ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲೂ ವಿರೋಧಿಗಳಿಗೆ ಟಾಂಗ್ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar), ಮುಖ್ಯಮಂತ್ರಿ ಮಾದರಿಯಲ್ಲಿ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ (Congress) ಭವನದಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಡಿಕೆಶಿ ಲಿಖಿತ ಭಾಷಣ ಓದಿದರು. ಈ ಹಿಂದಿನ ಅಧ್ಯಕ್ಷರು ಇತ್ತೀಚಿಗೆ ಈ ಮಾದರಿಯಲ್ಲ ಭಾಷಣ ಮಾಡಿಲ್ಲ. ಧ್ವಜಾರೋಹಣ ಮಾಡಿದ ಡಿಕೆಶಿ, ಪರೆಡ್ ಮೈದಾನದಲ್ಲಿ ಮುಖ್ಯಮಂತ್ರಿ ಮಾದರಿಯಲ್ಲಿ ಭಾಷಣ ಆರಂಭಿಸಿದರು.
ಸಿದ್ದರಾಮಯ್ಯ ಸಮ್ಮುಖದಲ್ಲೇ ವೇದಿಕೆ ಮೇಲೆ ಡಿಕೆಶಿ ಲಿಖಿತ ಭಾಷಣ ಮಾಡಿದರು. ಸಿಎಂ ಸ್ವಾತಂತ್ರ್ಯೋತ್ಸವ ಸಂದೇಶ ಮಾದರಿಯಲ್ಲೇ ಮಾತನಾಡಿದ್ದಾರೆ. ಇದೊಂದು ಐತಿಹಾಸಿಕ ದಿನ. ನಮ್ಮ ಪಾಲಿನ ಸುದಿನ. ನಮಗೆ ಸ್ವಾತಂತ್ರ್ಯ ತಂದ ದಿನ. ಸ್ವಾತಂತ್ರ್ಯ ಅಮೃತ ಮಹೋತ್ಸವ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ನಮ್ಮ ನಾಯಕ ನೆಹರು ಹೇಳಿದ್ರು, ಪ್ರತಿಯೊಬ್ಬ ನಾಗರಿಕನ ಕಣ್ಣಿರು ಒರೆಸಬೇಕು. ಎಲ್ಲಿಯವರೆಗೆ ಕಷ್ಟ ಇರುತ್ತೋ ಅಲ್ಲಿಯವರೆಗೆ ಕೆಲಸ ಮಾಡಬೇಕು. ಇದರಿಂದ ಮನೆ ಇಲ್ಲದವರಿಗೆ ಮನೆ, ಭೂಮಿ, ಕೆಲಸ ಸಿಕ್ಕಿದೆ. ಸ್ವಾತಂತ್ರ್ಯ ಭಾರತದ ಕಲ್ಯಾಣ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕೊಡುಗೆಯಿದೆ ಎಂದು ಭಾಷಣದಲ್ಲಿ ಹೇಳಿದರು.
ಕಳೆದ ಏಳು ವರ್ಷದಿಂದ ಬಿಜೆಪಿ ಆಡಳಿತ ಇದೆ. ಆದ್ರೆ ಒಂದೆ ಒಂದು ಕಲ್ಯಾಣ ಕಾರ್ಯಕ್ರಮ ಮಾಡಿಲ್ಲ. ಜನರಿಗೆ ಕೊಡುಗೆ ಕೊಟ್ಟಿಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈ ಜೊಡಿಸಿದ್ದೇವೆ. ಆದ್ರೆ ಆಡಳಿತ ಪಕ್ಷ ಮಾಡಿದ ಸಾಧನೆ ನೊಡಿದ್ದೇವೆ. ಲಾಕ್ಡೌನ್ ಮಾಡಿದ್ರು, ಸಾವಿರಾರು ಜನರು ಸಂಕಷ್ಟದಲ್ಲಿದ್ದರು. ರೈತರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ರು. ಅವರ ಧ್ವನಿಯಾಗಿ ಕಾಂಗ್ರೆಸ್ ಕೆಲಸ ಮಾಡಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ಮಾತು ತಪ್ಪಿದ ಡಿಕೆಶಿ
ಭಾಷಣದ ವೇಳೆಯಲ್ಲಿ ಹುತಾತ್ಮ ಇಂದಿರಾ ಗಾಂಧಿ ಎನ್ನುವ ಬದಲು ಸೋನಿಯಾ ಗಾಂಧಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಈ ಸಂದರ್ಭದಲ್ಲಿ ಡಿಕೆಶಿಯನ್ನ ಕೈ ನಾಯಕರು ಹಾಗೂ ಕಾರ್ಯಕರ್ತರು ಎಚ್ಚರಿಸಿದರು.
ಇಂದೀರಾ ಕ್ಯಾಂಟೀನ್ ಹೆಸರು
ಇಂದೀರಾ ಕ್ಯಾಂಟೀನ್ ಹೆಸರು ಬದಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ, ಮತಿಗೇಡಿಗಳು ಇಂದೀರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಅವರ ಇತಿಹಾಸ ತಿಳಿಯದೆ ಕೈ ಹಾಕಿದ್ದಾರೆ. ಕಾಂಗ್ರೆಸ್ ಕಟ್ಟುವ ಕೆಲಸ ಮಾಡಿದೆ. ಆದ್ರೆ ಬಿಜೆಪಿ ಕೆಡವುವ ಕೆಲಸ ಮಾಡಿದ್ದಾರೆ. ಅದರ ವಿರುದ್ಧ ಧ್ವನಿ ಎತ್ತೋಣ. ಜನರ ಬಳಿ ಹೋಗೋಣ. ಚುನಾವಣೆ ಏದುರಿಸಿ ಮತ್ತೆ ಅಧಿಕಾರಕ್ಕೆ ಬರೋಣ ಅಂತ ಕಾರ್ಯಕರ್ತರಿಗೆ ಕರೆ ನೀಡಿದರು.
ನಾನು ಮುಖ್ಯಮಂತ್ರಿ ಮಾದರಿಯಲ್ಲಿ ಭಾಷಣ ಮಾಡಿಲ್ಲ. ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಭಾಷಣವನ್ನು ಮಾಡಿದ್ದೇನೆ. ರಾಜ್ಯದ ಜನರಿಗೆ ಏನು ಸಂದೇಶ ನೀಡಬೇಕೋ ನೀಡಿದ್ದೇನೆ. ನಮ್ಮ ಕಾರ್ಯಕ್ರಮ ಸಾಗಬೇಕಾದ ದಾರಿ ಬಗ್ಗೆ ಹೇಳಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ಕೊಡುತ್ತೀವಿ. ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲ ಪಡಿಸುತ್ತೇವೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ
ಇಂದಿನಿಂದಲೇ ನವ ಕರ್ನಾಟಕ ನಿರ್ಮಾಣ ಆರಂಭ; ಸಿಎಂ ಬಸವರಾಜ ಬೊಮ್ಮಾಯಿ
ದೇಶದ ಎಲ್ಲ ಸೈನಿಕ ಶಾಲೆಗಳಲ್ಲೂ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ: ಪ್ರಧಾನಿ ಮೋದಿ
(DK Shivakumar delivered the speech in Chief Minister style at Bengaluru)
Published On - 10:19 am, Sun, 15 August 21