ಬೆಂಗಳೂರು, (ಸೆಪ್ಟೆಂಬರ್ 04): ಲೋಕಸಭೆ (Loksabha Elections 2024)ಗುರಿ ಇಟ್ಟುಕೊಂಡು ವೋಟ್ ಶೇರಿಂಗ್ ಹೆಚ್ಚಿಸಿಕೊಳ್ಳಲು ಕಾರ್ಯಕರ್ತರಿಗೆ ಗಾಳ ಹಾಕುತ್ತಿರುವ ಕೈ ಪಡೆ, ಆಪರೇಷನ್ ಹಸ್ತ(Operation Hasta) ನಡೆಸುತ್ತಿದೆ, ಆದ್ರೆ, ಇದೇ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಅಸಮಾಧಾನ ಕಿಚ್ಚು ಸ್ಫೋಟಗೊಂಡಿದೆ. ಅಂದಹಾಗೆ, ಲೋಕಸಭೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ (Congress) ರಾಜ್ಯ ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ ನಡೆಸಿ. ಪದಾಧಿಕಾರಿಗಳನ್ನ ಅಭಿನಂದಿಸಿ, ಹುರಿದುಂಬಿಸಲಾಯ್ತು. ಈ ಮೂಲಕ ಲೋಕಸಭೆಗೆ ಪ್ರಚಾರ ಕಾರ್ಯದ ರೂಪರೇಷೆ ಚರ್ಚೆ ನಡೆಸಲಾಯ್ತು. ಆದ್ರೆ, ಸಭೆಯಲ್ಲಿ ಕೆಲ ನಾಯಕರ ಅಸಮಾಧಾನ ಸ್ಫೋಟವಾಗಿದೆ.
KPCC ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವರು ಭಾಗಿಯಾಗಿದ್ದರು. ಲೋಕಸಭಾ ಗೆಲುವಿಗೆ ರಣತಂತ್ರ ರೂಪಿಸಲಾಯ್ತು. ಆದ್ರೆ, ಇದೇ ಸಭೆಯಲ್ಲಿ ಆಪರೇಷನ್ ಹಸ್ತದ ಬಗ್ಗೆ ಪ್ರಸ್ತಾಪಿಸಿದ ಕಾರ್ಯಕರ್ತರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹೌದು.. ಆಪರೇಷನ್ ಹಸ್ತ ಪಾಲಿಟಿಕ್ಸ್‌ಗೆ ಪ್ರಚಾರ ಸಮಿತಿ ಸಭೆಯಲ್ಲಿ ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಮೊದಲಿಂದಲೂ ಪಕ್ಷಕ್ಕಾಗಿ ಕೆಲಸ ಮಾಡುತ್ತಾ ಬಂದಿದ್ದೇವೆ. ಯುವ ಕಾಂಗ್ರೆಸ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಕೆಲಸ ಮಾಡಿದ್ದೇವೆ. ಆದರೆ ಬೇರೆ ಪಕ್ಷಗಳಿಂದ ನೇರವಾಗಿ ಕಾಂಗ್ರೆಸ್ ಸೇರ್ಪಡೆಯಾಗಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ, ಹೀಗಿದ್ದಾಗ ನಾವು ಏನು ಮಾಡಬೇಕು? ಎಂದು ಆಪರೇಷನ್ ಹಸ್ತಕ್ಕೆ ಪದಾಧಿಕಾರಿಗಳು ಬೇಸರ ಹೊರಹಾಕಿದ್ದಾರೆ.
ಇನ್ನೂ ಪ್ರಚಾರ ಸಮಿತಿ ಸಭೆಯಲ್ಲಿ ನಿಗಮ ಮಂಡಳಿ ಕೂಗೆದ್ದಿದೆ. ಶಾಸಕರಿಗೆ ದಯವಿಟ್ಟು ನಿಗಮಮಂಡಳಿ ಕೊಡಬೇಡಿ ಎಂದು ಕಿತ್ತೂರು ಕರ್ನಾಟಕ ಹೈದರಾಬಾದ್ ಕರ್ನಾಟಕದ ಭಾಗದ ಪ್ರಚಾರ ಸಮಿತಿ ಮುಖಂಡರು ಆಗ್ರಹಿಸಿದ್ದಾರೆ. ನಿಗಮ ಮಂಡಳಿ ಸ್ಥಾನ ಕಾರ್ಯಕರ್ತರಿಗೆ ನೀಡದೇ ಹೋದರೆ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಪ್ರಚಾರ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ B.L.ಶಂಕರ್, ಚುನಾವಣೆ, ಸ್ಥಳೀಯ ಸಂಸ್ಥೆ ಕಮಿಟಿ, ಶಾಸಕರಿಗಿಂತ ಹೆಚ್ಚಾಗಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಿ ಅಂತಾ ಸಲಹೆ ಕೊಟ್ಟರು.
ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನಲ್ಲಿ ಶಾಸಕರು ವರ್ಸಸ್ ಸಚಿವರ ನಡುವಿನ ಪತ್ರ ಸಮರ ತಾರಕಕ್ಕೇರಿದೆ. ಶಾಸಕರ ಮೇಲೆ ಸಚಿವರು, ಸಚಿವರ ವಿರುದ್ಧ ಶಾಸಕರು ಪರಸ್ಪರ ದೂರು ಪ್ರತಿದೂರುಗಳನ್ನ ನೀಡಿದ್ದಾರಂತೆ. ಸಚಿವರ ನಡೆ ವಿರುದ್ಧ ಶಾಸಕರು ಸಿಎಂಗೆ ಪತ್ರ ಬರೆದಿದ್ರೆ, ಇತ್ತ ಶಾಸಕರ ನಡೆ ಬಗ್ಗೆಯೂ ಸಚಿವರು ಸಿಎಂ, ಡಿಸಿಎಂಗೆ ದೂರಿದ್ದಾರೆ. ಸಚಿವರ ನಡವಳಿಕೆ ಸರಿಪಡಿಸಿ ಎಂದು ಶಾಸಕರು ರೊಚ್ಚಿಗೆದ್ದಿದ್ರೆ, ಹೊಸ ಶಾಸಕರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಇದರಿಂದ ಸರ್ಕಾರಕ್ಕೆ ಧಕ್ಕೆಯಾಗುತ್ತಿದೆ ಎಂದು ಸಚಿವರು ಡಿಸಿಎಂ ಡಿಕೆ ಶಿವಕುಮಾರ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ