ಎಲೆಕ್ಟ್ರಾನಿಕ್ ಸಿಟಿ ಆರ್​ಟಿಓ ಕಚೇರಿಯಲ್ಲಿ ಅಕ್ರಮ: 3 ದಿನಗಳಲ್ಲಿ ಬರೋಬ್ಬರಿ 2504 ಡಿಎಲ್​ ಮಾರಾಟ

| Updated By: ವಿವೇಕ ಬಿರಾದಾರ

Updated on: Jan 17, 2023 | 10:23 AM

ಎಲೆಕ್ಟ್ರಾನಿಕ್ ಸಿಟಿ ಕೆಎ.51 ಆರ್​ಟಿಓ ಕಚೇರಿಯಲ್ಲಿ ಅಕ್ರಮ ತಾಂಡವಾಡುತ್ತಿದ್ದು, ಸಾರಿಗೆ ಇಲಾಖೆ ಅಧಿಕಾರಿ ಟೆಸ್ಟ್​​ ಡ್ರೈವ್​​ ತೆಗೆದುಕೊಳ್ಳದೆ ಡಿಎಲ್​​ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿಬಂಬಿದೆ.

ಎಲೆಕ್ಟ್ರಾನಿಕ್ ಸಿಟಿ ಆರ್​ಟಿಓ ಕಚೇರಿಯಲ್ಲಿ ಅಕ್ರಮ: 3 ದಿನಗಳಲ್ಲಿ ಬರೋಬ್ಬರಿ 2504 ಡಿಎಲ್​ ಮಾರಾಟ
ಎಲೆಕ್ಟ್ರಾನಿಕ್ ಸಿಟಿ ಆರ್​ಟಿಓ ಕಚೇರಿ
Follow us on

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಕೆಎ.51 (KA.51 RTO Office) ಸಾರಿಗೆ ಇಲಾಖೆ ಕಚೇರಿಯಲ್ಲಿ (RTO) ಅಕ್ರಮ ತಾಂಡವಾಡುತ್ತಿದ್ದು, ಸಾರಿಗೆ ಇಲಾಖೆ ಅಧಿಕಾರಿ ಟೆಸ್ಟ್​​ ಡ್ರೈವ್​​ ತೆಗೆದುಕೊಳ್ಳದೆ ಡಿಎಲ್​​ (Driving License​​) ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿಬಂಬಿದೆ. ಡಿಸೆಂಬರ್-19 2022 ರಂದು 964, ಡಿಸೆಂಬರ್​-20 ರಂದು 979 ಡಿಎಲ್, ಡಿಸೆಂಬರ್-21 ರಂದು 561 ಡಿಎಲ್​ಗಳನ್ನು ವಿತರಿಸಿದ್ದಾನೆ. ಅಧಿಕಾರಿ ಡಿಎಲ್​ಗೆ 3 ರಿಂದ 5 ಸಾವಿರ ರೂ. ಪಡೆದು 3 ದಿನಗಳಲ್ಲಿ ಬರೋಬ್ಬರಿ 2504 ಡ್ರೈವಿಂಗ್ ಲೈಸೆನ್ಸ್​​ಗಳನ್ನು ಅಕ್ರಮವಾಗಿ ಮಾರಿದ್ದಾನೆ.

ಹೀಗೆ ಅಕ್ರಮವಾಗಿ ಬೇಕಾಬಿಟ್ಟಿ ಡಿಎಲ್​ಗಳನ್ನು ವಿತರಣೆ ಮಾಡಿದ್ದ ARTO ಕೃಷ್ಣಾನಂದನನ್ನು ಕರ್ತವ್ಯ ಲೋಪವೆಸಗಿದ್ದಾನೆಂದು ಸಾರಿಗೆ ಇಲಾಖೆ ಕಮಿಷನರ್ ಎಸ್.ಎನ್ ಸಿದ್ದರಾಮಪ್ಪ ಅಮಾನತು ಮಾಡಿದ್ದಾರೆ.ಕೇವಲ ಎಲೆಕ್ಟ್ರಾನಿಕ್ ಸಿಟಿ ಆರ್​ಟಿಓ ಕಚೇರಿಯಲ್ಲಿ ಮಾತ್ರವಲ್ಲ, ಬೆಂಗಳೂರು ಕೇಂದ್ರ, ದಕ್ಷಿಣ, ಹಾಗೂ ಕೆಆರ್​ಪುರಂ ಕಚೇರಿಗಳಲ್ಲಿಯೂ ಬೇಕಾಬಿಟ್ಟಿಯಾಗಿ ಡಿಎಲ್​ಗಳನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಸಾರಿಗೆ ಇಲಾಖೆ ಆಯುಕ್ತ ಸಿದ್ದರಾಮಪ್ಪ ಅಧಿಕಾರಿಗಳಿಗೆ ನೋಟೀಸ್ ನೀಡಿದ್ದಾರೆ. ಇನ್ನು ಅಮಾನತು ಆದ ಎಆರ್​ಟಿಓ ಕೃಷ್ಣನಂದ ಈಗಾಗಲೇ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದು, ಕೆಎಟಿಯಲ್ಲಿ ತಡೆಯಾಜ್ಞೆ ತೆರವು ಮಾಡಲು ಕಾನೂನು ಹೋರಾಟ ಮಾಡುತ್ತೇವೆ ಎಂದು ಆರ್​ಟಿಓ ಕಮೀಷನರ್ ಸಿದ್ದರಾಮಪ್ಪ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ