ಅಂಗಡಿ ಮಾಲೀಕರ ಪ್ರತಿಭಟನೆ; ಏರ್‌ಪೋರ್ಟ್‌ ಸಂಪರ್ಕಿಸುವ ರಸ್ತೆ ಕಿ.ಮೀ ​ಗಟ್ಟಲೇ ಟ್ರಾಫಿಕ್​ ಜಾಮ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 08, 2023 | 10:01 PM

ಬೆಂಗಳೂರಿನ ಸಹಕಾರ ನಗರದಲ್ಲಿ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಈ ಹಿನ್ನೆಲೆ ಅಂಗಡಿ ಮಾಲೀಕರಿಂದ ಏರ್‌ಪೋರ್ಟ್‌ಗೆ ಸಂಪರ್ಕಿಸುವ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಕಿ.ಮೀ ಗಟ್ಟಲೇ ಟ್ರಾಫಿಕ್‌ಜಾಮ್‌ ಉಂಟಾಗಿದ್ದು, ಸವಾರರ ಪರದಾಟ ನಡೆಸಿದ್ದಾರೆ.

ಅಂಗಡಿ ಮಾಲೀಕರ ಪ್ರತಿಭಟನೆ; ಏರ್‌ಪೋರ್ಟ್‌ ಸಂಪರ್ಕಿಸುವ ರಸ್ತೆ ಕಿ.ಮೀ ​ಗಟ್ಟಲೇ ಟ್ರಾಫಿಕ್​ ಜಾಮ್​
ಬೆಂಗಳೂರಿನಲ್ಲಿ ಅಂಗಡಿ ಮಾಲೀಕರಿಂದ ಪ್ರತಿಭಟನೆ
Follow us on

ಬೆಂಗಳೂರು, ನ.08: ಮಹಾನಗರದಲ್ಲಿ ಮಳೆ(Rain)ಯ ಅಬ್ಬರಕ್ಕೆ ಅಂಗಡಿ ಮಾಲೀಕರು ಕಂಗಾಲಾಗಿದ್ದಾರೆ. ಇಂದು(ನ.08) ಸಂಜೆ ಬೆಂಗಳೂರಿನ ಸಹಕಾರ ನಗರ(Sahakara Nagar)ದಲ್ಲಿ ಸುರಿದ ಮಳೆಯಿಂದ ಅವಾಂತರ ಉಂಟಾಗಿದ್ದು, ತಗ್ಗು ಪ್ರದೇಶಗಳಿಗೆ ನುಗ್ಗಿರುವ ಮಳೆ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಹೌದು, ಅಂಗಡಿಗಳಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಈ ಹಿನ್ನೆಲೆ ಅಂಗಡಿ ಮಾಲೀಕರಿಂದ ಏರ್‌ಪೋರ್ಟ್‌ಗೆ ಸಂಪರ್ಕಿಸುವ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಕಿ.ಮೀ ಗಟ್ಟಲೇ ಟ್ರಾಫಿಕ್‌ಜಾಮ್‌ ಉಂಟಾಗಿದ್ದು, ಸವಾರರ ಪರದಾಟ ನಡೆಸಿದ್ದಾರೆ.

ಪೊಲೀಸರಿಂದ ರಸ್ತೆ ತಡೆದವರ ಮನವೊಲಿಕೆ

ಇನ್ನು ಅಂಗಡಿ ಮಾಲೀಕರ ಪ್ರತಿಭಟನೆಗೆ ಸ್ಥಳೀಯರು ಸಹ ಸಾಥ್​ ಕೊಟ್ಟಿದ್ದಾರೆ. ಹಲವು ದಿನಗಳಿಂದ ಈ ಸಮಸ್ಯೆ  ಎದುರಿಸುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್‌ ಪೊಲೀಸರು,  ಪ್ರತಿಭಟನಾಕಾರರ ಮನವೊಲಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಮಳೆಗೆ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ: ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್

ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ಮಳೆ

ರಾಜ್ಯದಲ್ಲಿ ಬರಗಾಲ ಮನೆ ಮಾಡಿದ್ದು, ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯ ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ನವೆಂಬರ್​​ 6ರ ರಾತ್ರಿ ಭಾರಿ ಮಳೆಯಾಗಿತ್ತು. ಇದು 2015 ರ ನಂತರ ನವೆಂಬರ್​ ತಿಂಗಳಲ್ಲಿ ಸುರಿದ ಭಾರಿ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ನಗರದಲ್ಲಿ 7 ಸೆಂ.ಮೀ ಗಿಂತ ಹೆಚ್ಚು ಮಳೆಯಾಗಿತ್ತು. ಮಂಗಳವಾರ ಕೂಡ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಸಂಜೆಯವರೆಗೆ 26.1 ಮಿ.ಮೀ ಮಳೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 pm, Wed, 8 November 23