ಬೆಂಗಳೂರು: ಮೊದಲೇ ಪೆಟ್ರೋಲ್ ಬೆಲೆ ಗಗನಕ್ಕೆ ಚಿಮ್ಮಿದೆ, ಅಂಥಾದ್ರಲ್ಲಿ ನೀರು ಮಿಶ್ರಣ ಮಾಡಿ ಮಾರಾಟ ಮಾಡಿದರೆ ಗ್ರಾಹನ ಗತಿಯೇನು? ಎಂದು ಕೇಳುವಂತಾಗಿದೆ ಜೆ.ಪಿ. ನಗರದಲ್ಲಿರುವ ಪೆಟ್ರೋಲ್ ಬಂಕ್ ಪುರಾಣ ಕೇಳಿದಾಗ. ಘಟನೆ ಕಳೆದ ವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸೆಂಚ್ಯುರಿ ಬಾರಿಸಿರೋ ಪೆಟ್ರೋಲ್ ದರದ ಮಧ್ಯೆ ಮಾಲೀಕರ ಚೆಲ್ಲಾಟ ಕಂಡು ಜನ ರೋಸಿಹೋಗಿದ್ದಾರೆ. ಪೊಲೀಸ್ ಠಾಣೆಗೆ ದೂರು ನೀಡಲು ವಾಹನ ಸವಾರರು ಮುಂದಾಗಿದ್ದಾರೆ.
ಪೆಟ್ರೋಲ್‌ಗೆ ನೀರು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಆರೋಪ ಬೆಂಗಳೂರಿನ ಜೆ.ಪಿ.ನಗರದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ವಿರುದ್ಧ ಇದೀಗ ಕೇಳಿಬಂದಿದೆ. ರೊಚ್ಚಿಗೆದ್ದ ಗ್ರಾಹಕರು ಪೆಟ್ರೋಲ್ ಬಂಕ್‌ಗೆ ಮುತ್ತಿಗೆ ಹಾಕಿದ್ದಾರೆ. ಪೆಟ್ರೋಲ್‌ನಲ್ಲಿ ನೀರು ಮಿಶ್ರಣ ಮಾಡುತ್ತರುವ ಹಿನ್ನೆಲೆಯಲ್ಲಿ ವಾಹನಗಳ ಇಂಜಿನ್‌ಗೆ ಹಾನಿಯುಂಟಾಗುತ್ತದೆ. ಇದರಿಂದ 10ಕ್ಕೂ ಹೆಚ್ಚು ವಾಹನಗಳ ಇಂಜಿನ್‌ಗೆ ಹಾನಿಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಪೆಟ್ರೋಲ್‌ಗೆ ನಾವು ನೀರು ಮಿಶ್ರಣ ಮಾಡಿಲ್ಲ. ಮಳೆಯಿಂದಾಗಿ ಪೆಟ್ರೋಲ್‌ಗೆ ನೀರು ಮಿಶ್ರಣವಾಗಿರಬಹುದು ಎಂದು ಸಿಬ್ಬಂದಿ ಹೇಳುತ್ತಿದ್ದಾರಾದರೂ 3-4 ದಿನದಿಂದ ಈ ಭಾಗದಲ್ಲಿ ಮಳೆಯೇ ಹೆಚ್ಚಾಗಿ ಆಗಿಲ್ಲ! ಅದು ಹೇಗೆ ಪೆಟ್ರೋಲ್‌ಗೆ ನೀರು ಸೇರುತ್ತೆ ಎಂದು ಜನ ಪ್ರಶ್ನೆ ಮಾಡತೊಡಗಿದ್ದಾರೆ.
Power Star ಸಿನಿಮಾಗಳ ಬಗ್ಗೆ ಹಿರಿಯ ಅಭಿಮಾನಿ ಗುಣಗಾನ ಮಾಡಿದ್ದು ಹೇಗೆ? |Tv9Kannada
Also Read:
Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು
(despite petrol prices hike jp nagar petrol bunk allegedly mixes water with petrol)
Published On - 1:06 pm, Mon, 1 November 21