ಕಾರಿಗೆ ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತನ ಮೇಲೆ ಕೃಷ್ಣ ಭೈರೇಗೌಡ ಕಡೆವರಿಂದ ಹಲ್ಲೆ ಆರೋಪ, ಗಾಯಾಳು ಆಸ್ಪತ್ರೆ ದಾಖಲು

ಕೊಡಿಗೆಹಳ್ಳಿ ಸಿಗ್ನಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕಾರು ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಕ್ಕೂರು ಸಿಗ್ನಲ್ನಲ್ಲಿ ಪ್ರವೀಣ್ ಕಾರು ನಿಲ್ಲಿಸಿದ್ದರಂತೆ. ಈ ವೇಳೆ ಮತ್ತೊಂದು ಕಾರು ಹಿಂಬದಿಯಿಂದ ಬಂದು ಗುದ್ದಿದೆಯಂತೆ. ಮತ್ತೆ ಕೊಡಿಗೆಹಳ್ಳಿ ಸಿಗ್ನಲ್ ಬಳಿ ಅಡ್ಡಗಟ್ಟಿ ಹಲ್ಲೆ ಮಾಡಿದ್ರು ಎಂದು ಪ್ರವೀಣ್ ಆರೋಪಿಸಿದ್ದಾರೆ.

ಕಾರಿಗೆ ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತನ ಮೇಲೆ ಕೃಷ್ಣ ಭೈರೇಗೌಡ ಕಡೆವರಿಂದ ಹಲ್ಲೆ ಆರೋಪ, ಗಾಯಾಳು ಆಸ್ಪತ್ರೆ ದಾಖಲು
ಕೃಷ್ಣಭೈರೇಗೌಡ
Follow us
TV9 Web
| Updated By: ಆಯೇಷಾ ಬಾನು

Updated on: Aug 15, 2021 | 7:08 AM

ಬೆಂಗಳೂರು: ಕಾರಿಗೆ ಡಿಕ್ಕಿ ಹೊಡೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪರಿಚಿತರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ಮೇಲೆ ಬೆಂಗಳೂರಿನ ಕೊಡಿಗೆಹಳ್ಳಿ ಸಿಗ್ನಲ್ ಬಳಿ ಹಲ್ಲೆ ಮಾಡಲಾಗಿದೆಯಂತೆ.

ಕೊಡಿಗೆಹಳ್ಳಿ ಸಿಗ್ನಲ್ ಬಳಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಕಾರು ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಜಕ್ಕೂರು ಸಿಗ್ನಲ್ನಲ್ಲಿ ಪ್ರವೀಣ್ ಕಾರು ನಿಲ್ಲಿಸಿದ್ದರಂತೆ. ಈ ವೇಳೆ ಮತ್ತೊಂದು ಕಾರು ಹಿಂಬದಿಯಿಂದ ಬಂದು ಗುದ್ದಿದೆಯಂತೆ. ಮತ್ತೆ ಕೊಡಿಗೆಹಳ್ಳಿ ಸಿಗ್ನಲ್ ಬಳಿ ಅಡ್ಡಗಟ್ಟಿ ಹಲ್ಲೆ ಮಾಡಿದ್ರು ಎಂದು ಪ್ರವೀಣ್ ಆರೋಪಿಸಿದ್ದಾರೆ.

ಹಾಗೂ ಈ ವೇಳೆ ಅಡ್ಡ ಬಂದ ಪೊಲೀಸರ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್, ಕೃಷ್ಣ ಭೈರೇಗೌಡ ಕಡೆಯವರು ಎಂದು ಹೇಳಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಾನು ಬಿಜೆಪಿಯಲ್ಲಿ ಆ್ಯಕ್ಟಿವ್ ಆಗಿ ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸಲು ಆಗದೆ ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾರೆ.

ಕೊಡಿಗೆಹಳ್ಳಿ ಠಾಣೆಗೆ ದೂರು ಕೊಟ್ಟರೂ ಸ್ವೀಕರಿಸುತ್ತಿಲ್ಲ. ಪೊಲೀಸರ ಮೇಲೆ ಕೃಷ್ಣ ಭೈರೇಗೌಡ ಒತ್ತಡ ಹಾಕುತ್ತಿದ್ದಾರೆ. ಪೊಲೀಸರು ದೂರು ಸ್ವೀಕರಿಸದಿದ್ದರೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇವೆ ಎಂದು ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ತಿಳಿಸಿದ್ದಾರೆ. ಈ ಗಲಾಟೆಗೆ ನಿಜ ಕಾರಣ ಏನು ಅನ್ನೋದು ಮಾತ್ರ ಇನ್ನೂ ನಿಗೂಢ. ಸದ್ಯ ಗಾಯಾಳು ಪ್ರವೀಣ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಪೃಥ್ವಿ ಶಾ ಮತ್ತು ಸೂರ್ಯಕುಮಾರ ಯಾದವ್ ಕ್ವಾರಂಟೀನ್ ಅವಧಿ ಮುಗಿದಿದೆ, ಮುಂದಿನ ಟೆಸ್ಟ್​ಗಳ ಆಯ್ಕೆಗೆ ಇಬ್ಬರೂ ಲಭ್ಯ!