
ಬೆಂಗಳೂರು, ಅಕ್ಟೋಬರ್ 13: ರಾಜಧಾನಿಯ ರಸ್ತೆಗಳಲ್ಲಿ ನಿಷೇಧಿತ ಕೋನೋ ಕಾರ್ಪಸ್ (conocarpus plants) (ದುಬೈ ಗಿಡ) ಬೆಳೆಸಲಾಗುತ್ತಿದೆ. ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಈ ದುಬೈ ಗಿಡವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೆಟ್ಟು ಪೋಷಿಸುತ್ತಿರುವ ಆರೋಪಗಳು ಕೇಳಿಬಂದಿವೆ. ಪರಿಸರ ಪ್ರಿಯರು ಕಳೆದ ವರ್ಷ ಈ ಗಿಡದ ಬಗ್ಗೆ ದೂರು ಸಲ್ಲಿಸಿದ್ದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬೆಂಗಳೂರಿನ ರಸ್ತೆಗಳಲ್ಲಿ ನಿಷೇಧಿತ ದುಬೈ ಗಿಡವನ್ನು ಬೆಳೆಸಿ ಸೈಲೆಂಟ್ ಆಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಂಧ್ರ, ಗುಜರಾತ್, ತೆಲಂಗಾಣದಲ್ಲಿ ಈಗಾಗಲೇ ಈ ಡೇಂಜರ್ ಗಿಡವನ್ನು ಬ್ಯಾನ್ ಮಾಡಲಾಗಿದೆ. ಆದರೆ ವರ್ಷ ಕಳೆದರೂ ಬೆಂಗಳೂರಿನ ರಸ್ತೆಗಳಲ್ಲಿ ತೆರವಾಗಿಲ್ಲ. ಒಟ್ಟು 5500 ದುಬೈ ಗಿಡಗಳನ್ನ ತನ್ನ ವ್ಯಾಪ್ತಿಯಲ್ಲಿ ಜಿಬಿಎ ಬೆಳೆಸಿದೆ. ನಿರ್ವಹಣೆ ಸುಲಭ ಎಂದು ಇದೇ ಗಿಡಗಳ ಪೋಷಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: 4 ವರ್ಷಗಳ ಕಾಲ ಖಿನ್ನತೆಗೆ ಒಳಗಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ, ಅದರಿಂದ ಹೊರಬಂದದ್ದು ಹೇಗೆ ಗೊತ್ತಾ?
ಈಗಾಗಲೇ ಬೆಂಗಳೂರಿನ ರಸ್ತೆಗಳಲ್ಲಿ ದುಬೈ ಗಿಡ ಆಳೆತ್ತರ ಬೆಳೆದು ನಿಂತಿವೆ. ಈ ದುಬೈ ಗಿಡ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎನ್ನಲಾಗುತ್ತಿದೆ. ಅಸ್ತಮಾ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಈ ಡೇಂಜರ್ ಟ್ರೀ ಆಕ್ಸಿಜನ್ ಬದಲು ಕಾರ್ಬನ್ ಡೈಆಕ್ಸೈಡ್ ರಿಲೀಸ್ ಮಾಡುತ್ತದೆ.
ಸದ್ಯ ರಾಜಧಾನಿಯ ರಸ್ತೆಗಳಲ್ಲಿ ಬೆಳೆಸಿರುವ ಈ ದುಬೈ ಗಿಡ ತೆರವಿಗೆ ಪರಿಸರ ಪ್ರೇಮಿಗಳಿಂದ ಆಗ್ರಹಿಸಲಾಗಿದೆ. ಇತ್ತ ದುಬೈ ಗಿಡ ಬೆಳೆಯದಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೂ ರಾಜಧಾನಿಯಲ್ಲಿ ಈವರೆಗೆ ತೆರವಾಗಿಲ್ಲ.
ಇನ್ನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ, ಸರ್ಕಾರದ ಸೂಚನೆ ಬಂದ ಮೇಲೆ ಮುಂದಿನ ಕ್ರಮ ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ನೀಡಿದೆ, ಇಲ್ಲಿ ಸೂಚನೆ ಬಂದರೆ ಕ್ರಮಕೈಗೊಳ್ಳುತ್ತೇವೆ ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:58 pm, Mon, 13 October 25