ಭಾರತ ಜೋಡೊ ಯಾತ್ರೆಗೆ ರಾಜ್ಯ ಸಮಿತಿ ಅಧ್ಯಕ್ಷರ ಪಟ್ಟಿ ಪ್ರಕಟಿಸಿದ ಡಿಕೆ ಶಿವಕುಮಾರ್​

| Updated By: ವಿವೇಕ ಬಿರಾದಾರ

Updated on: Sep 18, 2022 | 7:09 PM

ಭಾರತ ಜೋಡೊ ಯಾತ್ರೆ ಅಕ್ಟೋಬರ್​ 3ಕ್ಕೆ ಕರ್ನಾಟಕಕ್ಕೆ ಪ್ರವೇಶಿಸಲಿದ್ದು, ಯಾತ್ರೆಗೆ ರಾಜ್ಯ ಸಮಿತಿ ಅಧ್ಯಕ್ಷರ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ​ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಭಾರತ ಜೋಡೊ ಯಾತ್ರೆಗೆ ರಾಜ್ಯ ಸಮಿತಿ ಅಧ್ಯಕ್ಷರ ಪಟ್ಟಿ ಪ್ರಕಟಿಸಿದ ಡಿಕೆ ಶಿವಕುಮಾರ್​
ಭಾರತ ಜೋಡೊ ಯಾತ್ರೆ
Follow us on

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ (Rahul Gandhi) ನೇತೃತ್ವದಲ್ಲಿ ಭಾರತ ಜೋಡೊ ಯಾತ್ರೆ (Bharat Jodo Yatra) ನಡೆಯುತ್ತಿದ್ದು, ಅಕ್ಟೋಬರ್​ 3ಕ್ಕೆ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಈ ಸಂಬಂಧ ರಾಜ್ಯನಾಯಕರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಯಾತ್ರೆಗೆ ರಾಜ್ಯ ಸಮಿತಿ ಅಧ್ಯಕ್ಷರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar)​ ಅವರು  ಪಟ್ಟಿ ಬಿಡುಗಡೆ ಮಾಡಿದ್ದಾರೆ.

1. ವಸತಿ ಸಮಿತಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ನೇಮಕ

2.  ರಾಜ್ಯದ 7 ಲೋಕಸಭಾ ಕ್ಷೇತ್ರಗಳಿಗೆ ಸಮಿತಿ ಅಧ್ಯಕ್ಷರ ನೇಮಕ

3. ಚಾಮರಾಜನಗರ ಕ್ಷೇತ್ರದ ಅಧ್ಯಕ್ಷರಾಗಿ ಧ್ರುವನಾರಾಯಣ

4. ಮೈಸೂರು ಕ್ಷೇತ್ರದ ಅಧ್ಯಕ್ಷರಾಗಿ ಡಾ.ಹೆಚ್.ಸಿ.ಮಹದೇವಪ್ಪ

5. ಮಂಡ್ಯ ಕ್ಷೇತ್ರದ ಅಧ್ಯಕ್ಷರಾಗಿ ಎನ್.ಚಲುವರಾಯಸ್ವಾಮಿ

6. ತುಮಕೂರು ಕ್ಷೇತ್ರದ ಅಧ್ಯಕ್ಷರಾಗಿ ಡಾ.ಜಿ.ಪರಮೇಶ್ವರ್​​

7. ಚಿತ್ರದುರ್ಗ-ದಾವಣಗೆರೆ ಕ್ಷೇತ್ರದ ಅಧ್ಯಕ್ಷರಾಗಿ ಸಲೀಂ ಅಹ್ಮದ್​

8. ರಾಯಚೂರು ಲೋಕಸಭಾ ಕ್ಷೇತ್ರದ ಅಧ್ಯಕ್ಷರಾಗಿ ಈಶ್ವರ ಖಂಡ್ರೆ

9. ಬಳ್ಳಾರಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್​ ನೇಮಕ

10 ಸೋಷಿಯಲ್ ಮೀಡಿಯಾ ಮುಖ್ಯಸ್ಥರಾಗಿ ಪ್ರಿಯಾಂಕ್ ಖರ್ಗೆ

11. ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಬಿ.ಎಲ್.ಶಂಕರ್​  ಅವರನ್ನು ನೇಮಕ ಮಾಡಲಾಗಿದೆ.

ಭಾರತ್‌ ಜೋಡೊ ಯಾತ್ರೆಗೆ ಸೆಪ್ಟಂಬರ್‌ 7ರಂದು ಚಾಲನೆ ದೊರೆತಿದ್ದು, ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸುಮಾರು 3,570 ಕಿ.ಮೀ. ದೂರವನ್ನು ಸುಮಾರು 5 ತಿಂಗಳು ಕ್ರಮಿಸಲಿದೆ. ಪಾದಯಾತ್ರೆಯು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಭಾರತ ಜೋಡೊ ಯಾತ್ರೆಯು ತಮಿಳುನಾಡಿನ ಕನ್ಯಾಕುಮಾರಿಯಿಂದ ಯಾತ್ರೆ ಆರಂಣಗೊಂಡಿದ್ದು, ತಿರುವನಂತಪುರ, ಕೊಚ್ಚಿ, ನೀಲಂಬೂರ್ ಮೂಲಕ ಕರ್ನಾಟಕಕ್ಕೆ ಅ. 3ಕ್ಕೆ ಆಗಮಿಸಲಿದೆ.

ರಾಜ್ಯದ ಮೈಸೂರು, ಬಳ್ಳಾರಿ, ರಾಯಚೂರು, ಮಂಡ್ಯ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು ರಾಜ್ಯದಲ್ಲಿ ಅ. 19ರವರೆಗೆ ಸಂಚರಿಲಿದೆ. ಪ್ರತಿ ಜಿಲ್ಲೆಯಲ್ಲಿ 75ಕಿ. ಮೀ ಯಾತ್ರೆ ಮಾಡಲಾಗುವುದು. ನಂತರ ವಿಕಾರಾಬಾದ್‌, ನಾಂದೇಡ್‌, ಜಲಗಾಂವ್‌, ಇಂಧೋರ್‌, ಕೋಟಾ, ದೌಸಾ, ಅಳ್ವಾರ್‌, ಬುಲಂದಶಹರ್‌, ದೆಹಲಿ, ಅಂಬಾಲಾ, ಪಠಾಣ್‌ಕೋಟ್‌, ಜಮ್ಮು ಬಳಿಕ ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Sun, 18 September 22