳಿಕೆಗಾಗಿ ಕಾರಣ ಕೇಳಿ ರೆಹಮಾನ್ ಖಾನ್ ಸಹಿಯುಳ್ಳ ನೋಟಿಸ್​ ಪತ್ರ ಜಾರಿಯಾಗಿದೆ.

ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂಗೆ ಗೇಟ್​ ಪಾಸ್:
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಭ್ರಷ್ಟಾಚಾರದಲ್ಲಿ ಭಾಗಿಯಾಗಿದಾರೆ ಎಂದು ಕಾಂಗ್ರೆಸ್​ ಮುಖಂಡರಾದ ವಿ.ಎಸ್. ಉಗ್ರಪ್ಪ ಮತ್ತು ಸಲೀಂ ನಡುವಣ ಸ್ಫೋಟಕ ಮಾತುಗಳು ಬಹಿರಂಗವಾಗುತ್ತಿದ್ದಂತೆ ಸಲೀಂಗೆ ಗೇಟ್​ ಪಾಸ್ ನೀಡಲಾಗಿದೆ. ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಸಲೀಂ ಅವರನ್ನು ಸಸ್ಪೆಂಡ್​ ಮಾಡಲಾಗಿದೆ. ಇನ್ನು ಸಂಭಾಷಣೆ ವೇಳೆ ಮೌನವಾಗಿ ಮಾತುಗಳನ್ನು ಆಲಿಸಿದ ಉಗ್ರಪ್ಪ ಅವರಿಂದ ವಿವರಣೆ ಪಡೆಯಲಾಗುವುದು ಎಂದು ಕಾರ್ಯಾಧ್ಯಕ್ಷ ಸಲೀಂ ಅಹಮದ್ ಟಿವಿ 9 ಗೆ ತಿಳಿಸಿದ್ದಾರೆ.

ಕೊತ್ವಾಲ್ ರಾಮಚಂದ್ರ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರ ಕೆಪಿಸಿಸಿ ಕಚೇರಿಯಲ್ಲಿಯೇ ಬಹಿರಂಗ: ಸಿ.ಟಿ.ರವಿ ಟಾಂಗ್
ಬೆಂಗಳೂರು: ಕೊತ್ವಾಲ್ ರಾಮಚಂದ್ರ ಶಿಷ್ಯನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಅವರದೇ ಪಕ್ಷದ ಮುಖಂಡರು ಬಯಲು ಮಾಡಿದ್ದಾರೆ. ಅದು ಕೂಡ ಕೆಪಿಸಿಸಿ ಕಚೇರಿಯಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ಕೆಪಿಸಿಸಿಗೆ ಎಂತಹ ದುರ್ಗತಿ ಬಂದಿರಬಹುದು? ಎಂದು ಟ್ವೀಟ್ ಮೂಲಕ ಬಿಜೆಪಿ ನಾಯಕ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.

ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಿಂದ Ugrappaಗೆ ನೋಟಿಸ್​ |Ugrappa|Tv9kannada

Read Full Article

Click on your DTH Provider to Add TV9 Kannada