ಪೂರ್ವ ವಿಭಾಗ ಪೊಲೀಸರಿಂದ ಕಾರ್ಯಾಚರಣೆ; 10ಕ್ಕೂ ಹೆಚ್ಚು ಮನೆ ಮಾಲೀಕರಿಗೆ ನೋಟಿಸ್

ಡ್ರಗ್ಸ್ ಕೇಸ್‌ನಲ್ಲಿ ರಾಮಮೂರ್ತಿನಗರದ ಮನೆ ಸೀಜ್ ಮಾಡಲಾಗಿದೆ. ಹಾಗೂ ಗೋವಿಂದಪುರ ಪೊಲೀಸರಿಂದ ಮಾಲೀಕನಿಗೆ ನೋಟಿಸ್ ನೀಡಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ಹೆಚ್ಚಿನ ಬಾಡಿಗೆ ನೀಡಿ ವಿದೇಶಿ ಡ್ರಗ್ಸ್ ಪೆಡ್ಲರ್ಸ್ ಬಾಡಿಗೆ ಮನೆಯಲ್ಲಿ ವಾಸವಿದ್ದರು....

ಪೂರ್ವ ವಿಭಾಗ ಪೊಲೀಸರಿಂದ ಕಾರ್ಯಾಚರಣೆ; 10ಕ್ಕೂ ಹೆಚ್ಚು ಮನೆ ಮಾಲೀಕರಿಗೆ ನೋಟಿಸ್
ಪೂರ್ವ ವಿಭಾಗ ಪೊಲೀಸರಿಂದ ಕಾರ್ಯಾಚರಣೆ; 10ಕ್ಕೂ ಹೆಚ್ಚು ಮನೆ ಮಾಲೀಕರಿಗೆ ನೋಟಿಸ್
Follow us
TV9 Web
| Updated By: ಆಯೇಷಾ ಬಾನು

Updated on:Jul 09, 2021 | 10:04 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಪೂರ್ವ ವಿಭಾಗ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು ವಿದೇಶಿ ಬಾಡಿಗೆದಾರರ ಬಗ್ಗೆ ಸೂಕ್ತ ದಾಖಲೆ ಪೊಲೀಸರಿಗೆ ನೀಡದ ಮನೆ ಮಾಲೀಕರಿಗಾಗಿ ತಲಾಶ್ ನಡೆಸಿದ್ದಾರೆ.

ಡ್ರಗ್ಸ್ ಕೇಸ್‌ನಲ್ಲಿ ರಾಮಮೂರ್ತಿನಗರದ ಮನೆ ಸೀಜ್ ಮಾಡಲಾಗಿದೆ. ಹಾಗೂ ಗೋವಿಂದಪುರ ಪೊಲೀಸರಿಂದ ಮಾಲೀಕನಿಗೆ ನೋಟಿಸ್ ನೀಡಲಾಗಿದೆ. ವೀಸಾ ಅವಧಿ ಮುಗಿದಿದ್ದರೂ ಹೆಚ್ಚಿನ ಬಾಡಿಗೆ ನೀಡಿ ವಿದೇಶಿ ಡ್ರಗ್ಸ್ ಪೆಡ್ಲರ್ಸ್ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಹೀಗಾಗಿ ರಾಮಮೂರ್ತಿನಗರದಲ್ಲಿ ಆರೋಪಿಗಳು ವಾಸವಿದ್ದ ಮನೆಯನ್ನು ಸೀಜ್ ಮಾಡಿ ಮಾಲೀಕನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಇನ್ನು ಇದೇ ರೀತಿ ಆರೋಪಿಗಳು ವಾಸವಿದ್ದ ಬಾಡಿಗೆ ಮನೆ ಸೀಜ್ ಮಾಡಿ ವಿದೇಶಿಗರಿಗೆ ಮನೆ ಬಾಡಿಗೆಗೆ ನೀಡಿರುವ ಹಲವರಿಗೆ ನೋಟಿಸ್ ನೀಡಿದ್ದಾರೆ. 10ಕ್ಕೂ ಹೆಚ್ಚು ಮನೆ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದು ಇದೇ ಮೊದಲ ಬಾರಿಗೆ ಅಕ್ರಮ ವಿದೇಶಿಗರಿಗೆ ನೆಲೆಕೊಟ್ಟ ಮನೆ ಮಾಲೀಕರು ಶಾಕ್ ಆಗಿದ್ದಾರೆ.

ಹೆಣ್ಣೂರು, ರಾಮಮೂರ್ತಿನಗರ ಹಾಗೂ ಗೊವಿಂದಪುರ ಸೇರಿದಂತೆ ಹಲವು ಕಡೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ರೂಲ್ಸ್ಗೆ ಡೋಂಟ್ ಕೇರ್ ಅಂದ ಮನೆ ಮಾಲೀಕರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಸೂಕ್ತ ದಾಖಲೆ ನೀಡುವಂತೆ ಸೂಚಿಸಿದ್ದಾರೆ. ವಿದೇಶಿಗರಿಗೆ ಬಾಡಿಗೆ ನೀಡಿದ್ದರೆ ಕಡ್ಡಾಯವಾಗಿ ನಿಯಮ ಪಾಲಿಸಬೇಕು. ಸಬ್ ರಿಜಿಸ್ಟ್ರಾರ್ ಆಫಿಸ್ನ ಫಾರಂ “ಸಿ”ನಲ್ಲಿ ದಾಖಲೆ ಉಲ್ಲೇಖಿಸಬೇಕು. ಯಾರಿಂದ ಯಾರಿಗೆ ಮನೆ ಬಾಡಿಗೆ ನೀಡಲಾಗಿದೆ ಎಂಬ ಬಗ್ಗೆ ಉಲ್ಲೇಖಿಸಬೇಕು. ಜೊತೆಗೆ ಸಿ ಫಾರಂ ಮಾಹಿತಿ ಸ್ಥಳೀಯ ಪೊಲೀಸರಿಗೂ ನೀಡಬೇಕು. ವಿದೇಶಿಗರ ಸೂಕ್ತ ದಾಖಲೆಗಳನ್ನು ಸಹ ಮಾಹಿತಿ ಪಡೆಯಬೇಕು. ಇಲ್ಲವಾದಲ್ಲಿ ಮನೆ ಮಾಲೀಕರಿಗೆ ಕಂಠಕ ಕಟ್ಟಿಟ್ಟ ಬುತ್ತಿ.

ಕಳ್ಳ ಅರೆಸ್ಟ್ ಇನ್ನು ದೇವರ ಹುಂಡಿಯಲ್ಲಿ ಹಣ ಕದಿಯುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಆರ್ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ. ಕೋಲಾರದ ಕೆಜಿಎಫ್ ಮೂಲದ ರವಿಕುಮಾರ್(26) ಬಂಧಿತ ವ್ಯಕ್ತಿ. ಯಶವಂತಪುರ ಬಳಿಯ ನಾಗಮ್ಮ ದೇವಿ ಹಾಗೂ ಅಂಗಾಳ ಪರಮೇಶ್ವರಿ ದೇವಾಲಯದ ಹುಂಡಿಯನ್ನು ಹೊಡೆದು ಕಳ್ಳತನ ಮಾಡಲು ಮುಂದಾಗಿದ್ದಾನೆ. ಆದ್ರೆ ಹುಂಡಿಯಲ್ಲಿ ಹಣ ಇಲ್ಲದ್ದಕ್ಕೆ ದೇವರ ವಿಗ್ರಹದಲ್ಲಿನ ತಾಳಿ ಕದ್ದು ಪರಾರಿಯಾಗಿದ್ದ ಸದ್ಯ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ದೇವರ 2 ತಾಳಿ ಸೇರಿ ₹1.5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಮಚ್ಚು, ಲಾಂಗ್ ಆಯ್ತು ಈಗ ಪುಂಡರ ಕೈಯಲ್ಲಿ ಪಿಸ್ತೂಲ್; ದೂರು ನೀಡಿದ್ದಕ್ಕೆ ಮನೆಗೆ ನುಗ್ಗಿ ಬೆದರಿಕೆ

Published On - 10:01 am, Fri, 9 July 21

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ