ನಟ ಪುನೀತ್ಗೆ ಹೃದಯಾಘಾತ ಬೆನ್ನಲ್ಲೇ ಬೆಚ್ಚಿಬಿದ್ದ ಸಿಟಿ ಜನ: ಜಿಮ್ಗಳಿಂದ ದೂರವಾಗಿ, ಹಾರ್ಟ್ ಚೆಕಪ್ಗೆ ಜಯದೇವ ಆಸ್ಪತ್ರೆಗೆ ದೌಡು
ಬೆಂಗಳೂರು: ಯುವ ನಟ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಯಾಘಾತವಾಗಿ ಸಡನ್ ಡೆತ್ ಸಂಭವಿಸಿದ್ದೇ ಸಿಟಿ ಜನ್ರು ಬೆಚ್ಚಿ ಬಿದಿದ್ದಾರೆ. ಇದರಿಂದ ಜಯದೇವ ಆಸ್ಪತ್ರೆಗೆ ತಪಾಸಣೆ, ಚಿಕಿತ್ಸೆಗೆ ಬರುತ್ತಿರುವ ಜನರ ಸಂಖ್ಯೆ ಏರುಗತಿಯಲ್ಲಿದೆ. ನಟ ಪುನೀತ್ ನಿಧನದಿಂದ ಭಯ ಬಿದ್ದಿರೊ ಸಿಲಿಕಾನ್ ಸಿಟಿ ಜನರು ಆರೋಗ್ಯದ ತಪಾಸಣೆಗೆ ಹೃದಯ ಚಿಕಿತ್ಸೆ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಇದೇ ವೇಳೆ ಇಷ್ಟು ದಿನ ವ್ಯಾಯಾಮ ಕಸರತ್ತು ಮಾಡಿಕೊಂಡಿರುತ್ತಿದ್ದ ಜನರೂ ಜಿಮ್ಗಳಿಂದ ವಿಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಣ್ಣಪುಟ್ಟ ಹೃದಯ ಸಮಸ್ಯೆ ಇರುವವರು ಸಹ […]
ಬೆಂಗಳೂರು: ಯುವ ನಟ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಯಾಘಾತವಾಗಿ ಸಡನ್ ಡೆತ್ ಸಂಭವಿಸಿದ್ದೇ ಸಿಟಿ ಜನ್ರು ಬೆಚ್ಚಿ ಬಿದಿದ್ದಾರೆ. ಇದರಿಂದ ಜಯದೇವ ಆಸ್ಪತ್ರೆಗೆ ತಪಾಸಣೆ, ಚಿಕಿತ್ಸೆಗೆ ಬರುತ್ತಿರುವ ಜನರ ಸಂಖ್ಯೆ ಏರುಗತಿಯಲ್ಲಿದೆ. ನಟ ಪುನೀತ್ ನಿಧನದಿಂದ ಭಯ ಬಿದ್ದಿರೊ ಸಿಲಿಕಾನ್ ಸಿಟಿ ಜನರು ಆರೋಗ್ಯದ ತಪಾಸಣೆಗೆ ಹೃದಯ ಚಿಕಿತ್ಸೆ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ. ಇದೇ ವೇಳೆ ಇಷ್ಟು ದಿನ ವ್ಯಾಯಾಮ ಕಸರತ್ತು ಮಾಡಿಕೊಂಡಿರುತ್ತಿದ್ದ ಜನರೂ ಜಿಮ್ಗಳಿಂದ ವಿಮುಖರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಣ್ಣಪುಟ್ಟ ಹೃದಯ ಸಮಸ್ಯೆ ಇರುವವರು ಸಹ ಹೃದಯ ಚಿಕಿತ್ಸೆಗೆಂದು ಬರ್ತಿದ್ದಾರೆ. ಜಯದೇವ ಆಸ್ಪತ್ರೆಯ ಓಪಿಡಿಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ.
ಯುವ ಜನತೆಗೆ ಹೆಚ್ಚಾಗಿ ಕಾಡ್ತಿದ್ಯಾ ಹೃದಯ ಸಂಬಂಧಿ ಸಮಸ್ಯೆ? ಜಿಮ್ನಲ್ಲಿ ಹೆವಿ ವರ್ಕೌಟ್ ಗೀಳಿನಿಂದ ಜೀವಕ್ಕಿದ್ಯಾ ಗಂಡಾಂತರ? ಸಿಕ್ಸ್ ಪ್ಯಾಕ್ ಮುಖ್ಯನಾ.. ಬಾಡಿ ಫಿಟ್ ಆಗಿರೋದು ಮುಖ್ಯನಾ? ಆರೋಗ್ಯವಂತರಾಗಿರಲು ವರ್ಕೌಟ್ ಎಷ್ಟಿರಬೇಕು.. ಹೇಗಿರಬೇಕು..? ಸ್ವಲ್ಪ ಎಚ್ಚರ ತಪ್ಪಿದ್ರು ‘ಹೃದಯ’ದ ಮಾತೇ ನಿಂತೋಗುತ್ತಾ..? ಎಂದು ಜನ ತಮ್ಮ ತಮ್ಮಲ್ಲೇ ಪಿಸುಗುಟ್ಟುತ್ತಿದ್ದಾರೆ.
ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ವ್ಯಾಯಾಮ ಮಾಡಬೇಕು:
2 ದಿನದಿಂದ ಹೃದ್ರೋಗ ತಪಾಸಣೆಗೆ ಬರುವವರ ಸಂಖ್ಯೆ ಹೆಚ್ಚಳವಾಗ್ತಿದೆ. ಕಳೆದ 2 ದಿನದಲ್ಲೇ ಶೇ. 25ರಷ್ಟು ಜನ ಹೆಚ್ಚಾಗಿ ಚಿಕಿತ್ಸೆಗಾಗಿ ಬಂದಿದ್ದಾರೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ, ಹೆಸರಾಂತ ಡಾ. ಸಿ.ಎನ್. ಮಂಜುನಾಥ್ ಟಿವಿ9 ಗೆ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ರಜಾ ದಿನವಾದರೂ ಸಹ ಹೃದ್ರೋಗ ತಪಾಸಣೆಗೆ ಬರ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರು ಜಯದೇವ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗತೊಡಗಿದೆ. 105 ಹೃದ್ರೋಗ ತಜ್ಞರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಇದ್ದಾರೆ. ಪ್ರತಿ ದಿನ 1200 ಹೊರ ರೋಗಿಗಳು ಬರುತ್ತಿದ್ದರು. ಆದರೆ ಈಗ 1500ಕ್ಕೂ ಹೆಚ್ಚು ಹೊರ ರೋಗಿಗಳು ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೊತೆಗೆ, ವ್ಯಾಯಾಮ ಮಾಡುವುದರಲ್ಲಿ ಪೈಪೋಟಿ ಇರಬಾರದು. ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟು ವ್ಯಾಯಾಮ ಮಾಡಬೇಕು ಎಂದೂ ಕಿವಿಮಾತು ಹೇಳಿದ್ದಾರೆ.
Jayadeva Hospital ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಸುದ್ದಿಗೋಷ್ಠಿ | Tv9 Kannada
(After actor puneeth rajkumar sudden death bangalore youth rush to heart treatment hospitals)
Published On - 1:41 pm, Mon, 1 November 21