ಪ್ರಧಾನಿ ಮೋದಿ 72ನೇ ಹುಟ್ಟುಹಬ್ಬಕ್ಕೆ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿದ ಮೋದಿ ಅಭಿಮಾನಿ ಮಹೇಶ್ ವಿಕ್ರಮ ಹೆಗ್ಡೆ
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನ ದೇಶದ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮೋದಿ ಅವರ ಅಭಿಮಾನಿ, ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಶ್ರಮಿಸುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ ಹುಟ್ಟುಹಬ್ಬ ಆಚರಿಸಿದ್ದಾರೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಸೆಪ್ಟೆಂಬರ್ 17ರಂದು 72 ನೇ ವಸಂತಕ್ಕೆ ಕಾಲಿಟ್ಟರು. ಹೀಗಾಗಿ ಮೋದಿ ಅವರ ಅಭಿಮಾನಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನ ದೇಶದ 72 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೋದಿ ಅವರ ಅಭಿಮಾನಿ, ಬಡ ವಿದ್ಯಾರ್ಥಿಗಳ ವಿದ್ಯಾಬ್ಯಾಸಕ್ಕಾಗಿ ಶ್ರಮಿಸುತ್ತಿರುವ ಮಹೇಶ್ ವಿಕ್ರಮ್ ಹೆಗ್ಡೆ(Mahesha Vikram Hegde) ತಮ್ಮ ವಿಕ್ರಮ ಫೌಂಡೇಶನ್ ಮೂಲಕ ಮೋದಿ ಅವರ ಬರ್ತ್ ಡೇ ವಿಶೇಷವಾಗಿ ಆಚರಿಸಲು ಈ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕನ್ಯಾಕುಮಾರಿಯಿಂದ ಹಿಮಾಲಯದವರೆಗೂ ಒಟ್ಟು 72 ದೇವಸ್ಥಾನಗಳಲ್ಲಿ ಕುಂಕುಮಾರ್ಚನೆ, ರುಧ್ರಾಭಿಷೇಕ, ಪುಷ್ಪಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು. ಗೋಕರ್ಣ, ಶ್ರೀಶೈಲ, ಶಿರಡಿ ಸೇರಿದಂತೆ ರಾಜ್ಯದ 7 ದೇವಿ ಶಕ್ತಿ ಪೀಠಗಳಲ್ಲಿ ನಮೋ ಹೆಸರಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಇನ್ನ ಸಿದ್ದಗಂಗಾ ಮಠ, ಅನ್ನಪೂರ್ಣಶ್ವರಿ ದೇವಸ್ಥಾನದಲ್ಲಿ ಪೂಜೆ ಜೊತೆಗೆ ನರೇಂದ್ರ ಮೋದಿ ಅವರ ಹೆಸರಲ್ಲಿ ಅನ್ನಸಂತರ್ಪಣೆ ಸೇವಾ ಕಾರ್ಯ ನಡೆದಿದೆ. ಇದನ್ನೂ ಓದಿ: Narendra Modi Birthday: ಪ್ರಧಾನಿ ನರೇಂದ್ರ ಮೋದಿ ಆರೋಗ್ಯದ ಗುಟ್ಟೇನು? ಆಹಾರ ಪದ್ಧತಿ ಹೇಗಿದೆ? ಇಲ್ಲಿದೆ ಮಾಹಿತಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:07 pm, Sun, 18 September 22