ಬೆಂಗಳೂರು: ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿಯಲ್ಲಿ ಬೆಂಕಿ, ಬ್ಲಾಸ್ಟ್; ಪ್ಯೂರ್ ಎನರ್ಜಿ ಕಂಪನಿ ವಿರುದ್ಧ ದೂರು ದಾಖಲು
ಬೆಂಗಳೂರಿನ ಜಯನಗರದಲ್ಲಿ ತೆಲಂಗಾಣ ಮೂಲದ ಪ್ಯೂರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ತನ್ನ ಷೋ ರೂಮ್ ತೆರೆದಿದೆ. ಅಲ್ಲದೆ, ಕಳೆದ ಮೂರು ವರ್ಷಗಿಂದ 900 ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಲಾಗಿದೆ. ಈ ಪೈಕಿ 289 ಎಲೆಕ್ಟ್ರಿಕ್ ಸ್ಕೂಟರ್ಗಳ ಬ್ಯಾಟರಿ ಸಮಸ್ಯೆ ಕಾಣಿಸಿದೆ. ಸರಿಪಡಿಸುವಂತೆ ಷೋ ರೂಮ್ಗೆ ನೀಡಿದರೆ ಮೂರು ತಿಂಗಳಾದ್ರು ಸಮಸ್ಯೆ ಬಗಹರಿಸುತ್ತಿಲ್ಲ ಎಂದು ಗ್ರಾಹಕರು ಮೈಕೋ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು, ಸೆ.3: ತೆಲಂಗಾಣ ಮೂಲದ ಪ್ಯೂರ್ ಎನರ್ಜಿ (Pure Energy) ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಸರಿಪಡಿಸುವಂತೆ ಷೋ ರೂಮ್ಗೆ ನೀಡಿ ಮೂರು ತಿಂಗಳಾದರೂ ಸಮಸ್ಯೆ ಬಗಹರಿಸುತ್ತಿಲ್ಲ ಎಂದು ಆರೋಪಿಸಿ ನಗರದ (Bengaluru) ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಗ್ರಾಹಕರು ದೂರು ನೀಡಿದ್ದಾರೆ.
ಪ್ಯೂರ್ ಎನರ್ಜಿ ಎಂಬ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ ಬೆಂಗಳೂರಿನ ಜಯನಗರದಲ್ಲಿ ಷೋ ರೂಮ್ ಓಪನ್ ಮಾಡಿದೆ. ಸ್ಕೂಟರ್ ಮಾರಾಟ ಮಾಡಲು ಖಾಸಗಿ ವ್ಯಕ್ತಿಗಳಿಗೆ ಡಿಲರ್ಶಿಪ್ ಕೂಡ ನೀಡಿದ್ದರು. ಹಾಗಾಗಿ ಕಳೆದ ಮೂರು ವರ್ಷದಿಂದ ಜಯನಗರ ಷೋ ರೂಮ್ನಲ್ಲಿ 900 ಎಲೆಕ್ಟ್ರಿಕ್ ಸ್ಕೂಟರ್ ಸೇಲ್ ಮಾಡಲಾಗಿದೆ.
ಮಾರಾಟವಾದ 900 ಸ್ಕೂಟರ್ಗಳ ಪೈಕಿ 289 ಸ್ಕೂಟರ್ಗಳಲ್ಲಿ ಬ್ಯಾಟರಿ ಸಮಸ್ಯೆ ಕಾಣಿಸಿಕೊಂಡಿದೆ. ಏಳರಿಂದ ಎಂಟು ಸ್ಕೂಟರ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾರ್ಜ್ ಹಾಕಿದ್ದ ಬ್ಲಾಸ್ಟ್ ಆಗಿದೆ ನಡು ರೋಡಲ್ಲಿ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬ್ಯಾಟರಿ ಸಮಸ್ಯೆ ಎಂದು ಷೋ ರೂಮ್ಗೆ ಕೊಂಡೋದರೆ ಮೂರು ತಿಂಗಳಾದರೂ ಸಮಸ್ಯೆ ಬಗಹರಿಸುತ್ತಿಲ್ಲ. ಹೀಗಾಗಿ ವಾಹನ ಮಾಲೀಕರು ಮೈಕೋ ಲೇಔಟ್ ಪೋಲಿಸ್ ಠಾಣೆ ತೆರಳಿ ಪ್ಯೂರ್ ಎನರ್ಜಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ