ನಿವೃತ್ತ ಸರ್ಕಾರಿ ಅಧಿಕಾರಿ ಕುಟುಂಬಸ್ಥರಿಂದ ಗೂಂಡಾಗಿರಿ; ವಂಚನೆ ದೂರು ನೀಡಿದ್ದಕ್ಕೆ ಯುವಕನ ಮೇಲೆ ಹಲ್ಲೆ
ಇತ್ತೀಚಿಗೆ ರೆಹಮಾನ್ ತನ್ನ ಮನೆಯ ಮೇಲ್ಭಾಗದಲ್ಲಿ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಇದನ್ನೆ ನೆಪ ಮಾಡಿಕೊಂಡ ಶಮೀವುಲ್ಲಾ ತಮ್ಮ ಕಟ್ಟಡದ ಗೋಡೆಯಿಂದ 3 ಅಡಿ ಅಂತರ ಬಿಟ್ಟಿದ್ದಕ್ಕೆ 6 ಅಡಿ ಅಂತರ ಕಾಪಾಡುವಂತೆ ಹೇಳಿ ಗಲಾಟೆ ಮಾಡಿದ್ದಾರೆ.
ಬೆಂಗಳೂರು: ವಂಚನೆ ಬಗ್ಗೆ ದೂರು ನೀಡಿದ್ದಕ್ಕೆ ನಿರ್ಮಾಣ ಹಂತದ ಕಟ್ಟಡದ ಗೋಡೆ ವಿಚಾರಕ್ಕೆ ಜಗಳ ತೆಗೆದು ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಬಳಿಯ ಆರ್.ಕೆ.ಹೆಗಡೆ ನಗರದಲ್ಲಿ ನಡೆದಿದೆ. ಯುವಕ ರೆಹಮಾನ್ ಮೇಲೆ ಹಾಡಹಗಲೇ ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಆತನ ಪುತ್ರ ಹಲ್ಲೆ ಮಾಡಿದ್ದಾರೆ.
ವಕೀಲೆಯಾಗಿರುವ ರೆಹಮಾನ್ ತಾಯಿಯನ್ನು ಯಾಮಾರಿಸಿ, ನಿವೇಶನ ಲಪಟಾಯಿಸಿದ ಆರೋಪದ ಮೇಲೆ ರೆಹಮಾನ್ ಶಮೀವುಲ್ಲಾ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಹೀಗಾಗಿ ಪಕ್ಕದ ಮನೆಯ ರೆಹಮಾನ್ ಮೇಲೆ ಶಮೀವುಲ್ಲಾ, ಆತನ ಪುತ್ರ ಅಜ್ಮಲ್ ಷರೀಫ್ ಹಾಗೂ ಮನೆ ಕೆಲಸಗಾರ ಅಲ್ತಾಫ್ ಹಲ್ಲೆ ಮಾಡಿದ್ದಾರೆ.
ಇತ್ತೀಚಿಗೆ ರೆಹಮಾನ್ ತನ್ನ ಮನೆಯ ಮೇಲ್ಭಾಗದಲ್ಲಿ ಕೊಠಡಿ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಇದನ್ನೆ ನೆಪ ಮಾಡಿಕೊಂಡ ಶಮೀವುಲ್ಲಾ ತಮ್ಮ ಕಟ್ಟಡದ ಗೋಡೆಯಿಂದ 3 ಅಡಿ ಅಂತರ ಬಿಟ್ಟಿದ್ದಕ್ಕೆ 6 ಅಡಿ ಅಂತರ ಕಾಪಾಡುವಂತೆ ಹೇಳಿ ಗಲಾಟೆ ಮಾಡಿದ್ದಾರೆ. ಸದ್ಯ ಯುವಕನ ಮೇಲಿನ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಂಪಿಗೆಹಳ್ಳಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತನ ಮೇಲೆ ಕೃಷ್ಣ ಭೈರೇಗೌಡ ಕಡೆವರಿಂದ ಹಲ್ಲೆ ಆರೋಪ, ಗಾಯಾಳು ಆಸ್ಪತ್ರೆ ದಾಖಲು