ಬೆಂಗಳೂರು: ಕುಡಿದ ಮತ್ತಿನಲ್ಲಿ ಶಾಲಾ ಬಸ್​​ ಚಾಲನೆ, ಓರ್ವ ಸಾವು

ಕಂಠಪೂರ್ತಿ ಕುಡಿದು ಶಾಲಾ ಬಸ್​​ ಚಾಲನೆ ಮಾಡಿ ಪಾದಚಾರಿಗೆ ಗುದ್ದಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಶಾಲಾ ಬಸ್​​ ಚಾಲನೆ, ಓರ್ವ ಸಾವು
ಶಾಲಾ ಬಸ್​ ಅಪಘಾತ
Updated By: ವಿವೇಕ ಬಿರಾದಾರ

Updated on: Oct 13, 2023 | 11:28 AM

ಬೆಂಗಳೂರು ಅ.13: ನಗರದ ದೊಡ್ಡಬಾಣಸವಾಡಿ (Doddabansawadi) ಬಳಿ ಕುಡಿದು ಶಾಲಾ ಬಸ್​ (School Bus)​ ಚಾಲನೆ ಮಾಡಿ ಪಾದಚಾರಿಗೆ ಗುದ್ದಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾನೆ. ಆಂಜಿನಪ್ಪ ಮೃತ ವ್ಯಕ್ತಿ. ಚಾಲಕ ಸುಭಾಷ್ (30) ಕುಡಿದು ಶಾಲಾ ಬಸ್​ ಚಲಾಯಿಸುತ್ತಿದ್ದ ವ್ಯಕ್ತಿ. ಚಾಲಕ ಸುಭಾಷ್ ಅಕ್ಟೋಬರ್ 10 ರಂದು ಕಂಠಪೂರ್ತಿ ಕುಡಿದು 25 ಮಕ್ಕಳನ್ನು ಕೂರಿಸಿಕೊಂಡು ದೊಡ್ಡಬಾಣಸವಾಡಿ ಬಳಿ ಬಸ್​​ ​ಚಾಲನೆ ಮಾಡುತ್ತಿದ್ದಾಗ ಮೆಡಿಕಲ್ ಶಾಪ್​ನಿಂದ ಮನೆಗೆ ತೆರಳುತ್ತಿದ್ದ ಆಂಜಿನಪ್ಪಗೆ ಗುದ್ದಿದ್ದಾನೆ.

ಇದಕ್ಕೂ ಮೊದಲು ಆರೋಪಿ ಸುಭಾಷ್ ಓರ್ವ ಮಹಿಳೆಗೆ ಗುದ್ದಿದ್ದನು. ಅಪಘಾತದಲ್ಲಿ ಗಾಯಗೊಂಡಿದ್ದ ಆಂಜಿನಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಕ್ಟೋಬರ್ 11 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಣಸವಾಡಿ ಸಂಚಾರಿ ಪೊಲೀಸರು ಆರೋಪಿ ಚಾಲಕ ಸುಭಾಷ್​​ನನ್ನು ಬಂಧಿಸಿದ್ದಾರೆ.

ಆರ್​.ಆರ್​ ನಗರ ಪಾರ್ಕ್​ನಲ್ಲಿ ಯುಕ ಆತ್ಮಹತ್ಯೆ

ಆರ್​.ಆರ್​.ನಗರ ಠಾಣಾ ವ್ಯಾಪ್ತಿಯಲ್ಲಿರುವ ಪಾರ್ಕ್​​ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಾರ್ಕ್​ನ ಕುಟಿರದ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸ್ಥಳಕ್ಕೆ ಆರ್​.ಆರ್​ ನಗರ ಪೊಲೀಸರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಶಾಲಾ ಬಸ್​ನಿಂದ ತಲೆ ಹೊರಹಾಕಿ ಸ್ನೇಹಿತರೊಂದಿಗೆ ಮಾತನಾಡುತ್ತಿರುವಾಗ ಹೊರಟ ಬಸ್, ಕಂಬಕ್ಕೆ ತಲೆ ತಗುಲಿ ಬಾಲಕಿ ಸಾವು

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮಿನಿ ಬಸ್ ಡಿಕ್ಕಿ

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮಿನಿ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮಾದನಾಯಕನಹಳ್ಳಿಯಲ್ಲಿ ಘಟನೆ ನಡೆದಿದೆ. ಅತ್ತಿಬೆಲೆಯ ನಾಗೇಶ್ (33) ಮೃತ ದುರ್ದೈವಿ. ಲಾರಿ ಸಮೇತವಾಗಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ