ಆರೋಪಿ ಬಾಯ್ಬಿಟ್ಟ ಸ್ಫೋಟಕ ಸಂಗತಿ; ಡ್ರಗ್ಸ್ ಪೆಡ್ಲರ್ ಜೊತೆ ಸೆಲೆಬ್ರಿಟಿಗಳ ಲಿಂಕ್, ನೋಟಿಸ್ ನೀಡಿ ವಿಚಾರಣೆಗೆ ಸಿದ್ಧತೆ

| Updated By: ಆಯೇಷಾ ಬಾನು

Updated on: Aug 18, 2021 | 11:09 AM

ಡ್ರಗ್ಸ್ ಕೇಸ್ನಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಸ್ಯಾಂಡಲ್ ವುಡ್ ಸೇರಿ ಹಲವರ ಪರಿಚಯವಿದೆಯಂತೆ. ಇದೀಗ ಅವರನೆಲ್ಲ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸಲು ಗೋವಿಂದಪುರ ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಬಂಧಿತ ವಿದೇಶಿ ಪ್ರಜೆ ಥಾಮಸ್ ಜೊತೆ ಸೆಲೆಬ್ರಿಟಿಗಳ ಒನ್ ಟು ಒನ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಆರೋಪಿ ಬಾಯ್ಬಿಟ್ಟ ಸ್ಫೋಟಕ ಸಂಗತಿ; ಡ್ರಗ್ಸ್ ಪೆಡ್ಲರ್ ಜೊತೆ ಸೆಲೆಬ್ರಿಟಿಗಳ ಲಿಂಕ್, ನೋಟಿಸ್ ನೀಡಿ ವಿಚಾರಣೆಗೆ ಸಿದ್ಧತೆ
ನೈಜೀರಿಯಾ ಪ್ರಜೆ ಥಾಮಸ್
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ವಿದೇಶಿ ಡ್ರಗ್ಸ್ ಪೆಡ್ಲರ್ ಜೊತೆ ಸೆಲೆಬ್ರಿಟಿಗಳ ಲಿಂಕ್ ಕೇಳಿ ಬಂದಿದೆ. ಗೋವಿಂದಪುರ ಪೊಲೀಸರಿಂದ ನೈಜೀರಿಯಾ ಪ್ರಜೆ ಥಾಮಸ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಯ ಪ್ರೈಮರಿ ಕಾಂಟ್ಯಾಕ್ಟ್ನಲ್ಲಿ ಸೆಲೆಬ್ರಿಟಿಗಳಿದ್ದಾರೆಂದು ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಮಾಹಿತಿ ಗೊತ್ತಾಗಿದೆ.

ಡ್ರಗ್ಸ್ ಕೇಸ್ನಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಸ್ಯಾಂಡಲ್ ವುಡ್ ಸೇರಿ ಹಲವರ ಪರಿಚಯವಿದೆಯಂತೆ. ಇದೀಗ ಅವರನೆಲ್ಲ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸಲು ಗೋವಿಂದಪುರ ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಬಂಧಿತ ವಿದೇಶಿ ಪ್ರಜೆ ಥಾಮಸ್ ಜೊತೆ ಸೆಲೆಬ್ರಿಟಿಗಳ ಒನ್ ಟು ಒನ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಆರೋಪಿ ಹಲವು ಪಾರ್ಟಿಗಳಿಗೆ ಎಕ್ಸ್ಟಸಿ ಮಾತ್ರೆ ಸಪ್ಲೈ ಮಾಡಿದ್ದಾನೆ. ಉದ್ಯಮಿಗಳು, ವಿದ್ಯಾರ್ಥಿಗಳು ಸೇರಿ ಗಣ್ಯ ವ್ಯಕ್ತಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ವಿಚಾರಣೆ ವೇಳೆ ಆರೋಪಿ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳನ್ನ ಪ್ರಸ್ತಾಪಿಸಿದ್ದಾನೆ. ಪೆಡ್ಲರ್ ಥಾಮಸ್ ಬಂಧನ ಬೆನ್ನಲ್ಲೇ ಸೆಲೆಬ್ರಿಟಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಗೋವಿಂದಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಂಧಿತ ವಿದೇಶಿ ಪ್ರಜೆ ಬಳಿ 15 ಲಕ್ಷ ಮೌಲ್ಯದ 403 ಎಕ್ಸ್ಟಸಿ ಮಾತ್ರೆ ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಹಿಂದೆ ಡ್ರಗ್ಸ್‌ ಪ್ರಕರಣದಲ್ಲಿ ನಿರ್ಮಾಪಕ ಶಂಕರ್‌ ಗೌಡರನ್ನು ಬಂಧಿಸಲಾಗಿತ್ತು. ಗೋವಿಂದಪುರ ಡ್ರಗ್ಸ್‌ ಕೇಸ್‌ನಲ್ಲಿ ಪೊಲೀಸರಿಂದ ಶಂಕರ್​ ಗೌಡ ಅರೆಸ್ಟ್ ಆಗಿದ್ದರು. ಇದಲ್ಲದೆ, ‌NDPS ಌಕ್ಟ್‌ 25, 27A, 29ರಡಿ ಮೊಕದ್ದಮೆ ದಾಖಲಾಗಿತ್ತು. ಮಾ.8ರಂದು ಶಂಕರ್‌ ಗೌಡ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಗೋವಿಂದಪುರ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಸಹ ನಡೆಸಿದ್ದರು. ಇದಲ್ಲದೆ, ನಿರ್ಮಾಪಕರ ಆಪ್ತರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು.

NDPS ಌಕ್ಟ್‌ ಅಡಿ ಮೊಕದ್ದಮೆ ದಾಖಲಿಸಿ ‌NDPS ಌಕ್ಟ್‌ 25(ಅಕ್ರಮ ಚಟುವಟಿಕೆಗೆ ಸ್ಥಳಾವಕಾಶ); ‌NDPS ಌಕ್ಟ್‌ 27A(ಡ್ರಗ್ಸ್‌ ಪೆಡ್ಲರ್ಸ್‌ಗೆ ನೆರವು, ಡ್ರಗ್ಸ್‌ ಪೆಡ್ಲರ್ಸ್‌ಗೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವು) ಹಾಗೂ ಌಕ್ಟ್ 29(ಕ್ರಿಮಿನಲ್ ಉದ್ದೇಶದಿಂದ ಪಾರ್ಟಿ ಆಯೋಜನೆ) ಅಡಿ ಮೊಕದ್ದಮೆ ದಾಖಲಿಸಿದ್ದರು. ಬಳಿಕ, ಶಂಕರ್​ ಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.  ಈ ಕುರಿತು, ಕೋರಮಂಗಲದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆದೇಶ ನೀಡಿದ್ದರು.

ಇದನ್ನೂ ಓದಿ: ಪೂರ್ವ ವಿಭಾಗ ಪೊಲೀಸರಿಂದ ಕಾರ್ಯಾಚರಣೆ; 10ಕ್ಕೂ ಹೆಚ್ಚು ಮನೆ ಮಾಲೀಕರಿಗೆ ನೋಟಿಸ್