ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಡ್ರಗ್ಸ್ ಸಪ್ಲೈ ಮಾಡಿದ ಡಿಜೆ ಹಳ್ಳಿ ಪೆಡ್ಲರ್ ಅರೆಸ್ಟ್

| Updated By: ಆಯೇಷಾ ಬಾನು

Updated on: Jun 03, 2024 | 9:45 AM

ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಓರ್ವ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಡಿಜೆ ಹಳ್ಳಿ ನಿವಾಸಿಯಾಗಿದ್ದು ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಮಾಡಿದ್ದ. ಈತನ ಬಳಿ ನಲವತ್ತು ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ಶರೀಫ್ ಅರೆಸ್ಟ್ ಮಾಡಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ರೇವ್ ಪಾರ್ಟಿ ಪ್ರಕರಣ: ಡ್ರಗ್ಸ್ ಸಪ್ಲೈ ಮಾಡಿದ ಡಿಜೆ ಹಳ್ಳಿ ಪೆಡ್ಲರ್ ಅರೆಸ್ಟ್
ಆರೋಪಿ ಶರೀಫ್
Follow us on

ಬೆಂಗಳೂರು, ಜೂನ್.03: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಿಳಿ ನಡೆದಿದ್ದ ರೇವ್ ಪಾರ್ಟಿ (Rave Party) ಪ್ರಕರಣಕ್ಕೆ ಸಂಬಂಧಿಸಿ ಈ ಪಾರ್ಟಿಗೆ ಡ್ರಗ್ಸ್ ಸಪ್ಲೈ (Drugs) ಮಾಡಿದ್ದ ಪೆಡ್ಲರ್​ನನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಡಿಜೆ ಹಳ್ಳಿ ನಿವಾಸಿ, ಇಮಾರ್ ಶರೀಫ್ ಬಂಧಿತ ಆರೋಪಿ. ಈತ ಹೈಟೆಕ್ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ. ಡ್ರಗ್ಸ್ ಸಹಿತ ಬರುವಂತೆ ಶರೀಫ್​ಗೆ ತಿಳಿಸಲಾಗಿತ್ತು. ಅದ್ರಂತೆ ವಿವಿಧ ಮಾದರಿಯ ಡ್ರಗ್ಸ್ ತೆಗೆದುಕೊಂಡು ಈತ ಪಾರ್ಟಿಗೆ ಬಂದಿದ್ದ. ಸದ್ಯ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರೇವ್ ಪಾರ್ಟಿಯಲ್ಲಿ ಆಯೋಜಕರ ಮೂಲಕ ಡ್ರಗ್ಸ್ ನೀಡಲಾಗಿತ್ತು. ಆರೋಪಿ ಶರೀಫ್ ಬಳಿ ನಲವತ್ತು ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ಶರೀಫ್ ಅರೆಸ್ಟ್ ಮಾಡಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಸಿಸಿಬಿ ನೋಟಿಸ್​ಗೆ ಹಾಜರಾಗದವರಿಗೆ ಸಂಕಷ್ಟ ಎದುರಾಗಲಿದೆ. ಪಾರ್ಟಿಯಲ್ಲಿ ಹಾಜರಾಗಿ ಡ್ರಗ್ಸ್ ಸೇವನೆ ಹಿನ್ನಲೆ ತೆಲುಗು ನಟಿ ಹೇಮಾ, ಆಶಿ ರಾಯ್ ಸೇರಿ ಇದುವರೆಗೆ ಇಪತ್ತಕ್ಕೂ ಹೆಚ್ಚು ಜನರಿಗೆ ಸಿಸಿಬಿ ನೋಟಿಸ್ ನೀಡಿದೆ. ಆದರೆ ಯಾರು ಕೂಡ ಇದುವರೆಗೆ ಸಿಸಿಬಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಸಿಸಿಬಿ ನ್ಯಾಯಾಲಯದ ಮೋರೆ ಹೋಗಲಿದೆ. ವಿಚಾರಣೆಗೆ ಹಾಜರಾಗದ ವ್ಯಕ್ತಿಗಳ ವಿರುದ್ದ ಅರೆಸ್ಟ್ ವಾರಂಟ್ ಪಡೆದು ಬಂಧಿಸಲು ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.

ಇದನ್ನೂ ಓದಿ: ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ರಾಜಕಾರಣಿಗಳಿಂದ ಒತ್ತಡ

ಬೆಂಗಳೂರಿನಲ್ಲಿ ನಡೆದ ರೇವ್​ ಪಾರ್ಟಿಗೆ ಬರೋಬ್ಬರಿ 50 ಲಕ್ಷ ಖರ್ಚು ಮಾಡಲಾಗಿತ್ತಂತೆ. ಹೈದರಾಬಾದ್​ನ ವಾಸು ಬರ್ತ್​ಡೇ ಹೆಸರಲ್ಲಿ ನಡೆದ ಪಾರ್ಟಿಯಲ್ಲಿ 100ರಿಂದ 150ಕ್ಕೂ ಹೆಚ್ಚು ಪುರುಷ ಮತ್ತು ಮಹಿಳೆಯರು ಭಾಗಿಯಾಗಿದ್ರು ಅಂತಾ FIRನಲ್ಲಿ ದಾಖಲಿಸಲಾಗಿದೆ. ಇನ್ನು ಪಾರ್ಟಿಯಲ್ಲಿಯೇ ಡ್ರಗ್ಸ್ ಮರಾಟ ಮಾಡ್ತಿದ್ದ ಸಿದ್ದಿಕ್, ರಣ್ ದೀರ್, ರಾಜ್ ಭಾವ ಎಂಬುವವರನ್ನ ಬಂಧಿಸಲಾಗಿದೆ. ಸದ್ಯ ದಾಳಿ ವೇಳೆ ಪತ್ತೆಯಾದವರ ಬಿಟ್ಟು ಉಳಿದವರ ಮಾಹಿತಿ ಸಂಗ್ರಹಕ್ಕೆ ಸಿಸಿಬಿ ಮುಂದಾಗಿದೆ. ಪಾರ್ಟಿಯಲ್ಲಿ ಎಂಡಿಎಂಎ, ಕೊಕೇನ್, ಗಾಂಜಾ, ಹೈಡ್ರೋ ಗಾಂಜಾ, ಎಂ, ಎಕ್ಸ್ಟೆಸಿ ಪಿಲ್ಸ್, ಚಸರ್ ಹೀಗೆ ಹಲವಾರು ಮಾದರಿಯ ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ. ಎಲ್ಲಾ ಮಾದರಿಯ ಡ್ರಗ್ಸ್ ಅನ್ನು ಹೇಗೆ ಪಾರ್ಟಿಗೆ ತಂದಿದ್ರು ಎಂಬ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:18 am, Mon, 3 June 24