ಬೆಂಗಳೂರು, ಆ.2: ಫೇಸ್ಬುಕ್ ಲೈವ್ನಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನಲೆ ಪಶ್ಚಿಮ ಬಂಗಾಳ(West Bangal) ಮೂಲದ ಬಿಜನ್ ದಾಸ್ ಎಂಬುವವನ ವಿರುದ್ಧ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಹೌದು ಬಿಜನ್ ದಾಸ್ ಎಂಬುವವನ ಸಾಮಾಜಿಕ ಜಾಲತಾಣದಲ್ಲಿ ‘ಮುಸ್ಲಿಮರೆಲ್ಲರೂ ಉಗ್ರರು, ಜಿಹಾದಿಗಳು ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಜೊತೆಗೆ ಮುಸ್ಲಿಂ ಧರ್ಮ, ಧರ್ಮಗುರುಗಳ ವಿರುದ್ಧ ಹಾಗೂ ಹೆಣ್ಣುಮಕ್ಕಳ ಚಾರಿತ್ರ್ಯದ ವಿರುದ್ದ ಮಾತನಾಡಿರುವ ಕುರಿತು ಆರೋಪಿಸಿ ಆಶೀಕ್ ಹುಸೇನ್ ಎಂಬುವವರು ಇತನ ಮೇಲೆ ದೂರು ನೀಡಿದ್ದಾರೆ.
ತುಮಕೂರು: ಗ್ಯಾಸ್ ರೀಫಿಲಿಂಗ್ ಅಡ್ಡೆ ಮೇಲೆ ಏಕಾಏಕಿ ಕುಣಿಗಲ್ ಪೊಲೀಸರು ದಾಳಿ ಮಾಡಿದ್ದು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಕಂಪನಿಯ 269 ಗ್ಯಾಸ್ ಸಿಲಿಂಡರ್ನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ಗ್ಯಾಸ್ ಸಿಲಿಂಡರ್ಗಳನ್ನು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೋರಲಿಂಗನಪಾಳ್ಯದ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸ್ ಇನ್ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದಲ್ಲಿ ದಾಳಿ ಮಾಡಿದ್ದರು. ಈ ವೇಳೆ ಪೊಲೀಸರನ್ನ ಕಂಡು ಆರೋಪಿ ಕುಮಾರ್ ಎಂಬಾತ ಎಸ್ಕೇಪ್ ಆಗಿದ್ದಾನೆ.
ಇದನ್ನೂ ಓದಿ:ಲಿಂಗಾಯತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆ ಅರ್ಜಿ ವಜಾ
ಇನ್ನು ದಾಳಿ ಮಾಡಿದ ಪೊಲೀಸರು ತೋಟದ ಮನೆಯ ಬೀಗ ಹೊಡೆದು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿರುವುದು ಪತ್ತೆಯಾಗಿದೆ. ದಾಳಿ ವೇಳೆ ಲಕ್ಷಾಂತರ ಮೌಲ್ಯದ ವಿವಿಧ ಕಂಪನಿಯ 269 ಗ್ಯಾಸ್ ಸಿಲಿಂಡರ್ಗಳು ಸಿಕ್ಕಿದ್ದು, ಜೊತೆಗೆ ಒಂದು ಬೋಲೆರೋ ವಾಹನ, ಗ್ಯಾಸ್ ರೀಫಿಲಿಂಗ್ ವಸ್ತುಗಳು ವಶ ಪಡೆದು, ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ