ಬೆಂಗಳೂರಿನಲ್ಲಿ ಡಿಎಂಕೆ ಮುಖಂಡನ ಮೇಲೆ ಹಲ್ಲೆ, ರಕ್ತ ಚೆಲ್ಲಾಡಿದ್ದ ಹೋಟೆಲ್​ ಸ್ವಚ್ಛಗೊಳಿಸಿ ಹೋಮ-ಹವನ

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2023 | 10:56 AM

ಬೆಂಗಳೂರಿನ ಬಾಣಸವಾಡಿಯ ಕಮ್ಮನಹಳ್ಳಿ ಬಳಿಯ ಸುಖಸಾಗರ್ ಹೋಟೆಲ್​ನಲ್ಲಿ ಡಿಎಂಕೆ ಪಕ್ಷದ ಮುಖಂಡ ಗುರುಸ್ವಾಮಿ ಮೂರ್ತಿ ಮೇಲೆ ಲಾಂಗು, ಮಚ್ಚುಗಳಿಂದ ದಾಳಿ ಮಾಡಲಾಗಿದೆ. ಇದರಿಂದ ಹೋಟೆಲ್​ನಲ್ಲಿ ರಕ್ತ ಹರಿದಾಡಿದ್ದು, ಇದೀಗ ಮಾಲೀಕರು ಹೋಟೆಲ್​ ಸ್ವಚ್ಛಗೊಳಿಸಿ ಹೋಮ-ಹವನ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಡಿಎಂಕೆ ಮುಖಂಡನ ಮೇಲೆ ಹಲ್ಲೆ, ರಕ್ತ ಚೆಲ್ಲಾಡಿದ್ದ ಹೋಟೆಲ್​ ಸ್ವಚ್ಛಗೊಳಿಸಿ ಹೋಮ-ಹವನ
ಹೋಟೆಲ್​ ಸ್ವಚ್ಛಗೊಳಿಸಿ ಹೋಮ-ಹವನ
Follow us on

ಬೆಂಗಳೂರು, (ಸೆಪ್ಟೆಂಬರ್ 05): ನಗರದ ಬಾಣಸವಾಡಿಯ ಕಮ್ಮನಹಳ್ಳಿ ಬಳಿಯ ಸುಖಸಾಗರ್ ಹೋಟೆಲ್​ನಲ್ಲಿ ತಮಿಳುನಾಡಿನ ನಟೋರಿಯಸ್ ಗ್ಯಾಂಗ್ ಅಟ್ಟಹಾಸ ಮೆರೆದಿದೆ. ತಮಿಳುನಾಡಿನ ಡಿಎಂಕೆ ಪಕ್ಷದ ಮುಖಂಡ ಗುರುಸ್ವಾಮಿ ಮೂರ್ತಿ ಮೇಲೆ ಲಾಂಗು, ಮಚ್ಚುಗಳಿಂದ ದಾಳಿ ಮಾಡಿ ಎಸ್ಕೇಪ್ ಆಗಿದ್ದು, ಅನ್ನದಾತ ಸುಖೀ ಭವ ಅಂತ ನಿತ್ಯ ಸಾವಿರಾರು ಜನ ಹೊಟ್ಟೆ ತುಂಬಿಸಿಕೊಳ್ಳೋ ಜಾಗದಲ್ಲಿ ಪುಂಡರು ನೆತ್ತರು ಹರಿಸಿದ್ದಾರೆ. ಇದರಿಂದ ಇದೀಗ ಮಾಲೀಕರು ಹೋಟೆಲ್​ ಅನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಮೊನ್ನೆಯಷ್ಟೇ ಮಧುರೈನಿಂದ ಬೆಂಗಳೂರಿಗೆ ಬಂದಿದ್ದ ಗುರುಸ್ವಾಮಿ, ಬಾಣಸವಾಡಿ ಸುತ್ತಮುತ್ತು ಮನೆ ಹುಡುಕುತ್ತಿದ್ದನಂತೆ. ನಿನ್ನೆ(ಸೆಪ್ಟೆಂಬರ್ 04) ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್​ನಲ್ಲಿ ಮನೆ ಬ್ರೋಕರ್ ಜೊತೆ ಊಟಕ್ಕೆ ಬಂದಿದ್ದ ವೇಳೆ ದಾಳಿಯಾಗಿತ್ತು. ಇದರಿಂದ ಹೋಟೆಲ್​ನಲ್ಲಿ ರಕ್ತ ಹರಿದಿತ್ತು. ಈ ಹಿನ್ನೆಲೆಯಲ್ಲಿ ಮಾಲೀಕರು ಇಂದು (ಸೆಪ್ಟೆಂಬರ್ 05) ಹೋಟೆಲ್​ಅನ್ನು ಸ್ವಚ್ಛ ಗೊಳಿಸಿ ಹೋಮ-ಹವನ ನಡೆಸಿದ್ದಾರೆ. ಹೋಟೆಲ್​ನಲ್ಲಿ ಪೂಜೆ-ಪುನಸ್ಕಾರಗೊಂದಿಗೆ ಶಾಂತಿ ನೆಲೆಸುವಂತೆ ಮಾಡಪ್ಪ ಎಂದು ದೇವರಲ್ಲಿ ಪ್ರಾರ್ಥಿಸಿದಾರೆ.

ಇದನ್ನೂ ಓದಿ: ಬೆಂಗಳೂರು: ಡಿಎಂಕೆ ಮುಖಂಡನ ಮೇಲೆ ಲಾಂಗ್, ಮಚ್ಚಿ​ನಿಂದ ಮಾರಣಾಂತಿಕ ಹಲ್ಲೆ

ಆರೋಪಿಗಳ‌ ಪತ್ತೆಗೆ ತಲಾಶ್

ಇನ್ನು ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವವ ಪತ್ತೆಗೆ ಬಾಣಸವಾಡಿ ಪೊಲೀಸರು ತಲಾಶ್ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತ ಮುತ್ತ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದು, ಅದೇ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಇನ್ನು ಪ್ರಶ್ನೆಯಾಗೆ ಉಳಿದಿರುವ ಹಲ್ಲೆಗೆ ಕಾರಣ. ಏಕೆ ಹಲ್ಲೆ ಮಾಡಿದ್ದಾರೆ ಎನ್ನುವುದೇ ಪೊಲೀಸರಿಗೆ ದೊಡ್ಡ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಹಳೇ ವೈಷಮ್ಯದ ಸೇಡಿಗಾಗಿ ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ವಿ.ಕೆ.ಗುರುಸ್ವಾಮಿ ಸಾಮಾನ್ಯದವನಲ್ಲ. ತಮಿಳುನಾಡಿನ ಕಿರೈತುರೈನ ನಟೋರಿಯಸ್ ರೌಡಿಶೀಟರ್. ಅಷ್ಟೇ ಅಲ್ಲ ಸಿಎಂ ಸ್ಟಾಲಿನ್ ಸಹೋದರ ಅಳಗಿರಿ ಆಪ್ತನೂ ಹೌದು.. ರಾಜಕೀಯ ಜೊತೆ ರಿಯಲ್ ಎಸ್ಟೇಟ್​ನಲ್ಲಿ ಸಕ್ರಿಯನಾಗಿದ್ದ ಗುರುಸ್ವಾಮಿ, ಅಟ್ಯಾಕ್ ಪಾಂಡಿಯನ್ ಎಂಬಾತನ ವಿರೋಧಿ ಗ್ಯಾಂಗ್ ನವನಂತೆ. 30 ವರ್ಷದಿಂದ 2 ಗ್ಯಾಂಗ್​ಗಳ ನಡುವೆ ಕತ್ತಿಮಸೀತಿದ್ರಂತೆ. ಗುರುಸ್ವಾಮಿ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳಿದ್ದು, 8 ಕೊಲೆ, 7 ಕೊಲೆ ಯತ್ನ ಕೇಸ್​ಗಳು ದಾಖಲಾಗಿವೆ.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ