AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಡರಾತ್ರಿ ಕಾರಿನಲ್ಲಿ ಎಣ್ಣೆ ಹಾಕ್ತಿದ್ದ ರೌಡಿಗಳು, ಪ್ರಶ್ನಿಸಿದ್ದಕ್ಕೆ ಸಬ್​​ಇನ್ಸ್​ಪೆಕ್ಟರ್​​ ಮೇಲೆ ಹಲ್ಲೆಗೆ ಯತ್ನ, ಮೂವರು ಎಸ್ಕೇಪ್

ರೌಡಿ ಗ್ಯಾಂಗ್​ ನಿನ್ನೆ ರಾತ್ರಿ ಕಾರಿನಲ್ಲಿ ಎಣ್ಣೆ ಹಾಕುತ್ತಿದ್ದರು. ಅದನ್ನು ಕಂಡು ಮಫ್ತಿಯಲ್ಲಿದ್ದ ಪಿಎಸ್ಐ ಅವರನ್ನು ವಿಚಾರಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ರೌಡಿಗಳು ಮಫ್ತಿಯಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

ತಡರಾತ್ರಿ ಕಾರಿನಲ್ಲಿ ಎಣ್ಣೆ ಹಾಕ್ತಿದ್ದ ರೌಡಿಗಳು, ಪ್ರಶ್ನಿಸಿದ್ದಕ್ಕೆ ಸಬ್​​ಇನ್ಸ್​ಪೆಕ್ಟರ್​​ ಮೇಲೆ ಹಲ್ಲೆಗೆ ಯತ್ನ, ಮೂವರು ಎಸ್ಕೇಪ್
ತಡರಾತ್ರಿ ಕಾರಿನಲ್ಲಿ ಎಣ್ಣೆ ಹಾಕ್ತಿದ್ದ ರೌಡಿಗಳು, ಪ್ರಶ್ನಿಸಿದ್ದಕ್ಕೆ ಸಬ್​​ಇನ್ಸ್​ಪೆಕ್ಟರ್​​ ಮೇಲೆ ಹಲ್ಲೆಗೆ ಯತ್ನ, ಮೂವರು ಎಸ್ಕೇಪ್
TV9 Web
| Updated By: ಸಾಧು ಶ್ರೀನಾಥ್​|

Updated on:Aug 13, 2021 | 12:43 PM

Share

ಬೆಂಗಳೂರು: ರಾತ್ರಿ ಗಸ್ತಿನಲ್ಲಿದ್ದ (ಬೀಟ್) ಪ್ರೊಬೆಷನರಿ ಪೊಲೀಸ್​​ ಸಬ್​​​​ಇನ್ಸ್​​ಪೆಕ್ಟರ್​​ (ಪಿಎಸ್ಐ) ಮೇಲೆ ರೌಡಿ ಆಸಾಮಿಗಳು ಹಲ್ಲೆಗೆ ಯತ್ನಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಕಾರಿನಲ್ಲಿ ಎಣ್ಣೆ ಹಾಕ್ತಿದ್ದ ರೌಡಿ ಆಸಾಮಿಗಳನ್ನು ಕಂಡು ಸಬ್​​​​ಇನ್ಸ್​​ಪೆಕ್ಟರ್​​ ಪ್ರಶ್ನಿಸಿದಾಗ ಹಲ್ಲೆ ಘಟನೆ ನಡೆದಿದೆ.

ರೌಡಿ ಗ್ಯಾಂಗ್​ ನಿನ್ನೆ ರಾತ್ರಿ ಕಾರಿನಲ್ಲಿ ಎಣ್ಣೆ ಹಾಕುತ್ತಿದ್ದರು. ಅದನ್ನು ಕಂಡು ಮಫ್ತಿಯಲ್ಲಿದ್ದ ಪಿಎಸ್ಐ ಅವರನ್ನು ವಿಚಾರಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ರೌಡಿಗಳು ಮಫ್ತಿಯಲ್ಲಿದ್ದ ಪಿಎಸ್ಐ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಳಿಕ ಅವರು ಪೊಲೀಸ್ ಅಂತಾ ಗೊತ್ತಾಗುತ್ತಿದ್ದಂತೆ ಮೂವರು ರೌಡಿಗಳು ಎಸ್ಕೇಪ್ ಆಗಿದ್ದಾರೆ.

ತಾವರೆಕೆರೆ ರೌಡಿಶೀಟರ್ ಕುಳ್ಳ ಶಿವರಾಜ್ ಹಾಗೂ ಬಸವೇಶ್ವರ ನಗರ ರಫೀಕ್ ಎಂಬುವರಿಂದ ಬ್ಯಾಡರಹಳ್ಳಿ ಸಬ್ ಇನ್ಸ್ ಪೆಕ್ಟರ್ ಹರೀಶ್ ಹಾಗೂ ಸಿಬ್ಬಂದಿ ಮೇಲೆ ಸ್ಪ್ರೇ ದಾಳಿ ಯತ್ನ ನಡೆದಿದೆ. ಐದು ಮಂದಿ ರೌಡಿ ಗ್ಯಾಂಗ್​​ ಪೈಕಿ ಇಬ್ಬರನ್ನು ಪ್ರೊಬೇಷನರಿ ಸಬ್ ಇನ್ಸ್ ಪೆಕ್ಟರ್ ಹರೀಶ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಮೂವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಆರೋಪಿಗಳ ಕುಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಕಲಿ ಕೀ ತಯಾರಿಸಿ ಮನೆಗೆ ಕನ್ನ ಹಾಕುತ್ತಿದ್ದ ಆರೋಪಿ ಸೆರೆ ಅಪರಿಚಿತರನ್ನು ಪರಿಚಯ ಮಾಡಿಕೊಂಡು ಮನೆಗೆ ಕನ್ನ ಹಾಕುತ್ತಿದ್ದ ಆರೋಪಿಯನ್ನು ಕೆಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಅಪರಿಚಿತರನ್ನು ಮೊದಲಿಗೆ ಪರಿಚಯಸಿಕೊಳ್ಳುತ್ತಿದ್ದ. ಬಳಿಕ ನಕಲಿ ಕೀ ತಯಾರು ಮಾಡಿಕೊಂಡು, ಯಾರೂ ಇಲ್ಲದ ವೇಳೆ ಕನ್ನ ಹಾಕುತ್ತಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಕೆಪಿ ಅಗ್ರಹಾರ ಪೊಲೀಸರು ಬಂಧಿತನಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪೊಲೀಸ್​ ಇಲಾಖೆ ಸೇರಲು ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸುವ ಯತ್ನ; ಇಬ್ಬರು ‘ಕುಳ್ಳರು’ ಅರೆಸ್ಟ್! ಏನಿವರ ಮೋಡಸ್​ ಆಪರೆಂಡಿ?

(rowdy sheeters attack psi in tavarekere limits 3 rowdies escape)

Published On - 12:36 pm, Fri, 13 August 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ