ಬೆಂಗಳೂರು: ಕೊರೊನಾ ಕಡಿಮೆಯಾಗುತ್ತಿದ್ದಂತೆ ಮಧುಮೇಹಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವವರ ಸಂಖ್ಯೆಯಲ್ಲಿಯೂ ಏರಿಕೆ ಕಂಡುಬಂದಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ 12.80 ಲಕ್ಷ ಜನರಿಗೆ ತಪಾಸಣೆ ಮಾಡಲಾಗಿದ್ದು, ಈ ಪೈಕಿ 27,990 ಜನರಲ್ಲಿ ಮಧುಮೇಹ (Diabetes) ಪತ್ತೆಯಾಗಿದೆ. ಇನ್ನೂ ಮಧುಮೇಹ ಕೇಸ್ಗಳು ಏರಿಕೆಯಾಗಲು ಕಾರಣ ಕೊರೊನಾ ಬಳಿಕ ಜನರ ಜೀವನಶೈಲಿಯಲ್ಲಿನ (lifestyle) ಬದಲಾವಣೆ. ವ್ಯಾಯಾಮ ಕೊರತೆ, ಬದಲಾಗಿರುವ ಆಹಾರ ಪದ್ಧತಿ, ಬೊಜ್ಜು ಹೆಚ್ಚಾಗಿ ಜನರು ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸೋಂಕಿತರೇ ಹೆಚ್ಚಾಗಿ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ
ಎರಡನೇ ಅಲೆ ನಿಯಂತ್ರಣಗೊಳ್ಳುತ್ತಿದ್ದಂತೆ ಕೊವಿಡೇತರ ಚಿಕಿತ್ಸೆಗಳು ಹೆಚ್ಚಳವಾಗಿವೆ. ಅದರಲ್ಲೂ ಕೊರೊನಾ ಸೋಂಕಿತರೇ ಹೆಚ್ಚಾಗಿ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳಲ್ಲಿಯೂ ಕೂಡ ಟೈಪ್-2 ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ 5 ರಿಂದ 8 ವರ್ಷದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ.
ಇನ್ನು ಮಧುಮೇಹದ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಭಾರಿ ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ಮಾತ್ರ ನಿಂಯತ್ರಿಸಲು ಸಾಧ್ಯ. ಸಮತೋಲನ ಆಹಾರ ಸೇವನೆ, ದೈಹಿಕ ಚಟುವಟಿಕೆ ಜೊತಗೆ ಉತ್ತಮ ಜೀವನ ಅಳವಡಿಸಿಕೊಳ್ಳಬೇಕು, ಅಲ್ಲದೇ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಳಿತದ ಮೇಲೆ ಹೆಚ್ಚು ಗಮನವಿರಬೇಕು.
ಮಧುಮೇಹಕ್ಕೆ ಕಾರಣ
ಕಳಪೆ ಜೀವನ ಶೈಲಿ, ಬೊಜ್ಜು ಮೈ ಅಥವಾ ಸ್ಥೂಲಕಾಯ ಮಧುಮೇಹಕ್ಕೆ ಕಾರಣವಾಗುತ್ತಿದೆ. ಯಾವುದೇ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೋಳ್ಳದೇ ಇರುವುದು, ಕಂಪ್ಯೂಟರ್, ಮೊಬೈಲ್, ಟಿವಿ ಎದುರು ಬಳಹ ಕಾಲ ಕುಳಿತುಕೊಳ್ಳುವುದು, ಆಹಾರ ಪದ್ಧತಿಗಳಿಂದಾಗಿ ಮಧುಮೇಹ ಹೆಚ್ಚಾಗುತ್ತಿದೆ.
ಇದನ್ನೂ ಓದಿ:
ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಕೊರೊನಾ ಕಂಟಕ; ಕೊವಿಡ್ ಮಾರ್ಗಸೂಚಿಗಳಿಂದ ಮಾನಸಿಕ ಒತ್ತಡ ಹೆಚ್ಚಳ
ಬೆಂಗಳೂರು: ನಿರಂತರವಾಗಿ ಚಳಿ ಹಾಗೂ ಮಳೆ; ಡೆಂಗ್ಯೂ, ಚಿಕನ್ ಗುನ್ಯಾ ಕೇಸ್ ಹೆಚ್ಚಳ
Published On - 11:32 am, Mon, 15 November 21