AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

75th Indian Independence Day: 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆದರ್ಶ ಭಾರತ ನಿರ್ಮಾಣದ ಗುರಿ: ಪ್ರಧಾನಿ ಮೋದಿ

PM Narendra Modi: ನಾವು ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪರಿಚಯಿಸಲಿದ್ದೇವೆ. ನಮ್ಮ ದೇಶದ ಮೂಲಸೌಕರ್ಯ, ಸಾರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಗತಿಶಕ್ತಿ ಯೋಜನೆ ಒಂದು ಮಾಸ್ಟರ್​ ಪ್ಲ್ಯಾನ್​ ಆಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

75th Indian Independence Day: 100ನೇ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ ಆದರ್ಶ ಭಾರತ ನಿರ್ಮಾಣದ ಗುರಿ: ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
TV9 Web
| Updated By: Lakshmi Hegde|

Updated on:Aug 15, 2021 | 8:50 AM

Share

75ನೇ ಸ್ವಾತಂತ್ರ್ತೋತ್ಸವ (75th Independence Day0 ನಿಮಿತ್ತ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೆಂಪು ಕೋಟೆ (Red Fort)ಯ ಮೇಲೆ ಧ್ವಜಾರೋಹಣ ಮಾಡಿ, ನಂತರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ದಿನ ನಮ್ಮ ಮಹಾನ್​ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಂಡು, ಅವರಿಗೆ ಗೌರವ ಸಲ್ಲಿಸುವ ದಿನ. ಭಾರತೀಯರ ಪಾಲಿಗೆ ವಿಶೇಷ ದಿನವಾದ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಾಗೇ, ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ, ಸುಭಾಷ್​ಚಂದ್ ಬೋಸ್​, ಭಗತ್​ ಸಿಂಗ್​,  ಚಂದ್ರಶೇಖರ್ ಆಜಾದ್, ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮರನ್ನು ನೆನೆದರು. ಹಾಗೇ, ಇಂದಿನ ಭಾಷಣದಲ್ಲಿ ಮೊದಲ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಅವರ ಹೆಸರನ್ನೂ ಉಲ್ಲೇಖಿಸಿದ್ದಾರೆ.

ಕೊವಿಡ್​ 19 ಸಂದರ್ಭದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ,  ದೇಶದಲ್ಲಿ ಕೊರೊನಾ ಸಂಕಷ್ಟವಿದ್ದ ಸಮಯದಲ್ಲಿ ನಮ್ಮ ವೈದ್ಯರುಗಳು, ಪ್ಯಾರಾಮೆಡಿಕಲ್ಸ್​ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು  ಅವಿರತವಾಗಿ ಅದರ ವಿರುದ್ಧ ಹೋರಾಡಿದ್ದಾರೆ. ವಿಜ್ಞಾನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಕೋಟ್ಯಂತರ ನಾಗರಿಕರು ಈ ಸಾಂಕ್ರಾಮಿಕ ವಿರುದ್ಧ ಹೋರಾಡಲು ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಕಷ್ಟದ ಕಾಲದಲ್ಲಿ ಮತ್ತೊಬ್ಬರಿಗೆ ಸೇವೆ ಮಾಡಿದ ಪ್ರತಿಯೊಬ್ಬರನ್ನೂ ಶ್ಲಾಘಿಸಲೇಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಆದರ್ಶ್ ಭಾರತ ನಿರ್ಮಾಣ ಗುರಿ ನಾವು ನೂರನೇ ವರ್ಷದ ಸ್ವಾತಂತ್ರ್ಯ ದಿನ ಆಚರಣೆಗಾಗಿ ಆದರ್ಶ ಭಾರತ ನಿರ್ಮಾಣದ ಗುರಿ ಹೊಂದಿದ್ದೇವೆ. 100ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹೊತ್ತಿಗೆ, ಒಗ್ಗಟ್ಟು, ಉತ್ತಮ ಆಡಳಿತ, ಶಿಸ್ತನ್ನು ಅಳವಡಿಸಿಕೊಂಡಿರುವ, ಜಗತ್ತಿನೊಂದಿಗೆ ಸಮಾನಾಂತರವಾಗಿ ಹೆಜ್ಜೆ ಹಾಕುವ ಭಾರತ ನಿರ್ಮಾಣ ನಮ್ಮ ಗುರಿಯಾಗಿದೆ. 100ನೇ ವರ್ಷದ ಸ್ವಾತಂತ್ರ್ಯ ದಿನ ಆಚರಿಸಲು ಇನ್ನೂ 25 ವರ್ಷ ಬಾಕಿ ಇದೆ. ಆದರೆ ನಾವು ಅಲ್ಲಿಯವರೆಗೆ ಕಾಯಬೇಕಿಲ್ಲ. ಈಗಿನಿಂದಲೇ ಸಬ್​ ಕಾ ಸಾಥ್​, ಸಬ್​ ಕಾ ವಿಕಾಸ್​ ಯೋಜನೆಯಡಿ, ಎಲ್ಲರೂ ಒಟ್ಟಾಗಿ ಭಾರತದಲ್ಲಿ ಸಕಾರಾತ್ಮಕ ಬದಾಲವಣೆ ತರಲು ಮುಂದಾಗೋಣ. ಆದರ್ಶ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪ್ರಯತ್ನ ಹಾಕಿದರೆ ಖಂಡಿತ ನಮ್ಮ ಗುರಿ ತಲುಪುತ್ತೇವೆ ಎಂದರು.

ಪ್ರತಿ ರಾಷ್ಟ್ರಕ್ಕೂ ಅದರ ಅಭಿವೃದ್ಧಿ ಪಯಣದಲ್ಲಿ, ಹೊಸ ಗುರಿಯೊಂದಿಗೆ ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುವ ಸಮಯ ಬರುತ್ತದೆ. ಆಗ ಹೊಸ ನಿರ್ಣಯಗಳು, ಅಭಿವೃದ್ಧಿ ಕಾರ್ಯಗಳೊಂದಿಗೆ ಅದು ಮುಂದಡಿ ಇಡಬೇಕು. ಆ ಕಾಲವೀಗ ಭಾರತಕ್ಕೆ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ಭಾರತದ ಅಭಿವೃದ್ಧಿ ಪಯಣಕ್ಕೆ ಒಂದು ಹೊಸ ಮೈಲುಗಲ್ಲು ಹಾಕೋಣ ಎಂದು ಹೇಳಿದರು.

ಪರಿಪೂರ್ಣತೆ ಗುರಿಯಾಗಬೇಕು.. ನಾವೀಗ ದೇಶವನ್ನು ಪರಿಪೂರ್ಣತೆಗೆ ಒಯ್ಯಬೇಕು. ಶೇ. 100ರಷ್ಟು ಹಳ್ಳಿಗಳಿಗೂ ರಸ್ತೆ ನಿರ್ಮಾಣವಾಗಬೇಕು, ಶೇ.100 ರಷ್ಟು ಕುಟುಂಬಗಳೂ ಬ್ಯಾಂಕ್​ ಅಕೌಂಟ್​ ಹೊಂದಬೇಕು. ನೂರಕ್ಕೆ ನೂರು ಪರ್ಸಂಟ್​ ಫಲಾನುಭವಿಗಳೂ ಆಯುಷ್ಮಾನ್​ ಭಾರತ್​ ಕಾರ್ಡ್​ ಹೊಂದಬೇಕು. ಉಜ್ವಲಾ ಯೋಜನೆಯಡಿಯ ಅರ್ಹರೆಲ್ಲರೂ ಎಲ್​ಪಿಜಿ ಗ್ಯಾಸ್​ ಸಂಪರ್ಕ ಹೊಂದುವಂತಾಗಬೇಕು ಎಂದು ಪ್ರಧಾನಿ ಹೇಳಿದರು.

ಗತಿ ಶಕ್ತಿ ಯೋಜನೆ ಪರಿಚಯ ನಾವು ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪರಿಚಯಿಸಲಿದ್ದೇವೆ. ನಮ್ಮ ದೇಶದ ಮೂಲಸೌಕರ್ಯ, ಸಾರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಗತಿಶಕ್ತಿ ಯೋಜನೆ ಒಂದು ಮಾಸ್ಟರ್​ ಪ್ಲ್ಯಾನ್​ ಆಗಲಿದೆ. ಇದು 100 ಕೋಟಿ ರೂಪಾಯಿಗಳ ಪ್ರಾಜೆಕ್ಟ್​ ಆಗಿದ್ದು, ಉದ್ಯೋಗ ಸೃಷ್ಟಿಸುತ್ತದೆ. ಹೊಸಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಅಭಿವೃದ್ಧಿ ಪಥದಲ್ಲಿರುವ ಎಲ್ಲ ಅಡೆತಡೆಗಳನ್ನೂ ಇದು ತೊಡೆದುಹಾಕುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Azadi Ka Amrut Mahotsav: ಕಾರವಾರದಲ್ಲಿ ಸ್ವಾತಂತ್ರ್ಯ ಹೋರಾಟ; ಇತಿಹಾಸದ ರೋಚಕ ಕಥೆ

ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬಸ್ಥರಿಂದ ಗೂಂಡಾಗಿರಿ; ವಂಚನೆ ದೂರು ನೀಡಿದ್ದಕ್ಕೆ ಯುವಕನ ಮೇಲೆ ಹಲ್ಲೆ

Published On - 8:10 am, Sun, 15 August 21

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ