ಬೆಂಗಳೂರು, ಮಾರ್ಚ್.16: ಸೋಶಿಯಲ್ ಮೀಡಿಯಾ ಎಷ್ಟು ಒಳ್ಳೆಯದ್ದೋ ಅಷ್ಟೇ ಡೆಂಜರ್ ಕೂಡ. ಎಷ್ಟೇ ಸೇಫ್ ಆಗಿ ಬಳಕೆ ಮಾಡಿದ್ರು ಒಂದಲ್ಲ ಒಂದು ರೀತಿಯಲ್ಲಿ ಸೈಬರ್ ವಂಚನೆಗೆ (Cyber Crime) ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ಈಗ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಐಷಾರಾಮಿ ಬೈಕ್ ಪೋಸ್ಟ್ ಹಾಕಿ, ಇದು ಇಷ್ಟು ಬೆಲೆ. ನೀವೆಲ್ಲಾ ಒಬ್ಬೊಬ್ಬರು 1 ರೂಪಾಯಿ ದಾನ ಮಾಡಿದ್ರೇ ಈ ಬೈಕ್ ತೆಗೆದುಕೊಳ್ಳುತ್ತೇನೆ ಅಂತಾ ಪೋಸ್ಟ್ ಹಾಕಿ ದಾನ ಮಾಡಲು ಕ್ಯೂಆರ್ ಕೋಡ್ ಸಹ ನೀಡ್ತಿದ್ದಾರೆ. ಆದರೆ ಹಣ ಪೇ ಮಾಡಿದ್ರೇ ನಿಮ್ಮ ಮೊಬೈಲ್ ಹ್ಯಾಕ್ ಆಗಬಿಡುತ್ತದೆ.
1 ರೂಪಾಯಿ ದಾನ ಮಾಡಿದ್ರೇ ಈ ಬೈಕ್ ತೆಗೆದುಕೊಳ್ಳುತ್ತೇನೆ ಎಂಬ ಪೋಸ್ಟ್ ನೋಡಿ ಒಂದು ರೂಪಾಯಿ ತಾನೇ ಪಾಪಾ ಅಂತಾ ಹಾಕೋರು ನಮ್ಮ ನಡುವೆ ಇದ್ದಾರೆ. ಅದ್ರೆ ಗೊತ್ತಿಲ್ಲದೆ ಕ್ಯೂಆರ್ ಕೋಡ್ ಮೂಲಕ ಹಣ ಸೆಂಡ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು, ಅಷ್ಟೇ ಅಲ್ಲ ಕ್ಯೂ ಆರ್ ಕೋಡ್ ನಲ್ಲಿ ಮಾಲ್ ವೇರ್ ವೈರಸ್ ಇದ್ರೆ ನಿಮ್ಮ ಇಡೀ ಮೊಬೈಲ್, ಡೇಟಾ ಮಾತ್ರವಲ್ಲ ಗೂಗಲ್ ಅಕೌಂಟ್ ಗಳು ಸಹ ಹ್ಯಾಕ್ ಆಗಿ ನಿಮ್ಮ ಕಂಪ್ಲೀಟ್ ಡಿಟೈಲ್ಸ್ ಕದಿಯುವಂತಹ ಸಾಧ್ಯತೆಗಳು ಹೆಚ್ಚು, ಹೀಗಾಗಿ ಇಂತಹುಗಳಿಂದ ದೂರ ಇರಿ ಎಂದು ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಬಿಡಿ ಎಂದು ಈಶ್ವರಪ್ಪನ್ನು ವಿನಂತಿಸುವೆ: ಬಿವೈ ವಿಜಯೇಂದ್ರ
ಇನ್ನು ಜನರು ಸಹ ಎಚ್ಚರಿಕೆಯಿಂದ ಇರಬೇಕು, ಈ ಮಾಡ್ರನ್ ಬೆಗ್ಗರ್ಸ್ ಯಾರು ಏನೂ ಅನ್ನೋ ಮಾಹಿತಿ ಇರೋದಿಲ್ಲ. ಸಹಾಯ ಮಾಡಲು ಹೋಗಿ ಹಣ ಕಳೆದುಕೊಳ್ಳುವ ಚಾನ್ಸ್ ಹೆಚ್ಚಾಗಿರುತ್ತೆ, ಈ ಹಿಂದೆಯೂ ಈ ರೀತಿ ಅನೇಕ ಘಟನೆಗಳ ನಡೆದಿದೆ, ಗೊತ್ತಿಲ್ಲದ ವೆಬ್ ಸೈಟ್ ನಲ್ಲಿ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತೆ ಅಂತಾ ಅಲ್ಲೂ ಹಣ ಪೇ ಮಾಡಿ ಹಣ ಕಳೆದುಕೊಳ್ಳೋರು ಇದ್ದಾರೆ. ಅದನೆಲ್ಲ ಮಾಡಬೇಡಿ ಅಂತಾ ಜನರಿಗೆ ಸೈಬರ್ ತಜ್ಞರು ಎಚ್ಚರಿಕೆ ನೀಡಿದ್ದಾರೆ, ಮತ್ತೊಂದೆಡೆ ಸೋಶಿಯಲ್ ಮೀಡಿಯಾ ಯೂಸ್ ಮಾಡುವ ಯುವಸಮೂಹವು ಈ ರೀತಿಯಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ನೋಡ್ತಿದ್ದೀವಿ ಆದರೆ ನಾವು ಯಾರಿಗೋ ಹಣ ಹಾಕಲು ಹೋಗಿ ನಮ್ಮ ಅಕೌಂಟ್ ನಲ್ಲಿರುವ ಹಣವನ್ನೆಲ್ಲ ಹ್ಯಾಕರ್ಸ್ ಮಿಸ್ ಯೂಸ್ ಮಾಡಬಹುದು ಎಂದು ಯುವತಿಯೊಬ್ಬರು ಅಳಲು ತೋಡಿಕೊಂಡರು.
ಒಟ್ನಲ್ಲಿ ಇಂತಹ ಮಾಡ್ರನ್ ಬೆಗ್ಗರ್ಸ್ ಗಳ ಪೋಸ್ಟ್ ಗಳಿಗೆ ಉತ್ತೇಜನ ನೀಡಬೇಡಿ, ಫೇಸ್ ಬುಕ್ ವಾಟ್ಸ್ ಆಫ್ ಇನ್ಸ್ಟಾ ಅಂತಾ ಸೋಶಿಯಲ್ ಮೀಡಿಯಾ ಯುಸ್ ಮಾಡೋರು ಗೊತ್ತಿಲ್ಲದವರಿಗೆ ಹಣ ನೀಡೋದಕ್ಕೆ ಹೋಗಿ ನಿಮ್ಮ ಹಣ ಕಳೆದುಕೊಳ್ಳಬಹುದು ಹುಷಾರ್.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ