AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಸಿ ಮದ್ವೆಯಾಗಲು ಹಿಂಜರಿದ ಪ್ರಿಯತಮೆಯನ್ನು ಎತ್ತಾಕೊಂಡು ಹೋದ ಪ್ರಿಯಕರ

ಬೆಂಗಳೂರಿನಲ್ಲಿ ಯುವತಿಯೊಬ್ಬಳು ಮೆಕ್ಯಾನಿಕ್ ರಂಗ ಎಂಬ ಕೊಲೆಗಾರನ್ನು ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಪ್ರೀತಿ ಮಾಡುತ್ತಿದ್ದಳು. ಮೆಕ್ಯಾನಿಕ್ ರಂಗ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಯುವತಿ ಆತನಿಂದ ದೂರವಾಗಲು ಪ್ರಯತ್ನಿಸಿದ್ದಾಳೆ. ಇದರಿಂದ ಕೆರಳಿದ ರಂಗ, ಯುವತಿ ಮತ್ತು ಆಕೆಯ ಕುಟುಂಬಕ್ಕೆ ಕಿರುಕುಳ ನೀಡಿ, ಕತ್ತುಕಿಗೆ ಚಾಕು ಇಟ್ಟು ಕಿಡ್ನಾಪ್ ಮಾಡಿದ್ದಾನೆ. ಇದೀಗ ಸುಬ್ರಹ್ಮಣ್ಯಪುರ ಪೊಲೀಸರು ರಂಗನನ್ನು ಬಂಧಿಸಿದ್ದಾರೆ.

ಅಕ್ಷಯ್​ ಪಲ್ಲಮಜಲು​​
|

Updated on: Oct 13, 2025 | 5:36 PM

Share

ಬೆಂಗಳೂರು, ಅ.13: ಬೆಂಗಳೂರಿನಲ್ಲಿ ಸಿನಿಮಾವನ್ನು ಮೀರಿಸುವಂತಹ ಲವ್ & ಕಿಡ್ನಾಪ್ (Bengaluru kidnapping) ಪ್ರಕರಣವೊಂದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ಪ್ರೀತಿಸುತ್ತಿದ್ದ ಯುವತಿ ಮದುವೆಗೆ ನಿರಾಕರಿಸಿದ್ದಳು ಎಂದು ಮೆಕ್ಯಾನಿಕ್ ರಂಗ ಕಿಡ್ನಾಪ್ ಮಾಡಿದ್ದಾನೆ. ರಂಗನ ಕ್ರಿಮಿನಲ್ ಹಿನ್ನೆಲೆ ಮತ್ತು ಕೊಲೆ ಪ್ರಕರಣಗಳು ತಿಳಿದು ಯುವತಿ ಆತನ ಸಂಪರ್ಕದಿಂದ ದೂರು ಹೋಗಿದ್ದಾಳೆ. ಮೆಕ್ಯಾನಿಕ್ ರಂಗ ಮತ್ತು ಯುವತಿ ಸುಮಾರು ಎರಡು ವರ್ಷಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ರಂಗ ವೀಲಿಂಗ್ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಿದ್ದ, ಈ ವೇಳೆ ಯುವತಿ ಇನ್ಸ್ಟಾದಲ್ಲಿ ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ನಂತರ ರಂಗ ಯುವತಿಗೆ ಮದುವೆಯ ಪ್ರಪೋಸಲ್ ಸಹ ಇಟ್ಟಿದ್ದನು. ಆದರೆ, 2024ರ ಫೆಬ್ರವರಿಯಲ್ಲಿ ರಂಗ ತನ್ನ ಸ್ನೇಹಿತ ಚೇತನ್‌ಗಾಗಿ ಭದ್ರ ಎಂಬಾತನನ್ನು ಕೊಲೆ ಮಾಡಿದ್ದನು. ಈ ವಿಚಾರವಾಗಿ ಬ್ಯಾಟರಾಯನಪುರ ಪೊಲೀಸರು ದೂರು ದಾಖಲಿಸಿಕೊಂಡ, ರಂಗನನ್ನು ಬಂಧಿಸಿದರು.

ರಂಗ ಜೈಲುಪಾಲಾಗಿರುವ ವಿಷಯ ತಿಳಿದು ಯುವತಿಗೆ ಆಘಾತಕ್ಕೆ ಒಳಗಾಗಿದ್ದಳು, ರಂಗನ ಕ್ರಿಮಿನಲ್ ಹಿನ್ನೆಲೆಯ ಬಗ್ಗೆ ಅರಿತ ಯುವತಿ, ಆತನೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲ ಎಂದು ತಿಳಿದು, ಆತ ಜೈಲು ಸೇರುತ್ತಿದ್ದಂತೆ, ಯುವತಿ ಆತನಿಂದ ದೂರು ಹೋಗಲು ಮುಂದಾಗಿದ್ದಾಳೆ. ಯುವತಿ ರಂಗನ ಮೊಬೈಲ್ ನಂಬರ್, ಸೋಶಿಯಲ್​ ಮೀಡಿಯಾ ಸಂಪರ್ಕ ಸೇರಿದಂತೆ ಎಲ್ಲವನ್ನೂ ಬ್ಲಾಕ್ ಮಾಡಿ, ತನ್ನ ಇನ್‌ಸ್ಟಾಗ್ರಾಂ ಖಾತೆಯನ್ನೂ ಡಿಲೀಟ್ ಮಾಡಿದ್ದಳು. ಯುವತಿ ತಾನು ನಿನ್ನ ಜತೆಗೆ ಸಂಬಂಧ ಬೆಳೆಸಲು ಸಾಧ್ಯವಿಲ್ಲ ಎಂದು ರಂಗನಿಗೆ ನೇರವಾಗಿ ತಿಳಿಸಿದ್ದಾಳೆ. ನಂತರ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ರಂಗ, ಮದುವೆಯಾಗುವಂತೆ ಯುವತಿಗೆ ಕಿರುಕುಳ ನೀಡಿದ್ದಾನೆ. ಪ್ರತಿದಿನ ಲವ್ ಮಾಡು, ಲವ್ ಮಾಡು ಎಂದು ಆಕೆಗೆ ಮಾನಸಿಕ ಕಿರುಕುಳ ನೀಡಿದ್ದ ಎಂದು ಹೇಳಲಾಗಿದೆ. ಆದರೆ ಯುವತಿ ಆತನ ಯಾವುದೇ ಮಾತಿಗೂ ಒಪ್ಪಿಲ್ಲ, ಅದರೂ ರಂಗ ಆಕೆಯ ಬೆನ್ನು ಬಿಡದೆ ಕಾಲೇಜಿನ ಬಳಿ ಹೋಗಿ ಫಾಲೋ ಮಾಡುತ್ತಿದ್ದನು.

ಇದನ್ನೂ ಓದಿ: ಬೆಂಗಳೂರಲ್ಲಿ ಹೆಚ್ಚಾಯ್ತು ಕಾಮುಕರ ಹಾವಳಿ; ಕೆಎಸ್ಆರ್ಟಿಸಿ ಬಸ್​ನಲ್ಲಿ ವೈದ್ಯೆಗೆ ಕಿರುಕುಳ ನೀಡಿದವನ ಬಂಧನ 

ಇಲ್ಲಿದೆ ನೋಡಿ ವಿಡಿಯೋ

ಯುವತಿ ಕುಟುಂಬಕ್ಕೂ ಕಿರುಕುಳ ನೀಡಿದ್ದನು. ಈ ಯಾವ ಬೆದರಿಕೆಗೂ ಯುವತಿ ಜಗ್ಗದಿದ್ದಾಗ, ರಂಗ ತನ್ನ ಸ್ನೇಹಿತರೊಂದಿಗೆ ಸೇರಿ ಪ್ರಿಯತಮೆಯ ಮನೆಗೆ ನುಗ್ಗಿ ಪ್ರಿಯತಮೆಯ ತಾಯಿಯ ಮೇಲೆ ಮಚ್ಚು ಬೀಸಿ ಹಲ್ಲೆ ನಡೆಸಲು ಯತ್ನಿಸಿದ್ದ, ನಂತರ ಸಿನಿಮೀಯ ರೀತಿಯಲ್ಲಿ ನಡುರಸ್ತೆಯಲ್ಲೇ ಯುವತಿಯ ಕುತ್ತಿಗೆಗೆ ಚಾಕು ಇಟ್ಟು, ಲಾಂಗ್ ತೋರಿಸಿ ಕಿಡ್ನಾಪ್ ಮಾಡಿದ್ದಾನೆ. ಈ ಘಟನೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಕಾರ್ಯಾಚರಣೆ ನಡೆಸಿದ್ದಾರೆ. ಕೃತ್ಯ ನಡೆದ ಕೇವಲ 12 ಗಂಟೆಗಳ ಒಳಗೇ ಆರೋಪಿ ರಂಗ ಮತ್ತು ಆತನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ