ಶತ್ರು ಪೀಡೆ, ಸಂಕಷ್ಟ ನಿವಾರಣೆ ಸೇರಿ ನಾನಾ ಕಾರಣಕ್ಕೆ ಅಸ್ಸಾಂನ ಕಾಮಾಖ್ಯ ದೇಗುಲದಲ್ಲಿ ಡಿ.ಕೆ. ಶಿವಕುಮಾರ್ ಹೋಮ

ಯಾವತ್ತೂ ಗುವಾಹಟಿಯ ಕಾಮಾಖ್ಯ ದೇವಿ ಮೊರೆ ಹೋಗುವ ಶಿವಕುಮಾರ್ ಈ ಬಾರಿ ಮತ್ತೆ ಪೂಜೆ ಸಲ್ಲಿಸಿದ್ದಾರೆ. ಶಕ್ತಿಪೀಠದಲ್ಲಿ ಬಗಳಾಮುಖಿ ಸೇರಿದಂತೆ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶತ್ರು ಪೀಡೆ, ಸಂಕಷ್ಟ ನಿವಾರಣೆ ಸೇರಿ ನಾನಾ ಕಾರಣಕ್ಕೆ ಪೂಜೆ ನೆರವೇರಿಸಲಾಗಿದೆ ಎಂದು ತಿಳಿದುಬಂದಿದೆ.

ಶತ್ರು ಪೀಡೆ, ಸಂಕಷ್ಟ ನಿವಾರಣೆ ಸೇರಿ ನಾನಾ ಕಾರಣಕ್ಕೆ ಅಸ್ಸಾಂನ ಕಾಮಾಖ್ಯ ದೇಗುಲದಲ್ಲಿ ಡಿ.ಕೆ. ಶಿವಕುಮಾರ್ ಹೋಮ
ಡಿಕೆ ಶಿವಕುಮಾರ್
Updated By: ganapathi bhat

Updated on: Apr 09, 2022 | 2:34 PM

ಗುವಹಾಟಿ: ಪ್ರತಿ ಬಾರಿ ಸಂಕಷ್ಟ ಎದುರಾದಾಗ ಕಾಮಾಖ್ಯ ದೇವಿಯ ಮೊರೆ ಹೋಗುವ ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಈಗ ಮತ್ತೆ ಕಾಮಾಖ್ಯ ದೇವಿಗೆ ವಿಶೇಷ ಪೂಜೆ, ಹೋಮ ಮಾಡಿಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್​ರಿಂದ ಕಾಮಕ್ಯದೇವಿಗೆ ವಿಶೇಷ ಹೋಮ ನಡೆಸಲಾಗಿದೆ. ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿರುವ ಕಾಮಾಖ್ಯ ದೇಗುಲದಲ್ಲಿ ಇಂದು (ಏಪ್ರಿಲ್ 9) ಡಿಕೆಶಿಯಿಂದ ವಿಶೇಷ ಹೋಮ ನಡೆಸಲಾಗಿದೆ. ಕೆಲಸದ ಒತ್ತಡದಿಂದ ಡಿ.ಕೆ ಶಿವಕುಮಾರ್ ಇತ್ತೀಚೆಗೆ ದೇವಸ್ಥಾನಕ್ಕೆ ತೆರಳಿರಲಿಲ್ಲ. ಯಾವತ್ತೂ ಗುವಾಹಟಿಯ ಕಾಮಾಖ್ಯ ದೇವಿ ಮೊರೆ ಹೋಗುವ ಶಿವಕುಮಾರ್ ಈ ಬಾರಿ ಮತ್ತೆ ಪೂಜೆ ಸಲ್ಲಿಸಿದ್ದಾರೆ. ಶಕ್ತಿಪೀಠದಲ್ಲಿ ಬಗಳಾಮುಖಿ ಸೇರಿದಂತೆ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶತ್ರು ಪೀಡೆ, ಸಂಕಷ್ಟ ನಿವಾರಣೆ ಸೇರಿ ನಾನಾ ಕಾರಣಕ್ಕೆ ಪೂಜೆ ನೆರವೇರಿಸಲಾಗಿದೆ ಎಂದು ತಿಳಿದುಬಂದಿದೆ.

ಇತ್ತ ಕೋಮು ಗಲಭೆಗೆ ಪ್ರಚೋದನಕಾರಿ ಹೇಳಿಕೆ ಆರೋಪದ ಬಗ್ಗೆ ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ದೂರು ನೀಡಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪ್ರಚೋದನಕಾರಿ ಹೇಳಿಕೆ ಆರೋಪದಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮುಖಂಡರ ಆಗ್ರಹ ವ್ಯಕ್ತವಾಗಿದೆ.

ಬಿಜೆಪಿ ಸರ್ಕಾರದ ತಿಥಿ ಕಾರ್ಯ ಮಾಡಿ ಆಕ್ರೋಶ

ಮತ್ತೊಂದೆಡೆ ರಾಜ್ಯದಲ್ಲಿ ಬೆಲೆ ಎರಿಕೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ವಿನೂತನವಾಗಿ ಪ್ರತಿಭಟನೆ ಮಾಡಿ ಬೆಲೆ ಎರಿಕೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದಾರೆ. ಎತ್ತಿನ ಬಂಡಿ ಹಾಗೂ ತಳ್ಳು ಗಾಡಿಯ ಮೇಲೆ ಬೈಕ್ ಇಟ್ಟು ಪ್ರತಿಭಟನೆ ಮಾಡಲಾಗಿದೆ. ಬೈಕ್ ಹಾಗೂ ಸಿಲಿಂಡರ್ ನೇಣಿಗೆ ಎರಿಸಿ ಪೆಟ್ರೋಲ್ ಬೆಲೆ ಏರಿಕೆಗೆ ಖಂಡನೆ ವ್ಯಕ್ತವಾಗಿದೆ. ಬಿಜೆಪಿ ಸರ್ಕಾರದ ತಿಥಿ ಕಾರ್ಯ ಮಾಡಿ ಆಕ್ರೋಶ ವ್ಯಕ್ತವಾಗಿದೆ.

ಕಲಬುರಗಿ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಯೂತ್​ ಕಾಂಗ್ರೆಸ್ ​ಪ್ರತಿಭಟನೆ ನಡೆಸಿದೆ. ನಗರದ ಸರ್ಧಾರ್ ಪಟೇಲ್ ವೃತ್ತದಲ್ಲಿ ​ನಲಪಾಡ್​ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.

ಕೊಪ್ಪಳ: ಬೆಲೆ ಏರಿಕೆ ಖಂಡಿಸಿ‌‌ ಕೊಪ್ಪಳದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಿಲಿಂಡರ್, ಪೆಟ್ರೋಲ್, ಡಿಸೆಲ್ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ‌ ವ್ಯಕ್ತವಾಗಿದೆ. ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಪ್ರತಿಭಟನೆ ಮಾಡಲಾಗಿದ್ದು ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಹೊರಹಾಕಿದ್ದಾರೆ.

ಧಾರವಾಡ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ ಧಾರವಾಡದಲ್ಲಿ ಕಾಂಗ್ರೆಸ್ ಪಕ್ಷದಿಂದ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಜಯನಗರ ಸರ್ಕಲ್‌ನಲ್ಲಿ ರಸ್ತೆ ಮಧ್ಯೆ ಸಿಲಿಂಡರ್ ಇಟ್ಟು, ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಲಾಗಿದೆ. ಎಣ್ಣೆ ಖಾಲಿ ಡಬ್ಬಗಳ ಬಾರಿಸುತ್ತ, ಅಗತ್ಯ ವಸ್ತು ಬೆಲೆ ನಿಯಂತ್ರಿಸಲು ಆಗ್ರಹ ಕೇಳಿಬಂದಿದೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ರಾಮನಗರ: ರಾಮನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ರಾಮನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಐಜೂರು ವೃತ್ತದವರೆಗೂ ಮೆರವಣಿಗೆ ನಡೆಸಿ, ಎತ್ತಿನಗಾಡಿ, ಖಾಲಿ ಗ್ಯಾಸ್ ಲಿಸಿಂಡರ್ ಮೂಲಕ ಪ್ರತಿಭಟನೆ ಮಾಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಜ್ಞಾನೇಂದ್ರ ಮತ್ತು ಸಿಟಿ ರವಿ ಮತೀಯ ಗಲಭೆಗೆ ಪ್ರಚೋದನೆಯಾಗುವ ಹೇಳಿಕೆ ನೀಡುತ್ತಿರುವುದರಿಂದ ಕೂಡಲೇ ಬಂಧಿಸಬೇಕು: ಡಿಕೆ ಶಿವಕುಮಾರ್

ಇದನ್ನೂ ಓದಿ: ನಾವು ಕರ್ನಾಟಕವನ್ನ ರಾಹುಲ್ ಗಾಂಧಿ -ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ

Published On - 1:21 pm, Sat, 9 April 22