ಕರ್ನಾಟಕ ರಾಜ್ಯದ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದೇನೆ, ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ; ಸಿಎಂ ಬೊಮ್ಮಾಯಿ
ರಾಜ್ಯದ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದೇನೆ. ನಮ್ಮ ಪ್ರತಿಪಾದನೆಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾತನಾಡಿದ ಬೊಮ್ಮಾಯಿ, ಮೇಕೆದಾಟು ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದೇನೆ.
ಬೆಂಗಳೂರು: ತಿರುಪತಿಯಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಯಶಸ್ವಿ ಸಭೆ ನಡೆದಿದ್ದು, ಸಭೆ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿಕೆ ನೀಡಿದ್ದಾರೆ. ಗೋದಾವರಿ, ಕೃಷ್ಣ ನದಿಗಳ ಜೋಡಣೆ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ನೀರಿನ ಪಾಲಿನ ಬಗ್ಗೆ ಪ್ರಶ್ನೆ ಮಾಡಲಾಗಿದೆ. ರಾಜ್ಯದ ಅಹವಾಲು ಪರಿಗಣಿಸಿ ಜಲಶಕ್ತಿ ಮಂತ್ರಾಲಯದ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಲಾಗಿದೆ. ಕರ್ನಾಟಕದ ಅಹವಾಲು ಪರಿಗಣಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ವಿಷಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ್ದೇನೆ. ನಮ್ಮ ಪ್ರತಿಪಾದನೆಗೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಮಾತನಾಡಿದ ಬೊಮ್ಮಾಯಿ, ಮೇಕೆದಾಟು ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದೇನೆ. ತಮಿಳುನಾಡು ಮುಖ್ಯಮಂತ್ರಿ ಸಭೆಗೆ ಬಂದಿರಲಿಲ್ಲ. ಹೀಗಾಗಿ ಸಭೆಯಲ್ಲಿ ಆ ಬಗ್ಗೆ ಪ್ರಸ್ತಾಪವಾಗಿಲ್ಲ. ಮೇಕೆದಾಟು ವಿಚಾರ ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಆದಷ್ಟು ಬೇಗ ಯೋಜನೆ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇವೆ ಎಂದು ನುಡಿದರು.
ತಮಿಳುನಾಡಿನಲ್ಲಿ ನೀರಿನ ರಾಜಕಾರಣ ಯಾವಾಗಲೂ ನಡೆಯುತ್ತದೆ. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಅಲ್ಲಿ ತಗಾದೆ ಇರುತ್ತದೆ. ಅವರ ಯೋಜನೆಗಳ ಬಗ್ಗೆ ನಮ್ಮ ಆಕ್ಷೇಪವೂ ಇದೆ. ನಮ್ಮ ಯೋಜನೆಗಳಿಗೆ ಅವರಿಂದಲೂ ಆಕ್ಷೇಪ ವ್ಯಕ್ತವಾಗಿದೆ. ನ್ಯಾಯಸಮ್ಮತ ಪರಿಹಾರ ಆಗಬೇಕಾಗಿದೆ ಎಂದು ಸಿಎಂ ಹೇಳಿದರು.
ಮುಂದುವರಿದು ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದಲ್ಲಿ ದಾಖಲೆ ಇದ್ದರೆ ಕೊಡಲಿ. ED ಅಥವಾ ನಮ್ಮ ಪೊಲೀಸರಿಗೆ ದಾಖಲೆ ಕೊಡಲಿ. ಇದೇ ಮಾತನ್ನು ನಾವು ಹಲವು ಬಾರಿ ಹೇಳಿದ್ದೇನೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಏನೂ ವಿಶೇಷ ಇಲ್ಲ. ಪ್ರಕರಣವನ್ನು ಜೀವಂತವಾಗಿ ಇಡಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಬ್ಯುಸಿನೆಸ್ ಸೈಕಲ್ NFO ಒಂದು ರೀತಿಯ ಎಲ್ಲ ಹವಾಮಾನ ನಿಧಿಯಾಗಿದೆ: ABSLMFನ CIO ಮಹೇಶ್ ಪಾಟೀಲ್
Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದಿನಿಂದ ಬುಧವಾರದವರೆಗೆ ಪವರ್ ಕಟ್
Published On - 1:00 pm, Mon, 15 November 21