ಡಿಜಿಟಲ್ ಪಾವತಿ​ ಮೂಲಕ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸುತ್ತಿರುವ ಬೆಂಗಳೂರು ಟ್ರಾಫಿಕ್​ ಪೊಲೀಸ್

​​ಬೆಂಗಳೂರು ಸಂಚಾರ ಪೊಲೀಸರು ಇಷ್ಟು ದಿನಗಳಕಾಲ ದಂಡವನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸುತ್ತಿದ್ದರು. ಆದರೆ ಇದೀಗ ಡಿಜಿಟಲ್ ಪಾವತಿ​ ಮೂಲಕವೂ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸಿದ್ದಾರೆ.

ಡಿಜಿಟಲ್ ಪಾವತಿ​ ಮೂಲಕ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸುತ್ತಿರುವ ಬೆಂಗಳೂರು ಟ್ರಾಫಿಕ್​ ಪೊಲೀಸ್
ಸಾಂದರ್ಭಿಕ ಚಿತ್ರ
Follow us
Jagadisha B
| Updated By: ವಿವೇಕ ಬಿರಾದಾರ

Updated on:Aug 02, 2023 | 1:33 PM

ಬೆಂಗಳೂರು: ಸಂಚಾರಿ ನಿಯಮ ಪಾಲಿಸುವಂತೆ ಟ್ರಾಫಿಕ್​ ಪೊಲೀಸರು (Traffic Police) ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಾಹನ ಸವಾರರು ನಿಯಮ ಉಲ್ಲಂಘಿಸಿದರೇ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಲಾಗುತ್ತದೆ. ಬೆಂಗಳೂರು (Bengaluru) ಸಂಚಾರ ಪೊಲೀಸರು ಇಷ್ಟು ದಿನಗಳಕಾಲ ದಂಡವನ್ನು ನಗದು ರೂಪದಲ್ಲಿ ಮಾತ್ರ ಸ್ವೀಕರಿಸುತ್ತಿದ್ದರು. ಆದರೆ ಇದೀಗ ಡಿಜಿಟಲ್ (Digital) ಪಾವತಿ​ ಮೂಲಕವೂ ದಂಡ ಸ್ವೀಕರಿಸಲು ಪ್ಲಾನ್​ ರೂಪಿಸಿದ್ದಾರೆ. ಹೌದು ಡಿಜಿಟಲೀಕರಣಗೊಂಡು ಕ್ಯಾಷ್​ ಲೆಸ್​ ದುನಿಯಾ ಆರಂಭವಾಗಿದ್ದು, ಜನರು ಜೇಬಿನಲ್ಲಿ ಹಣ ಇಟ್ಟುಕೊಳ್ಳುವುದನ್ನು ಕಡಿಮೆ ಮಾಡಿದ್ದಾರೆ. ಎಲ್ಲವೂ ಫೋನ್​ಪೇ, ಗೂಗಲ್​ ಪೇ, ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​​​.

ಹೀಗಾಗಿ ಸಂಚಾರ ಪೊಲೀಸರು ಕೂಡ ಡಿಜಿಟಲೀಕರಣದತ್ತ ವಾಲುತ್ತಿದ್ದಾರೆ. ಟ್ರಾಫಿಕ್ ಫೈನ್​ ಅನ್ನು ಡಿಜಿಟಲ್​​ ಮೂಲಕವೂ ಪಡೆಯಲಿದ್ದಾರೆ. ಹೌದು ಎಲ್ಲಾ ಮಾದರಿಯಲ್ಲೂ ದಂಡ ಕಲೆಕ್ಟ್ ಮಾಡಲು ಪೊಲೀಸರು ಪ್ಲಾನ್ ಮಾಡಿದ್ದು, ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್​​ನಲ್ಲೂ ದಂಡ ಸ್ವೀಕರಿಸಲು ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಮೂಲಗಳು ಟಿವಿ9 ಡಿಜಿಟಲ್​​ಗೆ ತಿಳಿಸಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾದ ಟ್ರಾಫಿಕ್ ಸಮಸ್ಯೆ; ಕಾರಣ ಗುರುತು ಮಾಡಿದ ಸಿಟಿ ಟ್ರಾಫಿಕ್ ಪೊಲೀಸರು

ಈ ಹಿನ್ನೆಲೆ ಸಂಚಾರ ಪೊಲೀಸ್​ ಇಲಾಖೆ ಭಾರತ್ ಪೇ ಜೊತೆ ಕೈ ಜೋಡಿಸಲು ಮುಂದಾಗಿದೆ ಎಂಬ ಅಂಶ ತಿಳಿದುಬಂದಿದೆ. ಇದರಿಂದ ಇನ್ಮುಂದೆ ಕ್ಯಾಶ್ ಇಲ್ಲ, ಪೆಟಿಎಂ ಇಲ್ಲ ಅಂತ ಸಬೂಬು ಹೇಳುವ ಹಾಗೆ ಇಲ್ಲ. ಈ ಹೊಸ ಯೋಜನೆಯನ್ನು ಸಂಚಾರಿ ಪೊಲೀಸರು ಶೀಘ್ರದಲ್ಲೇ ಜಾರಿ ಮಾಡಲು ಚಿಂತಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:30 pm, Wed, 2 August 23

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು