ಬಿಜೆಪಿಗೆ ಹೋಗುವಂತೆ ನಮಗೆ ಸಿದ್ದರಾಮಯ್ಯ ಹೇಳಿರಲಿಲ್ಲ; ಕುಮಾರಸ್ವಾಮಿಗೆ ಎಸ್.ಟಿ. ಸೋಮಶೇಖರ್ ತಿರುಗೇಟು

ಬಿಜೆಪಿಗೆ ಹೋಗುವಂತೆ ನಮಗೆ ಸಿದ್ದರಾಮಯ್ಯ ಹೇಳಿರಲಿಲ್ಲ; ಕುಮಾರಸ್ವಾಮಿಗೆ ಎಸ್.ಟಿ. ಸೋಮಶೇಖರ್ ತಿರುಗೇಟು
ಬಿಜೆಪಿಗೆ ಹೋಗುವಂತೆ ನಮಗೆ ಸಿದ್ದರಾಮಯ್ಯ ಹೇಳಿರಲಿಲ್ಲ; ಕುಮಾರಸ್ವಾಮಿ ರಾತ್ರಿ ಕಣ್ಮುಚ್ಚಿ ಮಲಗಿ ಎಲ್ಲಾ ನೆನಪು ಮಾಡಿಕೊಳ್ಳಲಿ: ಎಸ್.ಟಿ. ಸೋಮಶೇಖರ್


ಮೈಸೂರು: ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದಿನ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದಾರೆಂಬ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ, ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದಿನ ಮೈತ್ರಿ ಸರ್ಕಾರ ಪತನಕ್ಕೆ ಕಾರಣ ಏನೆಂಬುದು ಕುಮಾರಸ್ವಾಮಿಗೆ ಗೊತ್ತು. ರಾತ್ರಿ ಮಲಗಿದಾಗ ಕಣ್ಮುಚ್ಚಿ ಎಲ್ಲಾ ನೆನಪು ಮಾಡಿಕೊಳ್ಳಲಿ. ಆಗ ಕುಮಾರಸ್ವಾಮಿಗೆ ಸತ್ಯ ಏನೆಂದು ಅರ್ಥವಾಗುತ್ತದೆ. ಬಿಜೆಪಿಗೆ ಹೋಗುವಂತೆ ನಮಗೆ ಸಿದ್ದರಾಮಯ್ಯ ಅವರೇನೂ ಹೇಳಿರಲಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಸಚಿವ ಎಸ್ ಟಿ ಸೋಮಶೇಖರ್ ಸಿದ್ದರಾಮಯ್ಯ ಎಂದಿಗೂ ನಮ್ಮನ್ನು ಪಕ್ಷದಿಂದ ಹೊರ ಹೋಗಿ ಎಂದು ಹೇಳಿಲ್ಲ. ಆದರೆ ಸರ್ಕಾರ ಏಕೆ ಬಿತ್ತು ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ. ಎರಡು ವರ್ಷದ ನಂತರ ಮತ್ತೆ ಏಕೆ ಈ ವಿಚಾರ ಚರ್ಚೆ ಮಾಡುತ್ತಿದ್ದೀರಿ? ನಮಗೂ ಎರಡು ವರ್ಷದಿಂದ ಹೇಳಿ ಹೇಳಿ ಸಾಕಾಗಿದೆ. ಇನ್ನು ಈ ವಿಚಾರದ ಚರ್ಚೆ ಬೇಡ ಎಂದು ಸಚಿವ ಎಸ್ ಟಿ ಸೋಮಶೇಖರ್ ಮಾರ್ಮಿಕವಾಗಿ ಹೇಳಿದರು.

ಕಾಂಗ್ರೆಸ್‌ನಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ನಡೀತಿದೆ:
ಡಿಕೆ ಶಿವಕುಮಾರ್​ ವಿರುದ್ಧ ಸಲೀಂ ಮತ್ತು ವಿ.ಎಸ್.ಉಗ್ರಪ್ಪ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ಇಇದು ಒಂದು ಷಡ್ಯಂತ್ರ ಎಂದರು. ಕಾಂಗ್ರೆಸ್‌ನಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ನಡೀತಿದೆ. ಒಬ್ಬರ ಮೇಲೊಬ್ಬರು ಪರಸ್ಪರ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಅವರ ವಿರುದ್ದ ಇವರು ಇವರ ವಿರುದ್ದ ಅವರು ಷಡ್ಯಂತರ ನಡೆಸುತ್ತಿದ್ದಾರೆ. ಇದು ಈಗ ಮುಂದುವರಿದಿದೆ. ನನಗೆ ಪರ್ಸೆಂಟೆಜ್ ವ್ಯವಹಾರದ ಬಗ್ಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಬರಿ ಶಾಸಕನಾಗಿದ್ದೆ ಅಷ್ಟೆ ಎಂದು ಮೈಸೂರಿನಲ್ಲಿ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

Also Read:
ಕಾಂಗ್ರೆಸ್ ಬುಡಕ್ಕೆ ಬೆಂಕಿ ಇಡುವುದು ಸಿದ್ದರಾಮಯ್ಯನವರೇ! ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

Also Read:
ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ; ಅದೇ ನನ್ನ ಕೊನೆಯ ಹೋರಾಟ: ಹೆಚ್​ಡಿ ಕುಮಾರಸ್ವಾಮಿ

ಬೈಕ್ ಫೀಚರ್ಸ್, ಕಾರ್ ಪ್ರೈಸ್​ನಲ್ಲಿ ಬಿಎಂಡಬ್ಲ್ಯು ಹೊಸ ಸ್ಕೂಟರ್|BMW New Scooter in India|TV9 AUTO EXPO

(ST Somashekar reacts to hd kumaraswamy statement on fall of previous coalition government)

Read Full Article

Click on your DTH Provider to Add TV9 Kannada