ಡಿ.ಕೆ.ಶಿವಕುಮಾರ್​ ರಾಜಕೀಯದಿಂದ ಹಣ ಸಂಪಾದನೆ ಮಾಡಿಲ್ಲ: ವಿ.ಎಸ್.​ಉಗ್ರಪ್ಪ ಸ್ಪಷ್ಟನೆ

ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ ಎಲ್ಲರೂ ಸೇರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ತರಲು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಬಿಂಬಿಸಿದ ಹಾಗೇ ನಮ್ಮಲ್ಲಿ ಗುಂಪುಗಾರಿಕೆ ಇಲ್ಲ ಎಂದು ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್​ ರಾಜಕೀಯದಿಂದ ಹಣ ಸಂಪಾದನೆ ಮಾಡಿಲ್ಲ: ವಿ.ಎಸ್.​ಉಗ್ರಪ್ಪ ಸ್ಪಷ್ಟನೆ
ಕಾಂಗ್ರೆಸ್ ನಾಯಕ ವಿ .ಎಸ್ .ಉಗ್ರಪ್ಪ


ಬೆಂಗಳೂರು:ಅನೇಕರು ಬಿಂಬಿಸಿದ ಹಾಗೇ ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಒಂದೇ ಎನ್ನುವುದನ್ನು ನಾನು ಮೊದಲು ಸ್ಪಷ್ಟಪಡಿಸುತ್ತೇನೆ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ ಎಲ್ಲರೂ ಸೇರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ತರಲು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಬಿಂಬಿಸಿದ ಹಾಗೇ ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ನಮ್ಮ ಪಕ್ಷದ ಎರಡು ಕಣ್ಣು. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಕೋಲ್ಡ್ ವಾರ್ ಇಲ್ಲ. ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಶಿಸ್ತಿನ ಸಿಪಾಯಿಗಳು ಎಂದು ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.

ಡಿಕೆಶಿ ಕ್ರಿಯಾಶೀಲ, ಬದ್ಧತೆಯಿರುವ ರಾಜಕಾರಣಿ. ರೈತ ಕುಟುಂಬದಿಂದ ಹುಟ್ಟಿ ಒಬ್ಬ ನಾಯಕರಾಗಿ ಹೊರ ಹೊಮ್ಮಿದ್ದಾರೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಸಹ ಹಿರಿಯ ರಾಜಕಾರಣಿ. ಡಿಕೆಶಿ ಜನಪರ ಕಾಳಜಿ ಹೊಂದಿರುವ ವ್ಯಕ್ತಿ. ಪಾವಗಡದಲ್ಲಿನ ಸೋಲಾರ್ ಪ್ರಾಜೆಕ್ಟ್‌ಗೆ ಡಿಕೆಶಿಯೇ ಕಾರಣ. ಕಳೆದ ನಾಲ್ಕು ದಶಕಗಳಿಂದ ನಾನು ಡಿ.ಕೆ. ಶಿವಕುಮಾರ್ ಅವರನ್ನು ಬಲ್ಲೆ ಎಂದು ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ರಾಜಕಾರಣದಿಂದ ಆಸ್ತಿ ಗಳಿಸಿಲ್ಲ. ಅವರು ರಾಜಕಾರಣದಲ್ಲಿ ಖರ್ಚು ಮಾಡಿ ಕಳೆದುಕೊಳ್ಳುತ್ತಿದ್ದಾರೆ. ಡಿಕೆಶಿ ಎಂದೂ ಪರ್ಸೆಂಟೇಜ್ ರಾಜಕಾರಣ ಮಾಡಿಲ್ಲ. ನೀರಾವರಿ ಇಲಾಖೆಯ ಹಗರಣದ ಬಗ್ಗೆ ಪ್ರಸ್ತಾಪಿಸಲಾಗಿದೆ. ನಮ್ಮ ಪಕ್ಷದ ಮೇಲೂ ಗೂಬೆ ಕೂರಿಸುವ ಕೆಲಸವಾಗುತ್ತಿದೆ.

ಸಲೀಂ ಗುಸುಗುಟ್ಟಿದ್ದನ್ನು ವೈಭವೀಕರಿಸುವ ಅಗತ್ಯವಿಲ್ಲ: ವಿ.ಎಸ್.ಉಗ್ರಪ್ಪ
ನಿನ್ನೆ(ಅಕ್ಟೋಬರ್​ 12) ಸುದ್ದಿಗೋಷ್ಠಿ ವೇಳೆ ಬಿಜೆಪಿ ಮಾತನಾಡುತ್ತಿರುವ ಬಗ್ಗೆ ಸಲೀಂ ಪ್ರಸ್ತಾಪಿಸಿದರು. ಸಲೀಂ ಅವರು ತಮ್ಮ ಅಭಿಪ್ರಾಯದ ಬಗ್ಗೆ ಹೇಳಿಲ್ಲ. ಡಿಕೆಶಿ ಮೇಲೆ ಆರೋಪಿಸುತ್ತಿರುವ ಬಗ್ಗೆ ಅವರು ಹೇಳಿದರು. ಸುದ್ದಿಗೋಷ್ಠಿ ಬಳಿಕ ಸಲೀಂಗೆ ನಾನು ಬುದ್ಧಿ ಹೇಳಿದ್ದೇನೆ. ಸಲೀಂ ಗುಸುಗುಟ್ಟಿದ್ದನ್ನು ವೈಭವೀಕರಿಸುವ ಅಗತ್ಯವಿಲ್ಲ. ನಿನ್ನೆ ಸಲೀಂ ನೀರಾವರಿ ಇಲಾಖೆ ಹಗರಣದ ಬಗ್ಗೆ ಮತ್ತು ಸಂಘಟನೆಯ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡಿಲ್ಲ ಎಂದು ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

ಭ್ರಷ್ಟಾಚಾರ, ಕಮೀಷನ್ ಕಾಂಗ್ರೆಸ್ ಪಕ್ಷಕ್ಕೆ ದೂರ: ವಿ.ಎಸ್.ಉಗ್ರಪ್ಪ
ಭ್ರಷ್ಟಾಚಾರ, ಕಮೀಷನ್ ಕಾಂಗ್ರೆಸ್ ಪಕ್ಷಕ್ಕೆ ದೂರ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೂ ಅದು ದೂರ. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಪರ್ಸೆಂಟೇಜ್ ಆರೋಪ ಮಾಡಿದ್ದರು. ಆಗ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದೆ. ಆದರೆ ಅದಕ್ಕೆ ಪ್ರಧಾನಿ ಮೋದಿ ಉತ್ತರವೇ ನೀಡಲಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಸಿಟಿ ರವಿ ಮಾತಿಗೆ ಪ್ರತಿಕ್ರಿಯೆ
ನಾನು ಸಲೀಂ ಅವರ ಮಾತಿಗೆ ಬೆಂಬಲಿಸಿಲ್ಲ. ನಾನು ಆ ಸಂದರ್ಭದಲ್ಲಿ ಹೊರಗಡೆಯಲ್ಲಿ ನಡೆದಂತಹ ಹಾಸ್ಯವೊಂದಕ್ಕೆ ನಗುತ್ತಿದೆ. ನಮ್ಮ ಪಾರ್ಟಿಯಲ್ಲಿ ಕಮೀಷನ್ ಅನ್ನೋದು ಇಲ್ಲ. ಸಿಟಿ ರವಿಯವರು ಕೊತ್ವಾಲ ರಾಮಚಂದ್ರ ಹೆಸರನ್ನು ನಮ್ಮ ನಾಯಕರ ಜೊತೆ ತಳುಕು ಹಾಕಿಸೋದು ಸರಿಯಲ್ಲ. ಡಿಕೆಶಿಯವರು ಯಾರ ಶಿಷ್ಯರು ಅಲ್ಲ. ಸಿಟಿ ರವಿ ಈ ರೀತಿ ಮಾತನಾಡೋದು ಸರಿಯಲ್ಲ ಎಂದು ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂದ ಸಲೀಂಗೆ ಗೇಟ್​ ಪಾಸ್: ಕೆಪಿಸಿಸಿ ಮಾಧ್ಯಮ ಸಂಯೋಜಕ ಸ್ಥಾನದಿಂದ ಔಟ್

ಬಿಎಸ್‌ವೈ ಅಧಿಕಾರ ಕಳೆದುಕೊಳ್ಳಲು ಆರ್​ಎಸ್​ಎಸ್​​ ಕಾರಣ; ಆರ್​ಎಸ್​ಎಸ್ ಬಗ್ಗೆ ನಿಜ ಏನೆಂದು ಜನರೇ ಚರ್ಚೆ ಮಾಡಲಿ: ಹೆಚ್‌ಡಿಕೆ

Read Full Article

Click on your DTH Provider to Add TV9 Kannada