Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ; ಡಿಕೆ ಶಿವಕುಮಾರ್​ ಬಗ್ಗೆ ಕಾಂಗ್ರೆಸ್ ನಾಯಕರ ಸ್ಫೋಟಕ ಮಾತು!

ಸಿದ್ದರಾಮಯ್ಯ ಖಡಕ್ ಅಂದ್ರೆ ಖಡಕ್ ಆಗಿ ಮಾತನಾಡುತ್ತಾರೆ. ಶಿವಕುಮಾರ್ ಮಾತನಾಡುವಾಗ ತೊದಲುತ್ತಾರೆ ಅಂತ ಸಲೀಂ ಹೇಳಿದ್ದಾರೆ.

ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ; ಡಿಕೆ ಶಿವಕುಮಾರ್​ ಬಗ್ಗೆ ಕಾಂಗ್ರೆಸ್ ನಾಯಕರ ಸ್ಫೋಟಕ ಮಾತು!
ಕಾಂಗ್ರೆಸ್ ನಾಯಕ ವಿ .ಎಸ್ .ಉಗ್ರಪ್ಪ
Follow us
TV9 Web
| Updated By: sandhya thejappa

Updated on:Oct 13, 2021 | 11:59 AM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಕಾಂಗ್ರೆಸ್ ನಾಯಕರು (Congress Leader) ಸ್ಫೋಟಕ ಮಾತುಕತೆ ನಡೆಸಿದ್ದಾರೆ. ನಿನ್ನೆ (ಅ.12) ಬೆಂಗಳೂರಿನಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಸುದ್ದಿಗೋಷ್ಠಿ  ನಡೆಸಿದ್ದರು. ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನಾ ಇಬ್ಬರು ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಬಗ್ಗೆ ಸ್ಫೋಟಕ ಮಾತುಗಳನ್ನಾಡಿದ್ದಾರೆ. ಡಿಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಅಂತ ಸಲೀಂ ಹೇಳಿದ್ದಾರೆ. ಶಿವಕುಮಾರ್ ಬಳಿ ಸುಮಾರು 50ರಿಂದ 100 ಕೋಟಿ ಇದೆ ಅಂತ ಹೇಳಿರುವ ಸಲೀಂ, ಡಿಕೆ ಶಿವಕುಮಾರ್​ರದ್ದು ದೊಡ್ಡ ಸ್ಕ್ಯಾಮ್ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪ, ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ಅಂತ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಬಗ್ಗೆಯೂ ಇಬ್ಬರು ಕಾಂಗ್ರೆಸ್ ನಾಯಕರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಸಿದ್ದರಾಮಯ್ಯ ಖಡಕ್ ಅಂದ್ರೆ ಖಡಕ್ ಆಗಿ ಮಾತನಾಡುತ್ತಾರೆ. ಶಿವಕುಮಾರ್ ಮಾತನಾಡುವಾಗ ತೊದಲುತ್ತಾರೆ ಅಂತ ಸಲೀಂ ಹೇಳಿದ್ದಾರೆ. ಅವರೇನು ಡ್ರಿಂಕ್ಸ್ ಮಾಡ್ತಾರಾ? ಡ್ರಿಂಕ್ಸ್ ಮಾಡಲ್ಲ ಅಲ್ವಾ ಅಂತ ವಿಎಸ್ಉ ಗ್ರಪ್ಪ, ಸಲೀಂ ಮಾತುಕತೆಯ ವೇಳೆ ಚರ್ಚೆ ನಡೆಸಿದ್ದಾರೆ.

ಟಿವಿ9ಗೆ ವಿಎಸ್ ಉಗ್ರಪ್ಪ ಹೇಳಿದ್ದೇನು? ಈ ಬಗ್ಗೆ ಟಿವಿ9ಗೆ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ, ಸಲೀಂ ಹೇಳಿದ ಯಾವ ವಿಚಾರಕ್ಕೂ ನಾನು ರಿಯಾಕ್ಟ್ ಮಾಡಿಲ್ಲ. ನಾನು ಅಪ್ಪಿ ತಪ್ಪಿಯೂ ರಿಯಾಕ್ಟ್ ಮಾಡಿಯೇ ಇಲ್ಲ. ಡಿ.ಕೆ.ಶಿವಕುಮಾರ್ ಬಗ್ಗೆ ಸಲೀಂ ಏನೇ ಹೇಳಿರಬಹುದು. ಆದರೆ ಡಿಕೆಶಿಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ಹೇಳಿರೋದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾರ್ವಜನಿಕ ಬದುಕಿನಲ್ಲೇ ನಾನು ಇರುವುದಿಲ್ಲ. ಸಲೀಂ ಏನು ಹೇಳಿದ್ದರೋ ಅದನ್ನು ಕೇಳಿಸಿಕೊಂಡಿದ್ದೇನೆ. ನಾನು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಅವರಿಗೆ ತಿಳಿ ಹೇಳಲು ಆ ಸಮಯದಲ್ಲಿ ಆಗುವುದಿಲ್ಲ. ಹೀಗಾಗಿ ನಾನು ಕೇಳಿಸಿಕೊಂಡು ಸುಮ್ಮನೆ ಇದ್ದೆ. ನಾನು ಆ ಸಮಯದಲ್ಲಿ ಬೇರೆ ವಿಷಯಕ್ಕೆ ನಗಾಡಿದ್ದೆ. ಸಲೀಂ ಹೇಳಿರುವುದಕ್ಕೆ ನಾನು ಅಲ್ಲಿ ನಗಾಡಿಲ್ಲ. ಸಲೀಂ ಹೇಳಿದ ಯಾವುದನ್ನೂ ನಾನು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಸಲೀಂ ಹೇಳಿದಂತಿಲ್ಲ ನಮ್ಮ ಡಿ.ಕೆ.ಶಿವಕುಮಾರ್. ಸುದ್ದಿಗೋಷ್ಠಿಯಾದ ಬಳಿಕ ಸಲೀಂಗೆ ಬುದ್ಧಿ ಹೇಳಿದ್ದೇನೆ. ಡಿಕೆಶಿ ಬಗ್ಗೆ ಆ ರೀತಿ ಮಾತಾಡಬೇಡ ಎಂದು ಹೇಳಿದ್ದೇನೆ. ಡಿಕೆಶಿ ಯಾವ ಪರ್ಸೆಂಟೇಜ್‌ಗೂ ಪ್ರೋತ್ಸಾಹ ಕೊಡಲ್ಲ ಅಂತ  ವಿಎಸ್ ಉಗ್ರಪ್ಪ ಹೇಳಿಕೆ ನೀಡಿದ್ದಾರೆ.

ಇಬ್ಬರು ಕಾಂಗ್ರೆಸ್ ನಾಯಕರ ಮಾತುಕತೆ ಸಲೀಂ: ಹೇ ಏನಾಯಿತು ಸರ್, 6-8 ಪರ್ಸಂಟ್ ಇತ್ತು, ಡಿಕೆ ಬಂದು 12 ಪರ್ಸಂಟ್ ಮಾಡಿದ್ದರು. ಡಿಕೆ ಮಾಡಿಸ್ತಾರೆ. ಅಡ್ಜಸ್ಟ್​ಮೆಂಟ್ ಡಿಕೆದು ಇದೆ. ಉಗ್ರಪ್ಪ: ಹುಂ ಸಲೀಂ: ಉಪ್ಪಾರು, ಜಿ ಶಂಕರ್, ಹನುಮಂತಪ್ಪ, ಬಳ್ಳಾರಿಯವನು ಹನುಮಂತಪ್ಪ ಗೊತ್ತಲ್ಲ ನಿಮಗೆ. ಹೊಸಪೇಟೆ, ಇವನು ಉಪ್ಪಾರು ಬ್ಯಾಂಗಲೂರು, ಜಿ ಶಂಕರ್ ಉಡುಪಿ. ಉಗ್ರಪ್ಪ: ಉಪ್ಪಾರು ಬಿಜಾಪುರೂ ಸಲೀಂ: ಬಿಜಾಪುರದವರ. ಬಟ್ ಇಲ್ಲಿ ಮನೆ. ಎಸ್ ಎಂ.ಕೃಷ್ಣ ನ ಮನೆ ಎದುರಿಗೆ. ಉಗ್ರಪ್ಪ: ಬಟ್ ಇದು ಇದ್ಯಿಯಲ್ಲ. ಸಲೀಂ: ದೊಡ್ಡ ಸ್ಕ್ಯಾಂಡಲ್‌. ಕೆದಕ್ತಾ ಹೋದರೆ ಇವರದ್ದು ಬರುತ್ತೆ. ಉಗ್ರಪ್ಪ: ನಾ ನಿಮಗೆ ಹೇಳ್ಲಾ, ಕಣ್ ಮುಚ್. ಸಲೀಂ: ನಿಮ್ಗೆ ಗೊತ್ತಿಲ್ಲ ಸಾರ್. ನಮ್ಮ ಮುಳಗುಂದ್ 50-100 ಕೋಟಿ ಮಾಡಿದ್ದಾನೆ. ಅವನು 50-100 ಮಾಡಿದ್ದಾನೆ ಅಂದರೆ, ಇವನ ಹತ್ರ ಎಷ್ಟು ಇರಬೇಕು. ಡಿಕೆ ಹತ್ರಾ, ಲೆಕ್ಕ ಹಾಕಿ. ಇವನು ಬರೀ ಕಲೆಕ್ಷನ್ ಗಿರಾಕಿ. ಉಗ್ರಪ್ಪ: ನಿಮಗೆ ಗೊತ್ತಿಲ್ಲ, ನಾವೆಲ್ಲ ಪಟ್ಟು ಹಿಡಿದು ಅಧ್ಯಕ್ಷನ ಮಾಡಿಸಿದ್ದು. ನಮ್ ಬುಡಕ್ಕೆ ಹಾಕಿದ್ರು. ಸಲೀಂ:  ಮತ್ತೆ ನೀವು ನೋಡಿದ್ರಲ್ಲ. ಮಾತಾಡೋಕೆ ತೊದಲಿಸುತ್ತಾರೆ. ಏನ್ ಲೋ ಬಿಪಿನೋ, ನೋಡಿ ನೀವು. ಒಂತರ ಕುಡುಕರು. ಉಗ್ರಪ್ಪ: ಅದನ್ನೆ ಹೇಳಿದ್ದು ಇವಾಗ ಸಲೀಂ: ಅದೇ ಹೇಳಿ ಅವರಿಗೆ ಅಂಡರ್ ಸ್ಟ್ಯಾಂಡ್ ಆಗಿಲ್ಲ. ಅರ್ಥವಾಗಿಲ್ಲ ಅವರಿಗೆ. ಮೀಡಿಯಾದವರು ಏನು ಡ್ರಿಂಕ್ಸ್ ಮಾಡಿದ್ರಾ ಅಂತ ಅಂದ್ರು. ಡ್ರಿಂಕ್ಸ್ ಮಾಡಿಲ್ಲ ಅವರು. ಮಾತಿನ ಶೈಲಿನೆ ಹಂಗೆ.. .ಲೋ ಬಿಪಿ ಎಮೋಷನಲ್ಲಿ ಮತಾಡೋಕೆ ಹೋಗ್ತಾರೆ. ಇನ್ನೊಂದು ಅವರ ಬಾಡಿ ಲ್ಯಾಂಗ್ವೇಜ್ ಹೆಂಗಿದೆ. ಸಿದ್ದರಾಮಯ್ಯದ್ದು ಖಡಕ್ ಅಂದ್ರೆ ಖಡಕ್.

ಇದನ್ನೂ ಓದಿ

ಹೆಚ್​ಡಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಅದು ಪುಟಗೋಸಿ ಹುದ್ದೆನಾ? ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ: ಅಭ್ಯರ್ಥಿಗಳ ಆಯ್ಕೆಯಾಗಿ 5 ವಾರ; ಆದರೆ ಇನ್ನೂ ಸಿಕ್ಕಿಲ್ಲ ಅಧಿಕಾರ

Published On - 10:45 am, Wed, 13 October 21