ಬೆಂಗಳೂರು, ಸೆಪ್ಟೆಂಬರ್ 28: ಸಾಲು ಸಾಲು ರಜೆಯ ಕಾರಣ ಜನ ಊರುಗಳತ್ತ ಮುಖಮಾಡಿದ್ದರಿಂದ ಬುಧವಾರ ಬೆಂಗಳೂರಿನ ವಿವಿಧೆಡೆ ಸಂಚಾರ ದಟ್ಟಣೆ ಉಂಟಾಗಿದ್ದು (Bangalore traffic jam) ಭಾರೀ ಸುದ್ದಿಯಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಬೆಂಗಳೂರಿನ ಟ್ರಾಫಿಕ್ ಜಾಮ್ ಮತ್ತು ನಿಧಾನಗತಿಯ ಸಂಚಾರದ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಕೆಲವೇ ಕಿಲೋಮೀಟರ್ ದೂರ ಕ್ರಮಿಸಲೂ ಸವಾರರು ಗಂಟೆಗಟ್ಟಲೆ ಸಮಯ ವಿನಿಯೋಗಿಸಬೇಕಾಗಿ ಬಂದಿತ್ತು. ಇದೇ ವೇಳೆ, ಟ್ರಾಫಿಕ್ ಜಾಮ್ನಲ್ಲಿ ಸಿಕ್ಕಿಹಾಕಿಕೊಂಡ ಕಾರು ಚಾಲಕರೊಬ್ಬರು ಲೈವ್ ಲೊಕೇಷನ್ ಆಧಾರದಲ್ಲಿ ಪಿಜ್ಜಾಗೆ ಆರ್ಡರ್ ಮಾಡಿ ತರಿಸಿಕೊಂಡ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಸಿಲಿಕಾನ್ ಸಿಟಿಯ ಔಟರ್ ರಿಂಗ್ ರಸ್ತೆಯಲ್ಲಿ ಬುಧವಾರ ಟ್ರಾಫಿಕ್ ಜಾಮ್ ಆಗಿತ್ತು. ಸುಮಾರು 4-5 ಗಂಟೆಗಳ ಕಾಲ ಸ್ಲೋ ಮೂವಿಂಗ್ ಟ್ರಾಫಿಕ್ ಇತ್ತು. ಪರಿಣಾಮವಾಗಿ ವಾಹನಗಳು ಗಂಟೆಗಟ್ಟಲೆ ನಿಂತಲ್ಲೇ ನಿಂತಿದ್ದವು. ವೈಟ್ ಫೀಲ್ಡ್, ಐಟಿಪಿಎಲ್, ಮಾರತಹಳ್ಳಿ, ಬೆಳ್ಳಂದೂರು ಕಡೆಗಳಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಟ್ರಾಫಿಕ್ನಲ್ಲೇ ಕಾರು ಚಾಲಕರೊಬ್ಬರು ಪಿಜ್ಜಾ ಆರ್ಡರ್ ಮಾಡಿದ್ದಾರೆ!
ಕಾರು ಚಾಲಕ ಲೈವ್ ಲೊಕೇಷನ್ ಹಾಕಿ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಅವರಿಗೆ, ಲೈವ್ ಲೊಕೇಷನ್ ನೋಡಿಕೊಂಡು ಸಿಬ್ಬಂದಿ ಪಿಜ್ಜಾ ತಂದು ಕೊಟ್ಟಿದ್ದಾರೆ. ಪಿಜ್ಜಾ ತಂದು ಕೊಡೋ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಸೆ. 27ರ ಸಂಜೆ ನಾಲ್ಕು ಗಂಟೆಗೆ ಶಾಲೆ ಬಿಟ್ಟ ಮಕ್ಕಳು ಮನೆಗೆ ತಲುಪಿದ್ದು ರಾತ್ರಿ ಎಂಟಕ್ಕೆ !!
. @rishivaths ordered from @dominos during the Bangalore traffic. Who were kind enough to track their live location (a few metres away from our random location added in the traffic) and deliver to them in the traffic jam. pic.twitter.com/dZk4qTfGIk
— Kamran (@CitizenKamran) September 28, 2023
ಕಮ್ರಾನ್ ಎಂಬವರು ವಿಡಿಯೋವನ್ನು ಶೇರ್ ಮಾಡಿದ್ದು, ‘ರಿಶಿವತ್ಸ್ ಅವರು ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿದ್ದಾಗ ಡೊಮಿನೋಸ್ನಿಂದ ಪಿಜ್ಜಾ ಆರ್ಡರ್ ಮಾಡಿದರು. ಲೈವ್ ಲೊಕೇಷನ್ ನೀಡಿದ್ದರು. ಸಂಚಾರ ದಟ್ಟಣೆಯ ಮಧ್ಯೆಯೇ ಡೊಮಿನೋಸ್ ಸಿಬ್ಬಂದಿ ಅವರಿಗೆ ಪಿಜ್ಜಾ ಕೊಟ್ಟು ಹೋದರು’ ಎಂದು ಉಲ್ಲೇಖಿಸಿದ್ದಾರೆ.
ವಿಡಿಯೋಗೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ