ದೇಶದ ಎಲ್ಲ ಸೈನಿಕ ಶಾಲೆಗಳಲ್ಲೂ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ: ಪ್ರಧಾನಿ ಮೋದಿ

ನಮ್ಮ ದೇಶದ ಬಹುದೊಡ್ಡ ಗುರಿಯೆಂದರೆ ಅದು ಹಸಿರು ಹೈಡ್ರೋಜನ್​ ಕ್ಷೇತ್ರದಲ್ಲಿ ಅಗತ್ಯ ಅಭಿವೃದ್ಧಿ ಕಾಣುವುದು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೈಡ್ರೋಜನ್​ ಮಿಷನ್​​ನ್ನು ಘೋಷಣೆ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ದೇಶದ ಎಲ್ಲ ಸೈನಿಕ ಶಾಲೆಗಳಲ್ಲೂ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ: ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on: Aug 15, 2021 | 9:08 AM

ಇಂದು ದೆಹಲಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಹಲವು ಪ್ರಮುಖ ವಿಚಾರಗಳ ಬಗ್ಗೆ ಮಾತನಾಡಿದರು. ಅದರಲ್ಲಿ ಒಂದು ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮುಂದೆ ದೇಶದ ಎಲ್ಲ ಸೈನಿಕ ಶಾಲೆಗಳಲ್ಲಿ ಹೆಣ್ಣುಮಕ್ಕಳ ಪ್ರವೇಶಕ್ಕೆ ಅವಕಾಶ ಇದೆ ಎಂದಿದ್ದಾರೆ. ಸದ್ಯ ದೇಶದ ಕೆಲವೇ ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೂ ಪ್ರವೇಶಕ್ಕೆ ಅವಕಾಶ ಇದೆ. ಇನ್ನುಳಿದಂತೆ ಗಂಡುಮಕ್ಕಳಿಗೆ ಮಾತ್ರ ಅಲ್ಲಿ ಕಲಿಕೆ ಇರುತ್ತದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರೇ ಘೋಷಿಸಿದ್ದು, ಅದರ ಅನ್ವಯ ಯಾವುದೇ ಸೈನಿಕ ಶಾಲೆಗಳಿಗೆ ಹೆಣ್ಣುಮಕ್ಕಳೂ ಪ್ರವೇಶ ಪಡೆಯಬಹುದಾಗಿದೆ.  ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನನಗೆ ಅನೇಕ ಹೆಣ್ಣುಮಕ್ಕಳು ಪತ್ರ ಬರೆದು, ಸೈನಿಕ ಶಾಲೆಗಳಲ್ಲಿ ನಮಗೂ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದರು. ಅದರಂತೆ ನಮ್ಮ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದ್ದಾರೆ. 

ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಣೆ ಪ್ಯಾರಿಸ್​ ಹವಾಮಾಣ ಒಪ್ಪಂದಕ್ಕೆ ಸಹಿ ಹಾಕಿ ಮತ್ತು ಅದಕ್ಕೆ ಸಂಬಂಧಪಟ್ಟ ಉದ್ದೇಶಗಳ ಪೂರೈಸುವ ಹಾದಿಯಲ್ಲಿರುವ ಏಕೈಕ ದೇಶವೆಂದರೆ ಅದು ಭಾರತ.  ನಮ್ಮ ದೇಶದ ಬಹುದೊಡ್ಡ ಗುರಿಯೆಂದರೆ ಅದು ಹಸಿರು ಹೈಡ್ರೋಜನ್​ ಕ್ಷೇತ್ರದಲ್ಲಿ ಅಗತ್ಯ ಅಭಿವೃದ್ಧಿ ಕಾಣುವುದು. ಇಂದು ಈ ತ್ರಿವರ್ಣ ಧ್ವಜದ ಬೆಳಕಿನಡಿಯಲ್ಲಿ ನಾನು ರಾಷ್ಟ್ರೀಯ ಹೈಡ್ರೋಜನ್​ ಮಿಷನ್​ ನ್ನು ಘೋಷಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹೇಗಿತ್ತು ಕೆಂಪುಕೋಟೆಯಲ್ಲಿಂದು ಆಚರಣೆ? ಭಾರತದ ಮುಕುಟ ದೆಹಲಿಯ ಕೆಂಪುಕೋಟೆಯಲ್ಲಿ 75ನೇ ವಜ್ರ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನ ಆಚರಿಸಲಾಯಿತು. ಖ್ಯಾತ ನಟ ಅಕ್ಷಯ್​ ಕುಮಾರ್, ಮಾಧುರಿ ದಿಕ್ಷಿತ್​, ರೋನಿತ್​ ರಾಯ್​, ರಾಜೀವ್​ ಖಂಡೇಲ್ವಾಲ್​, ಖ್ಯಾತ ಹಾಡುಗರ ಕೈಲಾಸ್​ ಖೇರ್‌ ರಿಂದ ದೇಶದ ಗಣ್ಯರ ಗುಣಗಾನ ನಡೆಯಿತು.

ದೇಶದಲ್ಲಿ ಯೋಧರು ಮೆರೆದ ಪರಾಕ್ರಮ ಬಗ್ಗೆ, ಸ್ವಾತಂತ್ರ ಸಂಗ್ರಾಮದಲ್ಲಿ ಆಜಾದಿಗಾಗಿ ಪ್ರಾಣ ತೆತ್ತ, ಬಲಿದಾನ, ಮಹನೀಯರ ಶೌರ್ಯದ ಬಗ್ಗೆ ಮೆಲುಕು ಹಾಕಲಾಯಿತು. ಇದರ ಜೊತೆ ಈ ಭಾರೀ ಟೋಕಿಯೋದಲ್ಲಿ ಇತಿಹಾಸ ಸೃಷ್ಟಿಸಿ ಭಾರತದ ಕೀರ್ತಿ ಪತಾಕೆ ಹಾರಿಸಿ ಒಲಂಪಿಕ್ಸ್​ ಸಾಧನೆ ಮಾಡಿದ ಎಲ್ಲಾ ಕ್ರೀಡಾಪಟುಗಳ ಶೌರ್ಯವನ್ನು ಅಭಿನಂದಿಸಲಾಯಿತು.

ಇದನ್ನೂ ಓದಿ: 75th Indian Independence Day: 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆದರ್ಶ ಭಾರತ ನಿರ್ಮಾಣದ ಗುರಿ: ಪ್ರಧಾನಿ ಮೋದಿ

 ಎಲ್​ಪಿಜಿ ಸಿಲಿಂಡರ್​ ಹೊತ್ತ ಟ್ರಕ್​ ಪಲ್ಟಿ; ಒಂದಾದ ಮೇಲೊಂದು ಸಿಲಿಂಡರ್​ ಸ್ಫೋಟ