ನಾವು ಕರ್ನಾಟಕವನ್ನ ರಾಹುಲ್ ಗಾಂಧಿ -ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು :ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕರೆ
Siddaramaiah: ಇನ್ನ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕು. ಮುಂದಿನ ಎಲೆಕ್ಷನ್ನಲ್ಲಿ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯಬೇಕು. 6 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಬೇಕು ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಬೆಂಗಳೂರು: ನಾವು ಬೈ ಎಲೆಕ್ಷನ್ ನಲ್ಲಿ ಉತ್ತಮ ಕೆಲಸ ಮಾಡಿದ್ವಿ. ರಾಹುಲ್ ಗಾಂಧಿಗೆ ನಾನು ಒಂದು ಮಾತನ್ನ ಹೇಳಲು ಬಯಸುತ್ತೇನೆ. ನಾನು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗ್ತೇನೆ. ಎಐಸಿಸಿ ಏನು ನಿರ್ಧಾರ ಮಾಡುತ್ತೆ, ಸೋನಿಯಾ ಜಿ ಹಾಗೂ ನೀವು ಏನು ನಿರ್ಧಾರ ಮಾಡ್ತೀರಿ ಅದನ್ನ ನಾನು ತಲೆ ಬಾಗಿ, ನೆರವೇರಿಸುವೆ. ಷೇರಿಂಗ್ ಅಂಡ್ ಕೇರಿಂಗ್ ಇಲ್ಲದೆ ನಾವು ಏನೂ ಮಾಡಲು ಸಾಧ್ಯವಿಲ್ಲ. ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತೇವೆ. ನಾವು ಕರ್ನಾಟಕ ರಾಜ್ಯವನ್ನ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧೀಜಿಗೆ ಗೆಲ್ಲಿಸಿ ಕೊಡಬೇಕು. ನಾವು ಮಾಡಲು ಸಾಕಷ್ಟು ಕೆಲಸ ಇದೆ. ನಾನು ನಮ್ಮ ಯಾವ ನಾಯಕರಿಗೂ ನಿದ್ರೆ ಮಾಡಲು ಬಿಟ್ಟಿಲ್ಲ. ನಿರುದ್ಯೋಗಿಗಳಿಗಾಗಿ ನಾವು ರ್ಯಾಲಿ ಮಾಡ್ತೀವಿ. ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಮಾಡ್ತಿವಿ. ತಿಂಗಳಲ್ಲಿ 15 ದಿನ ಕರ್ನಾಟಕದಲ್ಲಿ ಇರೋದಾಗಿ ರಣದೀಪ್ ಸುರ್ಜೇವಾಲ ಹೇಳಿದ್ದಾರೆ. ನಾವು ಗೆದ್ದೇ ಗೆಲ್ತೀವಿ ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದರು (DK Shivakumar). ರಾಹುಲ್ ಗಾಂಧಿ (Rahul Gandhi) ಅಧ್ಯಕ್ಷತೆಯಲ್ಲಿ ಇಂದು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಾ ಡಿಕೆ ಶಿವಕುಮಾರ್ ಅವರು ಈ ಆಶಾಭಾವ ವ್ಯಕ್ತಪಡಿಸಿದರು (Karnataka Assembly Elections 2023).
ನಾವು 6 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಬೇಕು -ಸಿದ್ದರಾಮಯ್ಯ ಭಾಷಣ ಇನ್ನ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲೇಬೇಕು. ಮುಂದಿನ ಎಲೆಕ್ಷನ್ನಲ್ಲಿ ಬಿಜೆಪಿ ಸರ್ಕಾರವನ್ನ ಕಿತ್ತೆಸೆಯಬೇಕು. 6 ತಿಂಗಳ ಮೊದಲೇ ಅಭ್ಯರ್ಥಿಗಳನ್ನ ಘೋಷಿಸಬೇಕು ಎಂದು ರಾಹುಲ್ ಗಾಂಧಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಪ್ರತಿ ಮನೆಗೂ ತೆರಳಿ ಬಿಜೆಪಿ ನಾಟಕ ಬಯಲು ಮಾಡಬೇಕು ಎಂದೂ ಸಿದ್ದರಾಮಯ್ಯ ಅವರು ತಮ್ಮ ಕಾರ್ಯಕರ್ತರಿಗೆ ಕರೆಕೊಟ್ಟರು.
ಕರ್ನಾಟಕದಲ್ಲಿ ಎಂದಿಗೂ ಕಾಂಗ್ರೆಸ್ ಸ್ಪಿರಿಟ್ ಇದೆ, ಮುಂದಿನ ಎಲೆಕ್ಷನ್ನಲ್ಲಿ 150 ಸ್ಥಾನ ಗೆಲ್ಲಲೇಬೇಕು -ರಾಹುಲ್ ಗಾಂಧಿ ಕರೆ ಬೆಂಗಳೂರು: ಕರ್ನಾಟಕದಲ್ಲಿ ಇರುವುದು ಅನೈತಿಕ ಬಿಜೆಪಿ ಸರ್ಕಾರ. ನಾವು ಕರ್ನಾಟಕದಲ್ಲಿ ಚುನಾವಣೆಯನ್ನ ಎದುರು ನೋಡುತ್ತಿದ್ದೇವೆ. ನಾವು ಕಡಿಮೆ ಅಂತರದಿಂದ ಗೆಲ್ಲುವ ಗುರಿ ಹೊಂದಬಾರದು. ಮುಂದಿನ ಎಲೆಕ್ಷನ್ನಲ್ಲಿ 150 ಸ್ಥಾನಗಳನ್ನ ಗೆಲ್ಲಲೇಬೇಕು. ಕರ್ನಾಟಕದಲ್ಲಿ 150 ಸ್ಥಾನಗಳನ್ನ ಗೆಲ್ಲುವುದು ಕಷ್ಟವಲ್ಲ. ಒಗ್ಗಟ್ಟಾಗಿ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು ಎಂದು ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ರಾಹುಲ್ ಗಾಂಧಿ ಕರೆಯಿತ್ತರು.
ನಾವು ಇಷ್ಟ-ಕಷ್ಟದ ಆಧಾರದ ಮೇಲೆ ಮಣೆ ಹಾಕಲ್ಲ. 20 ವರ್ಷಗಳ ಹಿಂದೆ ಮಾಡಿದ್ದು ಈಗ ನಡೆಯೋದಿಲ್ಲ. ಪಕ್ಷಕ್ಕೆ ಕೆಲಸ ಮಾಡುವವರನ್ನ ಪಕ್ಷ ರಕ್ಷಣೆ ಮಾಡುತ್ತದೆ. ಕಡಿಮೆ ಅಂತರದಲ್ಲಿ ಗೆಲ್ಲಲು ಎಲೆಕ್ಷನ್ನಲ್ಲಿ ಸ್ಪರ್ಧಿಸಬಾರದು. 150 ಸ್ಥಾನಗಳಲ್ಲಿ ಒಂದೂ ನಂಬರ್ ಕಡಿಮೆಯಾಗಬಾರದು. ನಾವು ನಮ್ಮ ಕಾರ್ಯಕರ್ತರನ್ನ ಮರೆಯಬಾರದು. ಕಾಂಗ್ರೆಸ್ ಸರ್ಕಾರ ಬಂದರೆ ಕಾರ್ಯಕರ್ತರಿಗೆ ಅಧಿಕಾರ ನೀಡುವುದಾಗಿ ಕಾರ್ಯಕಾರಿಣಿಯಲ್ಲಿ ‘ಕೈ’ ನಾಯಕ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು.
ಮುಂದಿನ ಎಲೆಕ್ಷನ್ನಲ್ಲಿ 150 ಸ್ಥಾನ ಗೆಲ್ಲಲೇಬೇಕು: ಕರ್ನಾಟಕದಲ್ಲಿ ಎಂದೂ ಕಾಂಗ್ರೆಸ್ ಸ್ಪಿರಿಟ್ ಇದೆ. ಇದು ಅತ್ಯಂತ ನೈಸರ್ಗಿಕ ಕಾಂಗ್ರೆಸ್ ರಾಜ್ಯ. ಇಲ್ಲಿರುವುದು ಅನೈತಿಕ ಬಿಜೆಪಿ ಸರ್ಕಾರ. ಮುಂದೆ ಏನಾಗುತ್ತದೆ ಎಂಬ ಅರಿವು ಹೊಂದಬೇಕು. ನಾವು ಕಡಿಮೆ ಅಂತರದಿಂದ ಗೆಲ್ಲುವ ಗುರಿ ಇರಬಾರದು. ಈ ಬಗ್ಗೆ ನಮಗೆ ಸ್ಪಷ್ಟತೆ ಇರಲಿ. ನಾವು 150 ಸೀಟ್ ಗೆಲ್ಲಲೇ ಬೇಕು, ಇದು ಕಷ್ಟ ಅಲ್ಲ. ನಾವು ಒಗ್ಗಟ್ಟಾಗಿ ಕೆಲಸ ಮಾಡಿದರೆ, ಸರಿಯಾದ ವಿಚಾರ ಕೈಗೆತ್ತಿಕೊಂಡರೆ ಗೆಲ್ಲಬಹುದು. ನಾವು ನಾಯಕರನ್ನ ಇಷ್ಟ ಕಷ್ಟದ ಆಧಾರ ಮೇಲೆ ಮಣೆ ಹಾಕೋಲ್ಲ. ಯಾರು ಕೆಲಸ ಮಾಡ್ತಾ ಇದಾರೆ ಅನ್ನೋ ಆಧಾರದ ಮೇಲೆ ಕೆಲಸ ಮಾಡ್ತೀವಿ. ನಾವು ಈ ವಿಷಯದಲ್ಲಿ ಕಟ್ಟರ್ ಆಗಿದ್ದೇವೆ. 20 ವರ್ಷದ ಹಿಂದೆ ಏನ್ ಮಾಡಿದ್ದಾರೆ ಅನ್ನೋದು ನಡೆಯೋಲ್ಲ. ಇಂದು ಏನು ಮಾಡ್ತಾ ಇದಾರೆ, ಆತನಿಗೆ ಪಕ್ಷ ನಿಷ್ಠೆ ಇದೆಯಾ? ಕೆಲಸ ಮಾಡ್ತಾ ಇದಾರೆ ಅನ್ನೋದನ್ನ ಆಧರಿಸಿ ಪಕ್ಷ ಅವರ ರಕ್ಷಣೆ ಮಾಡುತ್ತೆ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ: ಶ್ರೀಲಂಕಾದಲ್ಲಿರುವ ತಮಿಳಿಗರಿಗೆ ನಾವು ಸಹಾಯ ಮಾಡುತ್ತೇವೆ, ಅನುಮತಿ ಕೊಡಿ; ಪ್ರಧಾನಿ ಮೋದಿಗೆ ಮನವಿ ಮಾಡಿದ ಸಿಎಂ ಸ್ಟಾಲಿನ್
Published On - 2:37 pm, Fri, 1 April 22