ಅರಮನೆ ಅಂಗಳದಲ್ಲಿ ಅಂತಿಮ ಹಂತದ ದಸರಾ ರಿಹರ್ಸಲ್ ಹೇಗಿದೆ? ಇಲ್ಲಿದೆ ವಿಡಿಯೊ:
‘ದಸರಾ ಮೆರವಣಿಗೆಯಲ್ಲಿ ಗೋಪಾಲಸ್ವಾಮಿ ಆನೆ ಇದ್ದೇ ಇರುತ್ತದೆ’: ಡಿಸಿಎಫ್ ಕರಿಕಾಳನ್:
ದಸರಾ ಮೆರವಣಿಗೆಯಲ್ಲಿ ಗೋಪಾಲಸ್ವಾಮಿ ಆನೆ ಇದ್ದೇ ಇರುತ್ತದೆ ಎಂದು ಡಿಸಿಎಫ್ ಕರಿಕಾಳನ್ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಆನೆ ಬೆದರಿದ ಪ್ರಕರಣದ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿ ನಡೆದಿರುವ ಘಟನೆ ಪಟಾಕಿ ಮತ್ತು ಕಲರ್ ಪೇಪರ್ ಆನೆಯ ಕಣ್ಣಿಗೆ ಬಿದ್ದುದರಿಂದ ಆಗಿದ್ದು, ಆನೆ ಎರಡು ಹೆಜ್ಜೆ ಹಿಂದೆ ಸರಿದಿದೆ ಅಷ್ಟೆ. ಗೋಪಾಲಸ್ವಾಮಿ ಆನೆಯು ಬಹಳ ಅನುಭವ ಇರುವ ಆನೆಯಾಗಿದ್ದು, 10 ವರ್ಷದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದಾನೆ. ಒಂದು ಘಟನೆ ಇಟ್ಟುಕೊಂಡು ಆನೆಯನ್ನು ದೂರಲು ಸಾಧ್ಯವಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿಯ ಜಂಬೂ ಸವಾರಿಯಲ್ಲಿ ಆರು ಆನೆಗಳು ಭಾಗವಹಿಸುತ್ತವೆ. ಮೊದಲ ಬಾರಿಗೆ ಅಶ್ವತ್ಥಾಮ ಭಾಗವಹಿಸುತ್ತಾನೆ. ನಗರ ಪ್ರದೇಶದ ವಾತಾವರಣಕ್ಕೆ ಹೊಸ ಆನೆಗಳು ಹೊಂದಿಕೊಂಡಿವೆ. ಗುರುವಾರ ಮಧ್ಯರಾತ್ರಿಯಿಂದಲೆ ಆನೆಗಳಿಗೆ ಅಲಂಕಾರ ಆರಂಭಿಸುತ್ತೇವೆ. ವಿಜಯದಶಮಿದಿನ ಮಧ್ಯಾಹ್ನ2.30 ಕ್ಕೆ ಅಂಬಾರಿ ಕಟ್ಟುವ ಕಾರ್ಯ ಶುರುವಾಗಲಿದೆ ಎಂದು ಕರಿಕಾಳನ್ ತಿಳಿಸಿದ್ದಾರೆ.
ಕರಿಕಾಳನ್ ಮಾತನಾಡಿರುವ ವಿಡಿಯೊ ಇಲ್ಲಿದೆ:
ವಿಜಯದಶಮಿ ದಿನ ಅರಮನೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್:
ವಿಜಯದಶಮಿ ದಿನ ಅರಮನೆ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಈ ಕುರಿತು ನಾಳೆ(ಗುರುವಾರ) ಪೋಲಿಸ್ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ನಗರ ಪೋಲಿಸ್ ಆಯುಕ್ತ ಡಾ ಚಂದ್ರಗುಪ್ತ ಕೋರಿಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ಸಹಕರಿಸುವಂತೆಯೂ ಅವರು ಕೋಡಿಕೊಂಡಿದ್ದಾರೆ.
ಅರಮನೆ ಒಳಗಡೆ ಕೊರೊನಾ ನಿಯಮದ ಅಡಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದಿನ ಅಂತಿಮ ಹಂತದ ರಿಹರ್ಸಲ್ ಯಶಸ್ವಿಯಾಗಿ ನಡೆದಿದೆ. ದಸರಾಗೆ ಬೇಕಾದ ಎಲ್ಲಾ ಸಿದ್ದತೆಗಳು ಮುಕ್ತಾಯವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ಧಾರೆ.
ಅರಮನೆಯಲ್ಲಿ ಪೋಲಿಸ್ ಆಯುಕ್ತ ಡಾ ಚಂದ್ರಗುಪ್ತ ಮಾತನಾಡಿರುವ ವಿಡಿಯೊ ಇಲ್ಲಿದೆ:
ಇದನ್ನೂ ಓದಿ:
ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸಲು ಕೊವಿಡ್ ವರದಿ ಕಡ್ಡಾಯ; ನೆಗೆಟಿವ್ ಇದ್ದರೆ ಮಾತ್ರ ಅರಮನೆ ಆವರಣಕ್ಕೆ ಎಂಟ್ರಿ
ಕನ್ನಡ ಚಿತ್ರಗಳಿಗೆ ಹೆಚ್ಚಾಯ್ತು ಪೈರಸಿ ಸಮಸ್ಯೆ; ದೂರು ನೀಡಿದ ‘ಶಾರ್ದೂಲ’ ನಿರ್ಮಾಪಕ ರೋಹಿತ್